ಸಾರಿಗೆ ನೌಕರರ ಬೇಡಿಕೆ ಈಡೇರಿಸಲು ಆಯೋಗ ರಚಿಸಿ

ಧಾರವಾಡ 28: ಸಾರಿಗೆ ನೌಕರರನ್ನು ಸಕರ್ಾರಿ ನೌಕರರನ್ನಾಗಿ ಮಾಡುವ ಕುರಿತು ಹಾಗೂ ಸಕರ್ಾರಿ ಪಿಂಚಣಿ, ಸೌಲಭ್ಯ ನೀಡುವ ಕುರಿತು ಈ ಕೂಡಲೇ ಒಂದು ಆಯೋಗ ರಚಿಸಿ ಎಂದು ನಾಡೋಜ ಡಾ. ಪಾಟೀಲ ಪುಟ್ಟಪ್ಪ ಅವರು ಮುಖ್ಯಮಂತ್ರಿ ಎಚ್. .ಡಿ.ಕುಮಾರಸ್ವಾಮಿಯವರನ್ನು ಪತ್ರ ಬರೆದು ಒತ್ತಾಯಿಸಿದ್ದಾರೆ

ಪತ್ರದಲ್ಲಿ ಶ್ರಮಜೀವಿ ಸಾರಿಗೆ ನೌಕರರ ಬೇಡಿಕೆಗಳನ್ನು ಈಡೇರಿಸಿಕೊಡಿರೆಂದು ಹಿಂದೆಯೂ ಪತ್ರ ಬರೆದಿದ್ದೆ. ಚಳಿಗಾಲ ಅಧಿವೇಶನ ಸಂದರ್ಭದಲ್ಲಿ ಸಾರಿಗೆ ನೌಕರರ ಬೇಡಿಕೆಗಳನ್ನು ತೊಂಭತ್ತು ದಿವಸಗಳೊಳಗೆ ಈಡೇರಿಸಿ ಸಕರ್ಾರದ ಗೌರವವನ್ನು ಉಳಿಸಿಕೊಳ್ಳಿರೆಂದು ಡಿ. 23ರಂದು ಕೆ.ಎಸ್.ಆರ್.ಟಿ.ಸಿ. ನಿಗಮಗಳ ನೌಕರರ ಮೂಲಭೂತ ಹಕ್ಕುಗಳ ವಿಚಾರ ವೇದಿಕೆಯ ಪ್ರತಿನಿಧಿಗಳ ಜೊತೆ ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದೆ. ಆ ಪತ್ರಿಕಾಗೋಷ್ಠಿಯನ್ನಾಧರಿಸಿ ಸಾರಿಗೆ ಸಚಿವರು, ನೌಕರರನ್ನು ಸಕರ್ಾರಿ ನೌಕರರೆಂದು ಪರಿಗಣಿಸಲಾಗುವುದಿಲ್ಲ. ಒಂದು ವೇಳೆ ಪರಿಗಣಿಸಿದ್ದೇ ಆದಲ್ಲಿ ಸಕರ್ಾರದ ಖಜಾನೆಗೆ ಹೊರೆ ಬೀಳುತ್ತದೆ ಎಂದು ಬಾಲಿಷ ಹೇಳಿಕೆ ನೀಡಿರುತ್ತಾರೆ. ಸಾರಿಗೆ ಸಚಿವರ ಈ ಹೇಳಿಕೆಯನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ. ಸಚಿವರು ಈ ವಿಷಯವನ್ನಾಧರಿಸಿ, ಸಭೆ ಕರೆದು ಮಾತುಕತೆ ನಡೆಸಿ, ವಿಚಾರ ಚಚರ್ೆಗೊಳಪಡಿಸಿ, ಪರಿಣಿತರಿಂದ ಸಲಹೆ ಪಡೆದು ಹೇಳಿಕೆ ನೀಡಿದ್ದರೆ ಹೌದೆನ್ನಬಹುದಾಗಿತ್ತು. ಆದರೆ ಇದ್ಯಾವುದನ್ನು ಮಾಡದೇ ಮನಬಂದಂತೆ ಮಾತಾಡಿರುವುದು ಸಚಿವರ ಸ್ಥಾನಮಾನಕ್ಕೆ ಸರಿ ಅಲ್ಲ. ಅವರ ಈ ಹೇಳಿಕೆಯಿಂದ ವೈಯಕ್ತಿಕವಾಗಿ ನನಗೆ ಹಾಗೂ 1.25.000 ಸಾರಿಗೆ ನೌಕರರ ಮನಸ್ಸಿಗೆ ನೋವು ಉಂಟುಮಾಡಿದೆ. ಸಾರಿಗೆ ನೌಕರರ ಬಗ್ಗೆ ಹಾಗೂ ಸಾರಿಗೆ ಇಲಾಖೆಯ ಬಗ್ಗೆ ಸಂಪೂರ್ಣ ಜ್ಞಾನ ಹೊಂದದೇ ಇಂಥ ಹೇಳಿಕೆಗಳನ್ನು ನೀಡುವಾಗ ಸಚಿವರು ಎಚ್ಚರವಹಿಸಬೇಕು. 

ರಾಜ್ಯದ ಜನತೆಗೆ ಉತ್ತಮ ಸಾರಿಗೆ ಸಂಪರ್ಕಕಲ್ಪಿಸುವುದು ಸಕರ್ಾರದ ಧರ್ಮ. ಈ ಕೆಲಸವನ್ನು ಅತ್ಯಂತ ನಿಷ್ಠೆ ಪ್ರಾಮಾಣಿಕತೆ ಪರಿಶ್ರಮದಿಂದ ನಡೆಸಿಕೊಂಡು ಬರುತ್ತಿರುವವರು ರಸ್ತೆ ಸಾರಿಗೆ ನೌಕರರು ಹಾಗೂ ಅಧಿಕಾರಿಗಳು. ಆ ಸಂಚಾರ ದಟ್ಟಣೆಯಲ್ಲಿ ಪ್ರತಿ ದಿವಸ ವಾಹನ ಚಲಾಯಿಸುವುದು, ಪ್ರಯಾಣಿಕರನ್ನು ಸಂಭಾಳಿಸಿಕೊಂಡು ಎಲ್ಲೆಂದರಲ್ಲಿ ಊಟ, ಉಪಹಾರ, ವಸತಿ, ನಿದ್ರೆ ಮಾಡುತ್ತಾ  ಆ ಕೆಲಸ ನಿರ್ವಹಿಸುವುದೆಂದರೆ ದೇವರಿಗೇ ಪ್ರೀತಿ. ಅಂಥ ನೌಕರರಿಗೆ ಕೈತುಂಬ ಸಂಬಳ, ಅವರ ಆರೋಗ್ಯ, ಅವರು ನಿವೃತ್ತಿಯಾದಾಗ ಅವರ ಜೀವನದ ಆಸರೆಗೆ ಪಿಂಚಣಿ ನೀಡುವುದು ಸಕರ್ಾರದ ಧರ್ಮ. ಅದಕ್ಕೆಂದೇ ಕೆ.ಎಸ್.ಆರ್.ಟಿ.ಸಿ. ನಿಗಮಗಳ ನೌಕರರ ಮೂಲಭೂತ ಹಕ್ಕುಗಳ ವಿಚಾರ ವೇದಿಕೆಯ ಪ್ರತಿನಿಧಿಗಳು ಬಂದು ನನ್ನನ್ನು ಕೋರಿಕೊಂಡಾಗ ಇದು ಸೂಕ್ತವಾದುದ್ದೆಂದು ತಮಗೆ ಪತ್ರ ಬರೆದು ಪತ್ರಿಕಾಗೋಷ್ಠಿ ಮೂಲಕ ಆಗ್ರಹಪಡಿಸಿದ್ದೇನು. 

ಆದ್ದರಿಂದ ಮುಖ್ಯಮಂತ್ರಿಗಳು ಸಾರಿಗೆ ನೌಕರರನ್ನು ಸಕರ್ಾರಿ ನೌಕರರನ್ನಾಗಿ ಹಾಗೂ ಸಕರ್ಾರಿ ಪಿಂಚಣಿ, ಸೌಲಭ್ಯ ನೀಡುವ ಕುರಿತು ಕೂಡಲೇ ಒಂದು ಆಯೋಗ ರಚಿಸಿ. ಆಯೋಗ ವರದಿ ನೀಡುವವರೆಗೆ ಒಂದಿಷ್ಟು ಪ್ರಮಾಣದ ಮೊತ್ತವನ್ನು ಜ.2019 ರಿಂದ ಜಾರಿಗೆ ಬರುವಂತೆ ಮಧ್ಯಂತರ ಪರಿಹಾರ ಘೋಷಿಸಿ. ಸಾರಿಗೆ ನೌಕರರ ಬೇಡಿಕೆಗಳ ಕುರಿತು ಸಕರ್ಾರದ ಮಟ್ಟದಲ್ಲಿ ಚಚರ್ೆ ನಡೆಸಲು, ಯಾವ ಸಮಯ ಯಾವ ಸಂದರ್ಭ ನಿಗದಿಪಡಿಸಿದರೂ ವೇದಿಕೆಯ ಪ್ರತಿನಿಧಿಗಳೊಂದಿಗೆ ನಾನು ಹಾಜರಾಗಲು ಸಿದ್ಧನಿದ್ದೇನೆ. ಒಂದು ವೇಳೆ ಸಕರ್ಾರ ಜಾಣ ಕುರುಡತನ ತೋರಿಸುತ್ತಾ ಮುಂದೆ ಹೋದರೆ 90 ದಿವಸದ ಗಡುವನ್ನು ಮೊಟಕುಗೊಳಿಸುವ ಸಂದರ್ಭ ಬಂದರು ಬರಬಹುದು. 

ಚುನಾವಣಾ ಪೂರ್ವದಲ್ಲಿ ತಾವೇ ಸಾರಿಗೆ ನೌಕರರನ್ನು ಸರಕಾರಿ ನೌಕರರಾಗಿ ಮಾಡುವ ಕುರಿತು ಸಾರ್ವಜನಿಕವಾಗಿ ಆಶ್ವಾಸನೆ ನೀಡಿದ್ದೀರಿ. ಈಗ ಆ ಆಶ್ವಾಸನೆಯನ್ನು ಈಡೇರಿಸಿ ಎಂದು ಪತ್ರದ ಮೂಲಕ ಒತ್ತಾಯಿಸಿದ್ದಾರೆ