ಕಬ್ಬಿನ ಹೊಲಕ್ಕೆ ಬೆಂಕಿ ಅಪಾರ ಪ್ರಮಾಣದ ಹಾನಿ

The fire caused huge damage to the sugarcane fields

ಕಬ್ಬಿನ ಹೊಲಕ್ಕೆ ಬೆಂಕಿ ಅಪಾರ ಪ್ರಮಾಣದ ಹಾನಿ 

ಶಿರಹಟ್ಟಿ 29:    ಸುಗನಹಳ್ಳಿ ಗ್ರಾಮದ ಹೊರ ವಲಯದ ಜಮೀನಿನಲ್ಲಿ ಬುಧವಾರ ಮುಂಜಾನೆ ವಿದ್ಯುತ್ ಶಾರ್ಟ ಸರ್ಕಿಟಿನಿಂದಾಗಿ ಕಟಾವು ಮಾಡಿದ ಕಬ್ಬಿನ ಹೊಲಕ್ಕೆ ಬೆಂಕಿ ತಗುಲಿ ಅಪಾರ ಪ್ರಮಾಣದ ಹಾನಿ ಉಂಟಾಗಿದೆ. 

ಗ್ರಾಮದ ಬಸಯ್ಯ ಮಾಗಳಮಠ ಎಂಬುವರ ಜಮೀನಿನಲ್ಲಿ ಈ ಬೆಂಕಿಯ ಅವಘಡ ಸಂಭವಿಸಿದೆ. ಜಮೀನಿನಲ್ಲಿ ನಿರ್ಮಿಸಿರುವ ಈರುಳ್ಳಿ ಘಟಕದ ಕಟ್ಟಡ ಕೂಡಾ ಸಂಪೂರ್ಣವಾಗಿ  ಬೆಂಕಿಗೆ ಆಹುತಿಯಾಗಿದೆ. 

ಬೆಂಕಿ ಹೊತ್ತಿ ಉರಿದ ಪರಿಣಾಮ ಸೆಡ್ಡಿನಲ್ಲಿದ್ದ ಶೇಂಗಾ, ಕಡಲೆ, ಅಲಸಂದಿ, ತೊಗರಿ,  ಚೀಲಗಳು ಸಹಿತ ಕೃಷಿಗೆ  ಸಂಬಂಧಿಸಿದ ಹಲವು ಪರಿಕರಗಳು ಹಾಗೂ ಮೇವಿನ ಬಣವೆಗಳು ಸುಟ್ಟು ಕರಕಲಾಗಿವೆ. 

ಘಟನೆಯ ಸುದ್ದಿ ತಿಳಿದು ಸ್ಥಳಕ್ಕೆ ಶಿರಹಟ್ಟಿ ಹಾಗೂ ಮುಂಡರಗಿ ಅಗ್ನಿಶಾಮಕ ದಳದ ಸಿಬ್ಬಂಧಿಗಳು ದಾವಿಸುವುದರ ಮೂಲಕ ನಿರಂತರವಾಗಿ ಮೂರು-ನಾಲ್ಕು ತಾಸುಗಳವರೆಗೆ ಜಂಟಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದರು. 


ಘಟನಾ ಸ್ಥಳಕ್ಕೆ ಹೆಸ್ಕಾಂನ ಬೆಳ್ಳಟ್ಟಿ ಕಚೇರಿಯ ಶಾಖಾಧಿಕಾರಿ ವಿಜಯ್ ಕರಣಮ್ ಹಾಗೂ ಸಿಬ್ಬಂಧಿಗಳು ಬೇಟಿ ನೀಡುವ ಮೂಲಕ  ಪರೀಶೀಲನೆ ನಡೆಸಿದರು. 

ಶಿರಹಟ್ಟಿ ಸುಗನಹಳ್ಳಿ ಗ್ರಾಮದ ಕಬ್ಬಿನ ಬೆಳೆ ಜಮೀನ ಮತ್ತು  ಈರುಳ್ಳಿ ಘಟಕದ ಕಟ್ಟಡ ಬೆಂಕಿ ತಗುಲಿ ಅಪಾರ ಪ್ರಮಾಣದ ಹಾನಿಯಾಗಿದೆ.