ವ್ಯಕ್ತಿತ್ವ ವಿಕಾಸಕ್ಕೆ ಗುರಿ ಮುಖ್ಯ: ರಂಭಾಪುರಿ ಶ್ರೀಗಳು

ಲೋಕದರ್ಶನ ವರದಿ

ರಾಣೆಬೆನ್ನೂರು13: ದೈಹಿಕ ವಿಕಾಸಕ್ಕೆ ಆಹಾರ ನೀರು ಅವಶ್ಯಕ. ಬದುಕಿನ ಉನ್ನತಿಗೆ ಮತ್ತು ವ್ಯಕ್ತಿತ್ವ ವಿಕಾಸಕ್ಕೆ ಉನ್ನತ ಗುರಿ ಮತ್ತು ಧ್ಯೇಯ ಮುಖ್ಯವೆಂದು ಬಾಳೆಹೊನ್ನೂರು ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ|| ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಪಟ್ಟರು. 

      ತಾಲೂಕಿನ ಕುಪ್ಪೇಲೂರ ಗ್ರಾಮದಲ್ಲಿ ವೀರಭದ್ರೇಶ್ವರ ದೇವಸ್ಥಾನದ ಉದ್ಘಾಟನೆ ಮೂತರ್ಿ ಪ್ರತಿಷ್ಠಾಪನೆ ಕಳಸಾರೋಹಣ ಅಂಗವಾಗಿ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

        ಭೌತಿಕ ಜೀವನ ಸಮೃದ್ಧಗೊಂಡಂತೆ ಆಂತರಿಕ ಜೀವನ ಪರಿಶುದ್ಧಗೊಳ್ಳಬೇಕಾಗಿದೆ. ಮಾನವೀಯ ಸಂಬಂಧಗಳು ಸಡಿಲಗೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಧಾಮರ್ಿಕ ಪ್ರಜ್ಞೆ ಬೆಳೆಸುವ ಅಗತ್ಯವಿದೆ. ಮನುಷ್ಯನನ್ನು ಅನುಸರಿಸಿ ಬರುವ ವಸ್ತು ಎರಡೇ ಎರಡು. ಒಂದು ಕೀತರ್ಿ ಇನ್ನೊಂದು ಅಪಕೀತರ್ಿ. ಹಣವಂತನಾಗದಿದ್ದರೂ ಚಿಂತೆಯಿಲ್ಲ. ಆದರೆ ಗುಣವಂತನಾಗಿ ಬದುಕಿ ಬಾಳಬೇಕು. 

           ಕಲಿಕೆ, ಗಳಿಕೆ ಮತ್ತು ಭಗವಂತನ ಚಿಂತನೆಯಿಂದ ಬದುಕಿನಲ್ಲಿ ಶಾಂತಿ ಸಮೃದ್ಧಿ ನೆಲೆಗೊಳ್ಳಲು ಸಾಧ್ಯ. ದೇವಸ್ಥಾನಗಳು ನಮ್ಮ ಸಂಸ್ಕೃತಿಯ ಪ್ರತೀಕವಾಗಿದ್ದು ನೆಮ್ಮದಿ ಸಾಮರಸ್ಯ ಮೂಡಿಸುವ ಕೇಂದ್ರಗಳಾಗಿವೆ. ಧಮರ್ಾಚರಣೆಯಿಂದ ಬೆಲೆ ನೆಲೆ ಪ್ರಾಪ್ತಿಯಾಗುತ್ತದೆ. ಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿ ಧರ್ಮ ಗ್ರ್ರಂಥದಲ್ಲಿ ನಿರೂಪಿಸಿದ ಧರ್ಮದ ದಶ ಸೂತ್ರಗಳು ಸರ್ವ ಸಮುದಾಯಕ್ಕೂ ಅನ್ವಯಿಸುತ್ತವೆ. ವೀರಭದ್ರೇಶ್ವರ ದೇವಸ್ಥಾನ ಸುಂದರವಾಗಿ ನಿಮರ್ಿಸಿ ಮೂತರ್ಿ ಪ್ರತಿಷ್ಠಾಪನೆ ಮಹತ್ಕಾರ್ಯ ಕೈಗೊಂಡಿದ್ದು ಗ್ರಾಮದ ಧರ್ಮ ಶ್ರದ್ಧೆಗೆ ಸಾಕ್ಷಿಯಾಗಿದೆ ಎಂದರು.

   ನೆಗಳೂರು ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮಿಗಳು ಹಾಗೂ ಲಿಂಗದಹಳ್ಳಿ ಹಿರೇಮಠದ ವೀರಭದ್ರ ಶಿವಾಚಾರ್ಯ ಸ್ವಾಮಿಗಳು ವೀರಶೈವ ಧರ್ಮ ಸಂಸ್ಕೃತಿ ಬಗ್ಗೆ ಉಪದೇಶಾಮೃತವನ್ನಿತ್ತರು. ಸಮಾರಂಭದ ಅಧ್ಯಕ್ಷತೆಯನ್ನು ಹೊನ್ನಾಳಿ ಹಿರೇಕಲ್ಮಠದ ಡಾ|| ಒಡೆಯರ್ ಚೆನ್ನಮಲ್ಲಿಕಾಜರ್ುನ ಶಿವಾಚಾರ್ಯ ಸ್ವಾಮಿಗಳು ವಹಿಸಿ ಮಾತನಾಡಿ ಧರ್ಮವೊಂದೇ ಮನುಷ್ಯನಿಗೆ ಆಶಾ ಕಿರಣ. ಸತ್ಯ ಧರ್ಮ ಮಾರ್ಗದಿಂದ ಜೀವನದಲ್ಲಿ ಸುಖ ಶಾಂತಿ ದೊರಕಲು ಸಾಧ್ಯವೆಂದರು.

           ಸಮಾರಂಭದಲ್ಲಿ ಹಲವಾರು ಗಣ್ಯರು ಪಾಲ್ಗೊಂಡು ರಂಭಾಪುರಿ ಜಗದ್ಗುರುಗಳಿಂದ ಗುರು ರಕ್ಷೆ ಸ್ವೀಕರಿಸಿದರು. ರಾಣೆಬೆನ್ನೂರಿನ ಗಿರಿಜಾದೇವಿ ದುರ್ಗದಮಠ ನಿರೂಪಿಸಿದರು.