ಲೋಕದರ್ಶನ ವರದಿ
ಕಾಗವಾಡ 18: ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ಸರ್ಕಾರಿ ರಸ್ತೆ, ಗಲ್ಲಿ, ಉದ್ಯಾನ ಈ ಸ್ಥಳಗಳಲ್ಲಿ ಅನಧಿಕೃತವಾಗಿ ಯಾವುದೇ ಕಟ್ಟಡ ನಿಮರ್ಿಸಿದರೆ ಕೂಡಲೆ ಸಾರ್ವಜನಿಕರು ತಹಶೀಲ್ದಾರ ಕಚೇರಿಗೆ ಮಾಹಿತಿ ನೀಡಬೇಕು. ಮಾಹಿತಿ ನೀಡಿದ ಸಾರ್ವಜನಿಕರ ಹೆಸರು ಗುಪ್ತವಾಗಿ ಇಡಲಾಗುವುದೆಂದು ಕಾಗವಾಡ ತಹಸೀಲ್ದಾರ ಪ್ರಮೀಳಾ ದೇಶಪಾಂಡೆ ಹೇಳಿದರು.
ದಿ.17ರಂದು ಕಾಗವಾಡ ತಹಸೀಲ್ದಾರ ಕಚೇರಿಯಲ್ಲಿ ತಾಲೂಕಾ ಮಟ್ಟದ ಎಲ್ಲ ಗ್ರಾಮಲೇಕ್ಕಾಧಿಕಾರಿಗಳ ಮತ್ತು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ವಿಶೇಷ ಸಭೆ ಹಮ್ಮಿಕೊಳ್ಳಲಾಗಿತ್ತು.
ಸಭೆಯಲ್ಲಿ ಕಾಗವಾಡ ತಾಲೂಕಾ ಪಂಚಾಯತಿ ಅಭಿವೃದ್ಧಿ ಅಧಿಕಾರಿ ವೀರಣಗೌಡ ಅವನಗೌಡರ, ಗ್ರೇಡ್-2 ತಹಸೀಲ್ದಾರ ವಿಜಯ ಚೌಗುಲೆ, ಕಂದಾಯ ನೀರಿಕ್ಷಕ ಎಸ್.ಬಿ.ಮುಲ್ಲಾ ಇವರ ಉಪಸ್ಥಿತಿಯಲ್ಲಿ ಸಭೆ ಜರುಗಿದ್ದು. ಎಲ್ಲ ಸಿಬ್ಬಂದಿಗಳಿಗೆ ತಹಸೀಲ್ದಾರರು ಈ ಆದೇಶವನ್ನು ನೀಡಿದ್ದಾರೆ. ತಹಸೀಲ್ದಾರ ಕಚೇರಿಯ ಸಿಬ್ಬಂದಿಗಳಾದ ಪೂಜಾ ಹೋಗಾರ್ ಮೊಬೈಲ್ ನಂ. 9606702634 ಈ ಮೊಬೈಲ್ ಸಂಖ್ಯೆಗೆ ಮಾಹಿತಿ ನೀಡಿದಲ್ಲಿ ಅನಧಿಕೃತವಾಗಿ ಕಟ್ಟಡ ನಿಮರ್ಿಸಿದವರ ಮೇಲೆ ಕೂಡಲೆ ಕ್ರಮಜರುಗಿಸುವದಾಗಿ ತಹಸೀಲ್ದಾರ ಶ್ರೀಮತಿ ಪ್ರಮೀಳಾ ದೇಶಪಾಂಡೆ ಸಾರ್ವಜನಿಕರಿಗೆ ಆಹ್ವಾನಿಸಿದ್ದಾರೆ.