ನ್ಯಾಯಾಂಗದ ಪಾವಿತ್ರತೆಯನ್ನು ಕಾಪಾಡಿಕೊಂಡು ಬರಬೇಕು: ನ್ಯಾ. ಪ್ರಸನ್ನ ವರಾಳೆ
ಚಿಕ್ಕೋಡಿ 11: ಸರ್ಕಾರದ ಮೂರು ಅಂಗಗಳಲ್ಲಿ ನ್ಯಾಯಾಂಗವು ಒಂದು ಅತ್ಯಂತ ಮಹತ್ವದ್ದು, ಯಾವುದೇ ನ್ಯಾಯಾಧೀಶರು ನ್ಯಾಯನಿರ್ಣಯ ಮಾಡುವ ಸಂದರ್ಭದಲ್ಲಿ ನಿಸ್ಪಕ್ಷಪಾತವಾಗಿ ನ್ಯಾಯದಾನವನ್ನು ಮಾಡಬೇಕು. ತಮ್ಮ ಸಂಬಂಧಿಕರು ಅಥವಾ ತಮ್ಮ ಹೆಂಡತಿಯೇ ಬಂದರು ಸಹಿತ ನ್ಯಾಯದ ಪರವಾಗಿಯೇ ನ್ಯಾಯದಾನವನ್ನು ಮಾಡಬೇಕು. ಸಂವಿಧಾನದ ಚೌಕಟ್ಟಿನಲ್ಲಿ ನ್ಯಾಯಾಂಗದ ಪಾವಿತ್ರತೆಯನ್ನು ಕಾಪಾಡಿಕೊಂಡು ಬರಬೇಕು ಎಂದು ಭಾರತ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಪ್ರಸನ್ನ ವರಾಳೆ ಹೇಳಿದರು.
ಇಲ್ಲಿನ ಕೆ.ಎಲ್.ಇ. ಸಂಸ್ಥೆಯ ಕಾನೂನು ಮಹಾವಿದ್ಯಾಲಯ ಪ್ರಾರಂಭವಾಗಿ 25 ವರ್ಷಗಳನ್ನು ಪುರೈಸಿದ ನಿಮಿತ್ತ ಕೆ.ಎಲ್.ಇ. ಲಾ ಅಕಾಡೆಮಿ, ಬೆಳಗಾವಿ ವತಿಯಿಂದ ನಾಲ್ಕನೆಯ ಕನ್ನಡ ಕಲ್ಪಿತ ನ್ಯಾಯಾಲಯ ಸ್ಪರ್ಧೆ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಯುವ ನ್ಯಾಯವಾದಿಗಳು ತಂತ್ರಜ್ಙಾನದ ಸದ್ಬಳಕೆಯನ್ನು ಮಾಡಿಕೊಂಡು ಹೆಚ್ಚು ಪುಸ್ತಕಗಳನ್ನು ಒದುವುದರ ಮೂಲಕ ತಮ್ಮ ಜ್ಙಾನವನ್ನು ಹೆಚ್ಚಿಸಿಕೊಳಬೇಕೆಂದು ತಿಳಿಸಿದರು.
ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ವಿಜಯಕುಮಾರ ಎ. ಪಾಟೀಲ ಸ್ಪರ್ಧೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ ಭಾಗವಹಿಸುವಿಕೆ ಅತ್ಯಂತ ಮುಖ್ಯವೆಂದು ಹೇಳುತ್ತ ಸ್ಪರ್ಧೆಯಲ್ಲಿ ಭಾಗವಹಿಸಿದ ಕೇವಲ 2 ತಂಡಗಳಿಗೆ ಮಾತ್ರ ಪ್ರಥಮ ಮತ್ತು ದ್ವಿತೀಯ ಬಹುಮಾನವನ್ನು ಕೊಡಲು ಅವಕಾಶವಿರುತ್ತದೆ ಎಂದು ಹೇಳಿದರು.
ಕರ್ನಾಟಕ ಉಚ್ಚ ನ್ಯಾಯಾಲಯ ವಿಶ್ರಾಂತ ನ್ಯಾಯಮೂರ್ತಿ ಎ. ಎಸ್. ಪಾಶ್ಚಾಪುರೆ. ಮಾತನಾಡಿ ಉನ್ನತ ಹುದ್ದೆಯನ್ನು ಹೊಂದಿದವರು ಹೆಚ್ಚಿನ ಪ್ರಮಾಣದವರು ಗ್ರಾಮೀಣ ಪ್ರದೇಶದವರೆ ಆಗಿದ್ದು ಖುಷಿ ತರಿಸಿದೆ ಎಂದರು.
ಅಧ್ಯಕ್ಷತೆಯನ್ನು ಸಂಸ್ಥೆಯ ಕಾರಾ್ಯಧ್ಯಕ್ಷ ಡಾ. ಪ್ರಭಾಕರ ಬಿ. ಕೋರೆ. ವಹಿಸಿದ್ದರು.
ಸ್ಪರ್ಧೆಯಲ್ಲಿ ರಾಜ್ಯದ 20 ಕಾನೂನು ಮಹಾವಿದ್ಯಾಲಯಗಳು ಭಾಗವಹಿಸಿದ್ದವು. ಕೆ.ಎಲ್.ಇ. ಸಂಸ್ಥೆಯ ಗುರು ಸಿದ್ದಪ್ಪಾ ಕೊತ್ತೊಂಬರಿ ಕಾನೂನು ಮಹಾವಿದ್ಯಾಲಯ, ಹುಬ್ಬಳ್ಳಿ. ತಂಡ ಪ್ರಥಮ ಬಹುಮಾನವನ್ನು ಪಡೆದರು, ವಿವೇಕಾಂದ ಕಾನೂನು ವಿಶ್ವವಿದ್ಯಾಲಯ ಪುತ್ತುರು ತಂಡ ದ್ವಿತೀಯ ಬಹುಮಾನವನ್ನು ಪಡೆದರು. ಅತ್ಯುತ್ತಮ ಮಹಿಳಾ ನ್ಯಾಯವಾದಿ, ಮಹಾಲಕ್ಷ್ಮಿ ಅ. ಕುಂಬಾರ ಹುರಕಡ್ಲಿ ಅಜ್ಜಾ ಕಾನೂನು ಮಹಾವಿದ್ಯಾಲಯ, ಧಾರವಾಡ. ತಂಡದ ವಿದ್ಯಾರ್ಥಿನಿ ಬಹುಮಾನ ಪಡೆದುಕೊಂಡಳು ಮತ್ತು ಅತ್ಯುತ್ತಮ ಪುರುಷ ನ್ಯಾಯವಾದಿ, ಪ್ರವೀಣ ಬಡಿಗೇರ, ಕೆ.ಎಲ್.ಇ. ಸಂಸ್ಥೆಯ ಗುರು ಸಿದ್ದಪ್ಪಾ ಕೊತ್ತೊಂಬರಿ ಕಾನೂನು ಮಹಾವಿದ್ಯಾಲಯ, ಹುಬ್ಬಳ್ಳಿ. ತಂಡದ ವಿದ್ಯಾರ್ಥಿ ಬಹುಮಾನವನ್ನು ಪಡೆದುಕೊಂಡನು. ವೈಕುಂಟ ಬಾಳಿಗಾ ಕಾನೂನು ಮಹಾವಿದ್ಯಾಲಯ, ಉಡುಪಿ. ತಂಡ ಅತ್ಯುತ್ತಮ ವಾದಪತ್ರ ಬಹುಮಾನವನ್ನು ಪಡೆದುಕೊಂಡರು.
ನ್ಯಾಯಾಧೀಶ ವಿದ್ಯಾಧರ ಶಿರಹಟ್ಟಿ, ಮಾಯಪ್ಪ ಪೂಜೇರಿ, ರಾಹುಲ ರಾವ್, ಜ್ಯೋತಿ ಕಾಗಿನಕರ, ಹರೀಶ ಪಾಟೀಲ, ತ್ರಿ್ತ ಧರಣಿ, ಸಂಸ್ಥೆಯ ಅಂಗಸಂಸ್ಥೆಗಳ ಪ್ರಾಚಾರ್ಯ ಡಾ. ಪ್ರಸಾದ ರಾಮಪುರೆ, ದರ್ಶನ ಬಿಳ್ಳುರ, ಪ್ರವೀಣ ಪಾಟೀಲ, ಡಾ.ಜ್ಞಾನೇಂದ್ರ ಚೌರಿ, ಡಾ. ವಿಜಯ.ವಿ. ಮುರದಂಡೆ, ಪ್ರಕಾಶ ಪಿ. ಕೋಳಿ ಉಪಸ್ಥಿತರಿದ್ದರು.
ಡಾ,ಜಗದೀಶ ಹಾಲಶೆಟ್ಟಿ ಸ್ವಾಗತಿಸಿದರು. ಶ್ರೇಯಾ ಹುದ್ದಾರ ಮತ್ತು ಪೂರ್ಣಾನಂದ ಘಾಳಿ ನಿರೂಪಿಸಿದರು. ಪ್ರಾಚಾರ್ಯ ಡಿ.ಬಿ.ಸೊಸೊಲ್ಲಾಪೂರೆ ವಂದಿಸಿದರು.