ಸಂತೋಷಕುಮಾರ ಕಾಮತ
ಮಾಂಜರಿ : ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಅದರಲ್ಲಿ ರಾಜ್ಯಾದ್ಯಂತ ಶೇ. 30ರಷ್ಟು ವಿದ್ಯಾರ್ಥಿಗಳು ಅನುತ್ತೀರ್ಣಗೊಂಡಿದ್ದಾರೆ. ಬೆಳಗಾವಿ ಜಿಲ್ಲೆಯ ಎರಡೂ ಶೈಕ್ಷಣಿಕ ಜಿಲ್ಲೆಗಳಲ್ಲಿ ಶೇ. 40ರಷ್ಟು ವಿದ್ಯಾರ್ಥಿಗಳು ಅನುತ್ತೀರ್ಣಗೊಂಡಿದ್ದು, ಈಗ ಫೇಲಾದವರ ಪಾಸ್ಗೆ ಶಿಕ್ಷಣ ಇಲಾಖೆ ಪ್ರೌಢಶಾಲಾ ಶಿಕ್ಷಕರ ಮೇಲೆ ಒತ್ತಡ ಹೇರಲಾಗುತ್ತಿದೆ.
ಒಂದು ವರ್ಷದಿಂದ ಹಗಲು-ರಾತ್ರಿ, ವಿಶೇಷ ತರಗತಿಗಳನ್ನು ತೆಗೆದುಕೊಂಡು ಪಾಠ ಬೋಧನೆ ಮಾಡಲಾಗಿದ್ದು, ಅದರಲ್ಲಿ ಪಾಸಾಗದವರು ಕೇವಲ 24 ದಿನಗಳ ವರ್ಗಗಳನ್ನು ನಡೆಸಿದರೆ ಪಾಸಾಗಬಲ್ಲರೇ ಎಂಬುದು ಪ್ರೌಢಶಾಲಾ ಶಿಕ್ಷಕರ ಪ್ರಶ್ನೆ. ವರ್ಷವಿಡಿ ಪಾಠ ಬೋಧನೆ ಮಾಡಿದ ಪ್ರೌಢಶಾಲಾ ಶಿಕ್ಷಕರಿಗೆ ಈಗ ಮತ್ತೆ ಅನುತ್ತೀರ್ಣ ವಿದ್ಯಾರ್ಥಿಗಳಿಗೆ ಪಾಠ ಮಾಡುವುದು ಇದೆಂತ ಶಿಕ್ಷೆ ಎಂದು ಪ್ರೌಢಶಾಲಾ ಶಿಕ್ಷಕ ವಲಯದಿಂದ ಕೇಳಿ ಬರುತ್ತಿದೆ.
ಕಳೆದ ವರ್ಷ ಗ್ರೇಸ್ ಅಂಕ ನೀಡಿದ್ದನ್ನು ಪರಿಗಣಿಸಿದರೆ ಈ ಬಾರಿ ಗ್ರೇಸ್ ಅಂಕವಿಲ್ಲದೇ ಉತ್ತಮ ಫಲಿತಾಂಶ ಬಂದಿರುವುದು ಸಮಾಧಾನಕರ ಸಂಗತಿ. ಎಪ್ರೀಲ್-25ರ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳನ್ನು ಶಾಲಾ ಶಿಕ್ಷಣ ಮತ್ತು ಮೌಲ್ಯ ನಿರ್ಣಯ ಮಂಡಳಿ ಹಾಗೂ ಶಾಲಾ ಶಿಕ್ಷಣ ಅಧಿಕಾರಿಗಳು ಅನುತ್ತೀರ್ಣಗೊಂಡ ವಿದ್ಯಾರ್ಥಿಗಳನ್ನು ನೊಂದಣಿ ಮಾಡಿಸಲು ಪ್ರೌಢಶಾಲಾ ಶಿಕ್ಷಕರ ಮೇಲೆ ಒತ್ತಡ ಹಾಕುತ್ತಿದ್ದಾರೆ. ನೊಂದಣಿಯಾಗಿರುವ ವಿದ್ಯಾರ್ಥಿಗಳಿಗೆ ಮೇ 26ರಿಂದ 31 ರವರೆಗೆ ನಡೆಯಲಿದೆ. ಪರೀಕ್ಷೆ-2 ಫಲಿತಾಂಶ ಸುಧಾರಣೆಗೆ ವಿಶೇಷ ವರ್ಗಗಳನ್ನು ತೆಗೆದುಕೊಳ್ಳುವಂತೆ ಉಪನಿರ್ದೇಶಕರು, ಖಿಇಒ ಅವರ ಮೂಲಕ ಮುಖ್ಯೋಪಾಧ್ಯಾಯರಿಗೆ ಒತ್ತಡ ತಂದು ಸಹಶಿಕ್ಷಕರಿಗೆ ವರ್ಗಗಳನ್ನು ತೆಗೆದುಕೊಳ್ಳುವಂತೆ ಒತ್ತಡ ಹೇರಲಾಗುತ್ತಿದೆ. ಅದರಂತೆ ಬಿಇಒಗಳು ಒಂದರ ಮೇಲೊಂದರಂತೆ ಆನ್ಲೈನ್ ಸಭೆಗಳನ್ನು ನಡೆಸಿ, ಶಿಕ್ಷಕರಿಗೆ ವರ್ಗ ತೆಗೆದುಕೊಳ್ಳುವಂತೆ ಒತ್ತಾಯಿಸಲಾಗುತ್ತಿದೆ.
ಶಿಕ್ಷಕರ ರಜೆಗೆ ಕತ್ತರಿ: ಸರಕಾರ10-4-2025 ರಂದು 28-05-2025 ವರಿಗೆ ಬೇಸಿಗೆ ರಜೆ ಘೋಷಣೆ ಮಾಡಲಾಗಿದೆ. ಇದು ವೈಜ್ಞಾನಿಕವಾಗಿ ಹಿಂದಿನಿಂದಲೂ ಪದ್ಧತಿ. ಈ ಮೊದಲು ಅಕ್ಟೋಬರ್ 2 ರಿಂದ 31ರವರೆಗೆ ರಜೆ ಇರುತ್ತಿತ್ತು. ಈಗ ಅದನ್ನು ಕಡಿತಗೊಳಿಸಿ 15ದಿನಕ್ಕೆ ಸೀಮಿತಗೊಳಿಸಲಾಗಿದೆ. ಬೇಸಿಗೆ ರಜೆಯನ್ನು ಎಪ್ರೀಲ್ 10ರಿಂದ ಮೇ 29ರವರೆಗೆ ಇದ್ದದ್ದು, ಅದರಲ್ಲಿ ಎಪ್ರಿಲ್ 20ರವರೆಗೆ ಮೌಲ್ಯಮಾಪನಕ್ಕೆ ಹಾಜರಾಗಬೇಕು. ಎಪ್ರಿಲ್ 20ರಿಂದ ಮೇ 28ರವರೆಗೆ ಕೇವಲ 38 ದಿನಗಳು ಮಾತ್ರ ಶಿಕ್ಷಕರಿಗೆ ರಜೆ ಸಿಗುತ್ತದೆ. ಈ ವರ್ಷ ಎಸ್ಎಸ್ಎಲ್ಸಿ ಫಲಿತಾಂಶ ಬೇಗನೇ ಬಂದಿರುವುದರಿಂದ ಮಂಡಳಿಯವರು 2ನೇ ಪರೀಕ್ಷೆಯನ್ನು ಮೇ 26 ರಿಂದ 31ರವರೆಗೆ ನಡೆಸಲಿದ್ದು. ಶಿಕ್ಷಕರು ಮೇ 25ಕ್ಕೆ ಕರ್ತವ್ಯಕ್ಕೆ ಹಾಜರಾಗಬೇಕಿದ್ದು. ಇಲ್ಲಿಯೂ ಕೂಡ 5 ದಿನ ರಜೆ ಕಡಿತವಾಗಿದೆ. ಈಗ ಫಲಿತಾಂಶ ಸುಧಾರಣೆಗಾಗಿ ವರ್ಗ ತೆಗೆದುಕೊಳ್ಳುವುದಾದರೆ ಶಿಕ್ಷಕರಿಗೆ ಮೇ ತಿಂಗಳ ರಜೆಗೂ ಕತ್ತರಿ ಬಿದ್ದಂತಾಗಿದೆ.
ಕನಿಷ್ಠ ಓದು-ಬರಹ ಬಾರದ ಮಕ್ಕಳು: ಪ್ರೌಢಶಾಲಾ ಶಿಕ್ಷಕರು ವರ್ಷದುದ್ದಕ್ಕೂ ವಿಶೇಷ ವರ್ಗಗಳನ್ನು ಮಾಡಿ ವಿದ್ಯಾರ್ಥಿಗಳ ಫಲಿತಾಂಶವನ್ನು ಸುಧಾರಿಸಲು ಹಗಲಿರುಳು ಶ್ರಮಿಸಿದ್ದಾರೆ. ಆದಾಗ್ಯೂ ಇಷ್ಟು ವಿದ್ಯಾರ್ಥಿಗಳುಅನುತ್ತೀರ್ಣರಾಗಿದ್ದಾರೆಂದರೆ ಇವರಿಗೆ ಕನಿಷ್ಠ ಓದು-ಬರಹ ಗೊತ್ತಿಲ್ಲವೆಂದು ಅರ್ಥ. ಇದಕ್ಕೆ ಪ್ರೌಢಶಾಲಾ ಶಿಕ್ಷಕರು ಹೊಣೆಯಲ್ಲ. ವರ್ಷದುದ್ದಕ್ಕೂ ಮಾಡಿದರೂ ಪಾಸಾಗದವರು 15 ದಿನ ಬೋಧನೆ ಮಾಡಿದರೆ ಪಾಸಾಗಬಲ್ಲರೇ ? ಹೀಗಿದ್ದರೂ ಅಧಿಕಾರಿಗಳು ವರ್ಗ ತೆಗೆದುಕೊಳ್ಳಲು ಒತ್ತಾಯಿಸುತ್ತಿರುವುದು ಕೇವಲ ಕಾಟಾಚಾರವೆ.
ಬುನಾದಿ ಶಿಕ್ಷಣದ ವೈಫಲ್ಯವೇ ಫಲಿತಾಂಶ ಕುಸಿತಕ್ಕೆ ಕಾರಣ: ಮಗುವಿಗೆ ಆರಂಭಿಕ ಹಂತದಿಂದಲೂ ಓದು-ಬರಹ ಬಾರದ ವಿದ್ಯಾರ್ಥಿಗಳನ್ನು ಹಾಗೇ ಪಾಸ್ ಮಾಡುತ್ತ 8ನೇ ತರಗತಿಗೆ ಬಂದು ಸೇರುತ್ತಿದ್ದಾರೆ. ಬಂದು ಸೇರುತ್ತಿದ್ದಾರೆ ಕನಿಷ್ಠ ಓದು-ಬರಹ ಜ್ಞಾನ ಜ್ಞಾನ ಇರದ ಇರದ ವಿದ್ಯಾರ್ಥಿಗಳನ್ನು ವಿದ್ಯಾರ್ಥಿಗಳನ್ನು ಸುಧಾರಿಸುವುದು ಪ್ರೌಢಶಾಲಾ ಶಿಕ್ಷಕರಿಗೆ ಕಷ್ಟದ ಕೆಲಸ. ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶಕ್ಕೆ ಮಾತ್ರ ಶಿಕ್ಷಕರಿಗೆ ಒತ್ತಡ ಹಾಕದೇಮಗುವಿನ ಆರಂಭಿಕ ಬುನಾದಿ ಹಂತದ ತರಬೇತಿಯಲ್ಲೇ ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ, ಮಕ್ಕಳಿಗೆ ವಿಶೇಷ ವರ್ಗಗಳನ್ನು ನಡೆಸಬೇಕು. ಮಗುವಿನ ಬುನಾದಿಯಲ್ಲೇ ಶಿಕ್ಷಕರಿಗೆ ಅಧಿಕಾರಿಗಳು ಒತ್ತಡ ಹಾಕಿದ್ದರೆ, ಎಸ್ಎಸ್ಎಲ್ಸಿ ಫಲಿತಾಂಶ ಕುಸಿತ ತಡೆಯಬಹುದಿತ್ತು.
ಇಂತಹ ಶೈಕ್ಷಣಿಕ ವೈಫಲ್ಯಗಳನ್ನು ಬಿಟ್ಟು, ಕೇವಲ 10ನೇ ತರಗತಿಗೆ ಮಾತ್ರ ಈ ರೀತಿಯ ವಿಶೇಷ ವರ್ಗಗಳನ್ನು ತೆಗೆದುಕೊಳ್ಳುವಂತೆ ಶಿಕ್ಷಕರ ಮೇಲೆ ಒತ್ತಡ ಹಾಕುತ್ತಿರುವುದು ಅವೈಜ್ಞಾನಿಕ ಅಧಿಕಾರಿಗಳು ಇನ್ನು ಮುಂದಾದರೂ ಎಚ್ಚೆತ್ತು ಬುನಾದಿ ಶಿಕ್ಷಣಕ್ಕೆ ಮಹತ್ವ ಮಹತ್ವ ನೀಡಬೇಕಿದೆ. ಬೇಸಿಗೆ ರಜಾ ಅವಧಿಯಲ್ಲಿ ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ವಿಶೇಷ ವರ್ಗದ ಅಗತ್ಯವಿಲ್ಲ. ಶಿಕ್ಷಕರ ಹಕ್ಕನ್ನೂ ಕಸಿದುಕೊಂಡತ್ತಾಗುವುದಿಲ್ಲ.
ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶ ಕ್ಷೀಣಿಸಿದ ಹಿನ್ನೆಲೆಯಲ್ಲಿ ಪ್ರೌಢಶಾಲಾ ಶಿಕ್ಷಕರ ರಜೆಗೆ ಕತ್ತರಿ ಹಾಕಿ, ವಿಶೇಷ ತರಗತಿಗಳನ್ನು ತೆಗೆದುಕೊಳ್ಳುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳು ಒತ್ತಡ ಹಾಕುವುದು ಸರಿಯಲ್ಲ. ಪರೀಕ್ಷೆ ಫಲಿತಾಂಶ ಕ್ಷೀಣಿಸಲು ಶೈಕ್ಷಣಿಕ ವೈಫಲ್ಯವೇ ಕಾರಣವಾಗಿದೆ. ಬೇಸಿಗೆ ರಜೆಯನ್ನಾದರೂ ಕುಟುಂಬದೊಂದಿಗೆ ನೆಮ್ಮದಿಯಿಂದ ಕಳೆಯಲು ಅಧಿಕಾರಿಗಳು ಅವಕಾಶ ಕಲ್ಪಿಸಬೇಕು. ಎಲ್ಲದಕ್ಕೂ ಪ್ರೌಢಶಾಲಾ ಶಿಕ್ಷಕರ ಮೇಲೆ ಒತ್ತಡ ಹಾಕಬಾರದು.
ಜನೇಂದ್ರ ನಿಲಜಗಿ,
ಅಧ್ಯಕ್ಷರು, ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ, ಚಿಕ್ಕೋಡಿ ಜಿಲ್ಲಾ ಘಟಕ.