ನಗರ ಸಭೆಗೆ ಚಿನ್ನದ ಮೊಟ್ಟೆ ಇಡುವ ಕೋಳಿಯಾದ ತೊಂಟದಾರ್ಯ ಜಾತ್ರಾ ಮಹೋತ್ಸವ - ರಾಜು ಖಾನಪ್ಪನವರ

Public roads closed for months on the pretext of a fair

ಗದಗ 10 :  ಶ್ರೀರಾಮ ಸೇನಾ, ಅಟೋ ಸೇನಾ ಹಾಗೂ ದಲಿತ ಮಿತ್ರ ಮೇಳ ವತಿಯಿಂದ ಜಾತ್ರೆ ನೆಪದಲ್ಲಿ ತಿಂಗಳಾನುಗಟ್ಟಲೆ ಸಾರ್ವಜನಿಕ ರಸ್ತೆಯಲ್ಲಿ ಅನ್ಯ ಧರ್ಮದ, ಅನ್ಯ ರಾಜ್ಯ ವ್ಯಾಪಾರಸ್ಥರು ವ್ಯಾಪಾರ ಮಾಡುತ್ತ ಸಾರ್ವಜನಿಕ ಸಂಚಾರ ವ್ಯವಸ್ಥೆಗೆ ಅಡ್ಡ ಪಡಿಸುವುದರ ಜೊತೆಗೆ ಸ್ಥಳೀಯ ವ್ಯಾಪಾರಿಗಳು ಹೊಟ್ಟೆ ಮೇಲೆ ಕಲ್ಲು ಹಾಕುತ್ತಿರುವುದನ್ನು ವಿರೋಧಿಸಿ ಹಾಗೂ ಈ ಕೂಡಲೇ ತಾತ್ಕಾಲಿಕವಾಗಿ ಹಾಕಿರುವ ಅಂಗಡಿಗಳನ್ನು ತೆರವುಗೊಳಿಸಲು ಆಗ್ರಹಿಸಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಇಂದಿನಿಂದ ಅನಿರ್ದಿಷ್ಟಾವಧಿ ಕಾಲ ಧರಣಿ ಹಮ್ಮಿಕೊಳ್ಳಲಾಗಿದೆ.

ಸ್ಥಳೀಯ ವ್ಯಾಪಾರಸ್ಥರು ತೆರಿಗೆ ಹಾಗೂ ಇತ್ಯಾದಿ ಲೈಸನ್ಸ್‌ಗಳನ್ನು ಪಡೆದು ವ್ಯಾಪಾರ ಮಾಡುತ್ತಿರುವ ಹಣಕ್ಕಿಂತ ಈ ತೋಂಟದಾರ್ಯ ಜಾತ್ರೆಯಿಂದ ಚಿನ್ನದ ಮೊಟ್ಟೆ ಇಡುವ ಕೋಳಿ ದೊರೆತ್ತಿದೆ ಹಾಗಾಗಿ ಜನರ ಹಾಗೂ ಸ್ಥಳೀಯ ವ್ಯಾಪಾರಸ್ಥರ ಸಮಸ್ಯೆ ನಗರಸಭೆ ಸ್ಪಂದಿಸುತ್ತಿಲ್ಲ ಎಂದು ಶ್ರೀರಾಮ ಸೇನಾ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜು ಖಾನಪ್ಪನವರ ಈ ಸಂದರ್ಭದಲ್ಲಿ ಮಾತನಾಡಿದರು. 

ಈ ಸಂದರ್ಭದಲ್ಲಿ ರಾಜ್ಯ ಶಾರೀರಿಕ ಪ್ರಮುಖರಾದ ಮಹೇಶ ರೋಖಡೆ, ಜಿಲ್ಲಾಧ್ಯಕ್ಷ ಸೋಮು ಗುಡಿ, ದಲಿತ ಮಿತ್ರ ಮೇಳ ಅಧ್ಯಕ್ಷರಾದ ಕುಮಾರ ನಡಗೇರಿ, ಉಪಾಧ್ಯಕ್ಷ ವೆಂಕಟೇಶ ದೊಡ್ಡಮನಿ, ಸತೀಶ ಕುಂಬಾರ, ಕಿರಣ ಹಿರೇಮಠ, ಹುಲಗಪ್ಪ ವಾಲ್ಮೀಕಿ, ಶ್ರೀರಾಮ ಗದಗ ತಾಲೂಕಾಧ್ಯಕ್ಷ ಭರತ ಲದ್ದಿ, ಮುಂಡರಗಿ  ತಾಲೂಕಾಧ್ಯಕ್ಷ ಸುದೀಪ ಗಡಾದ, ಶಿವಯೋಗಿ ಹಿರೇಮಠ, ರವಿ ಜಾಲಗಾರ, ಶರಣಪ್ಪ ಲಕ್ಕುಂಡಿ, ಈರ​‍್ಪ ಹೆಬಸೂರ, ಅಭಿಲಾಷ ಗುಜಮಾಗಡಿ, ಲಕ್ಷ್ಮಣ ಗೌಡರ, ಪರಶುರಾಮ ಆಡಿನ, ಮಹಾಂತೇಶ ಹೊನ್ನಪ್ಪನವರ, ಸದಾನಂದಸಿಂಗ್ ಗುರ್ಲಹೊಸುರ, ಅಟೋ ಸೇನಾ ನಗರಾಧ್ಯಕ್ಷ ಮೌನೇಶ ದಾಸರ, ಮಂಜು ಗುಡಿಮನಿ, ಸಚಿನ ಮುಸಂಡಿ, ಶಿವು ದಂಡಿನ, ಪ್ರವೀಣ ಕೊಳ್ಳಿ, ಶಿವಕುಮಾರ ಹಿರೇಮಠ, ಬಸವರಾಜ ಹುಲಕೋಟಿ, ಈರಣ್ಣ ಗಾಣೀಗೇರ, ಶಿವನಂದಿ ಮುಂತಾದ ಶ್ರೀರಾಮ ಸೇನಾ, ಆಟೋ ಸೇನಾ ಹಾಗೂ ದಲಿತ ಮಿತ್ರ ಮೇಳ ಕಾರ್ಯಕರ್ತರು ಅನಿರ್ದಿಷ್ಟಾವಧಿ ಕಾಲ ಧರಣಿಗೆ ಸಾಥ ನೀಡಿದರು.