ಶಿರಗುಪ್ಪಿ ಅರಿಹಂತ ಶಿಕ್ಷಣ ಸಮಿತಿಯ ವಿದ್ಯಾರ್ಥಿಗಳ ಸಾಧನೆ ಸೃಷ್ಠಿ ಅಕಿವಾಟೆ ರಾಜ್ಯಕ್ಕೆ 6 ನೇ ಸ್ಥಾನ
ಕಾಗವಾಡ 03: ತಾಲೂಕಿನ ಶಿರಗುಪ್ಪಿಯ ಅರಿಹಂತ ಶಿಕ್ಷಣ ಸಮಿತಿಯ ಶ್ರೀ ಪಾರೀಸಾ ಸಾತಗೌಡ ಗುಂಡವಾಡ ಕನ್ನಡ ಪ್ರೌಢ ಶಾಲೆಯ ಸೃಷ್ಟಿ ಬಾಬಾಸಾಹೇಬ ಅಕಿವಾಟೆ ಇವಳು (ಶೇ. 99.2) 620 ಅಂಕಗಳೊಂದಿಗೆ ರಾಜ್ಯಕ್ಕೆ 6ನೇ ಕಾಗವಾಡ ವಲಯಕ್ಕೆ ದ್ವೀತಿಯ ಮತ್ತು ಶಿರಗುಪ್ಪಿ ಕೇಂದ್ರ ಹಾಗೂ ಶಾಲೆಗೆ ಪ್ರಥಮ ಸ್ಥಾನ ಗಳಿಸಿದ್ದಾಳೆ ಇನ್ನೂ ಶಾಲೆಯ ಶ್ರೀವರ್ಧನ ಉದಯ ಈರಣ್ಣವರ (ಶೇ. 96.16) 601 ಅಂಕಗಳೊಂದಿಗೆ ದ್ವೀತಿಯ ಹಾಗೂ ಸೌಮ್ಯಾ ರಾಜೇಂದ್ರ ಪಿರಣ್ಣವರ (ಶೇ. 94.72) 592 ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದುಕೊಂಡಿದ್ದು, ಶಾಲೆಯ ಆಡಳಿತ ಮಂಡಳಿಯವರು, ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.