ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಮುಖಂಡರಿಗೆ ಶಾಸಕ ಡಾ. ಚಂದ್ರು ಲಮಾಣಿ ಪಕ್ಷದ ಧ್ವಜ ನೀಡಿ ಬರಮಾಡಿಕೊಂಡರು
ಶಿರಹಟ್ಟಿ 14: ಸುಗ್ನಳ್ಳಿ ಗ್ರಾಮದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಗ್ರಾಮದ ಹಾಲಿ ಹಾಗೂ ಮಾಜಿ ಗ್ರಾಮ ಪಂಚಾಯತ್ ಸದಸ್ಯರು ಸೇರಿದಂತೆ ಪ್ರಮುಖರು ಬಿಜೆಪಿ ತತ್ವ ಸಿದ್ಧಾಂತಕ್ಕೆ ಮೆಚ್ಚಿ ಶಾಸಕ ಡಾಕ್ಟರ್ ಚಂದ್ರು ಲಮಾಣಿ ಸಮ್ಮುಖದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಕಾರ್ಯಕರ್ತರಿಗೆ ಪಕ್ಷದ ಧ್ವಜ ನೀಡಿ ಸೇರೆ್ಡ ಮಾಡಿಕೊಳ್ಳಲಾಯಿತು. ಗ್ರಾ ಪಂ ಸದಸ್ಯರಾದ ಮಹಾದೇವ ಗೌಡ ಪಾಟೀಲ್ ಲಕ್ಷ್ಮವ್ವ ಬಳ್ಳೊಳ್ಳಿ, ಶಾಂತಗೌಡ ಪಾಟೀಲ್, ಭರಮಪ್ಪ ಸೊರಟೂರ, ಷಣ್ಮುಖಪ್ಪ ಬಳ್ಳಾರಿ, ಫಕೀರ್ ಗೌಡ ಪಾಟೀಲ್ ಹಾಗೂ ಅವರ ಅನುಯಾಯಿಗಳು ಬಿಜೆಪಿ ಪಕ್ಷ ಸೇರಿದರು. ಈ ವೇಳೆ ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ ದೇಶದ ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಅವರ ಪಾರದರ್ಶಕ ಆಡಳಿತ ಬಡವರ ದೀನ ದಲಿತರ ಶೋಷಿತರ ಅಭಿವೃದ್ಧಿಗಾಗಿ ತಂದಿರುವ ಜನಪರ ಯೋಜನೆಗಳು ಹಾಗೂ ದೇಶದ ಸಮೃದ್ಧಿಯಾಗಿ ಕೈಗೊಂಡ ಕ್ರಮಗಳನ್ನು ಕಂಡು ದೇಶದ ಜನತೆ ಬಿಜೆಪಿ ಸರ್ಕಾರದ ಆಡಳಿತ ಮೆಚ್ಚುಗೆಯಾಗಿದೆ. ಇತ್ತೀಚೆಗೆ ನಡೆದ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ತಿರಸ್ಕರಿಸುವ ಮೂಲಕ ಅಪ್ ಪಕ್ಷದ ನೇತಾರರ ಕ್ರೇಜಿ ವಾಲ್ ಗೆ ತಕ್ಕ ಪಾಠ ಕಲಿಸುವ ಮೂಲಕ ಅಧಿಕಾರದಿಂದ ಕೆಳಗಿಳಿಸಿ ಮೊದಲ ಬಾರಿಗೆ ಬಿಜೆಪಿ ಅಧಿಕಾರದ ಗದ್ದುಗೆ ಏರಿಸುವುದು ಹೆಮ್ಮೆಯ ಸಂಗತಿ. ವಿವಿಧ ರಾಜ್ಯಗಳಲ್ಲಿ ಮುಂದೆ ಬರುವ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಶತಸಿದ್ಧವಾಗಿದೆ ನಾವು ನೀವು ಪಕ್ಷದ ಸಂಘಟಿಸುವ ಮೂಲಕ ಒಗ್ಗಟ್ಟಿನಿಂದ ದುಡಿಯುವ ಸಂಕಲ್ಪ ಮಾಡಿದ್ದಲ್ಲಿ ಮುಂಬರುವ ಜಿಲ್ಲಾ ಪಂಚಾಯತಿ ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಪಕ್ಷ ಜಯಭೇರಿ ಬಾರಿಸಲಿದೆ ಎಂದರು. ಶಿರಹಟ್ಟಿ ಬಿಜೆಪಿ ಮಂಡಲ ಅಧ್ಯಕ್ಷ ಸುನಿಲ್ ಮಾಹಾಂತ ಶೆಟ್ಟರ್,ಬಿ.ಡಿ ಪಲ್ಲೇದ್,ಎಸ್ ಬಿ ಮಹಾಜನಶೆಟ್ಟರ್,ಫಕ್ಕಿರೇಶ ರಟ್ಟಿಹಳ್ಳಿ,ಮೋಹನ್ ಗುತ್ತೇಮ್ಮನವರ,ತಿಮ್ಮರೆಡ್ಡಿ ಮರೆಡ್ಡಿ,ಮಹೇಶ್ ಬಡ್ನಿ, ಅರ್ .ಜಿ ಹಿರೇಮಠ, ಮಂಜುನಾಥ ಕರೆಕೆನಂಚ್ಚಪ್ಪನವರ, ಜಗದೀಶ್ ಸಾಸಲ್ವಾಡ್ ಅಶೋಕ್ ಬಳ್ಳಾರಿ ಸಿದ್ದಲಿಂಗಯ್ಯ ಹೊಂಬಾಳೆಮಠ್ ಶಾಂತಗೌಡ ಪಾಟೀಲ್ ಶಿವಾನಂದ ಜಕ್ಕಲಿ ಇತರರಿದ್ದರು.