ಮುಧೋಳ 15: 2017-18 ನೇ ಸಾಲಿನ ಬಿಲ್ಲ ಬಾಕಿ ಹಣ ಕೊಡುವುದು ಹಾಗೂ ಪ್ರಸಕ್ತ ಹಂಗಾಮಿಗೆ ಕಬ್ಬಿನ ಬೆಲೆ ಘೋಷಣೆ ಮಾಡುವ ಕುರಿತು ಕಬ್ಬು ಬೆಳೆಗಾರರ ಬೇಡಿಕೆಯನ್ನು ಈಡೇರಿಸದ ಕಾಖರ್ಾನೆಗಳ ವಿರುದ್ದ ಶುಕ್ರವಾರ ಸಂತೆ ದಿನದಂದು ಮುಧೋಳ ಸಂಪೂರ್ಣ ಬಂದ್ ಕರೆ ನೀಡಲಾಗಿದೆ ಎಂದು ಕಬ್ಬು ಬೆಳೆಗಾರರ ಹೋರಾಟ ಸಮಿತಿಯ ಮುಖಂಡ ಕೆ.ಟಿ.ಪಾಟೀಲ ತಿಳಿಸಿದ್ದಾರೆ.
ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು ಕಬ್ಬು ಬೆಳೆಗಾರರ ಹೋರಾಟಗಾರರು ತಮ್ಮ ಬೈಕ್ಗಳ ಮೂಲಕ ಗುರುವಾರ ದಂದು ನಗರದಲ್ಲಿ ಸಂಚರಿಸಿ ಎಲ್ಲ ವ್ಯಾಪಾರಸ್ಥರು ಸ್ವಯಂ ಪ್ರೇರಿತರಾಗಿ ತಮ್ಮ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿ ಬಂದ್ ಕರೆಗೆ ಬೆಂಬಲಿಸುವಂತೆ ಮನವಿ ಮಾಡಿಕೊಂಡಿರುವದಾಗಿ ತಿಳಿಸಿದ್ದಾರೆ.
ಶುಕ್ರವಾರ ಬೆಳಿಗ್ಗೆ 6ರಿಂದ ಸಂಜೆ 6ರ ವರೆಗೆ ಬಂದ್ ಕರೆ ನೀಡಲಾಗಿದ್ದು,ಈ ಸಂದರ್ಭದಲ್ಲಿ ಹಾಲು ಸಾಗಿಸುವ ವಾಹನ ಮತ್ತು ಅಂಬ್ಯೂಲೆನ್ಸ್ ವಾಹನಗಳನ್ನು ಹೊರತು ಪಡಿಸಿ ಇತರೆ ಯಾವುದೆ ವಾಹನಗಳು ಸಂಚರಿಸದಂತೆ ನೋಡಿಕೊಳ್ಳಲಾಗುವುದು, ಕಾರಣ ಕಬ್ಬು ಬೆಳೆಗಾರರ ಸಮಿತಿಯವರು ಹಮ್ಮಿಕೊಂಡಿರುವ ಬಂದ್ ಕರೆಗೆ ಸಾರ್ವಜನಿಕರು ಬೆಂಬಲಿಸಿ, ಸಹಕರಿಸುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ.