ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರವಾಸ ಕಾರ್ಯಕ್ರಮ

Tour program by Chief Minister Siddaramaiah

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರವಾಸ ಕಾರ್ಯಕ್ರಮ 

ಗದಗ 13: ರಾಜ್ಯದ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಡಿಸೆಂಬರ್ 15 ರಂದು ಗದಗ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದು  ಇವರ ಈ ಕೆಳಗಿನಂತಿದೆ.  ಡಿಸೆಂಬರ್ 15 ರಂದು ಬೆ 11.05 ಗಂಟೆಗೆ  ಹುಬ್ಬಳ್ಳಿಯಿಂದ ಹೆಲಿಕಾಪ್ಟರ್ ಮೂಲಕ ಹೊರಟು  ಗದಗ ತಾಲೂಕು ಹರ್ಲಾಪುರ ಗ್ರಾಮದಲ್ಲಿ ಶ್ರೀಮತಿ ಕಮಲಾಬಾಯಿ ನಾರಾಯಣರಾವ್  ಕುಲಕರ್ಣಿ ಸರ್ಕಾರಿ  ಪ್ರೌಢಶಾಲೆ ಆವರಣದ ಹೆಲಿಪ್ಯಾಡ್‌ಗೆ  ಆಗಮಿಸುವರು.   ನಂತರ ಬೆ 11.30 ಗಂಟೆಗೆ  ಹರ್ಲಾಪುರ ಗ್ರಾಮದಲ್ಲಿ ಬೀರಲಿಂಗೇಶ್ವರ ದೇವಸ್ಥಾನ ಸೇವಾ ಸಮಿತಿ ಯಿಂದ ಆಯೋಜಿಸಲಾದ  ಬೀರಲಿಂಗೇಶ್ವರ ಹಾಗೂ  ಮಾಳಿಂಗರಾಯ ಮೂರ್ತಿ ಪ್ರತಿಷ್ಟಾಪನೆ ಹಾಗೂ ದೇವಸ್ಥಾನ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.   ನಂತರ ಮಧ್ಯಾಹ್ನ 12 ಗಂಟೆಗೆ ಹರ್ಲಾಪುರ ಗ್ರಾಮದ ಶ್ರೀಮತಿ ಕಮಲಾಬಾಯಿ ನಾರಾಯಣರಾವ್ ಕುಲಕರ್ಣಿ  ಸರ್ಕಾರಿ ಪ್ರೌಢಶಾಲೆ ಆವರಣದ  ಹೆಲಿಪ್ಯಾಡ್‌ನಿಂದ ಹೆಲಿಕಾಪ್ಟರ್ ಮೂಲಕ  ನಿರ್ಗಮಿಸಿ  ರೋಣ ಪಟ್ಟಣದ ದಿ. ಪೌಲ್ ಅಕಾಡೆಮಿ ಸ್ಕೂಲ್ ಆವರಣದಲ್ಲಿನ  ಹೆಲಿಪ್ಯಾಡ್ ತಲುಪುವುದು.  ಮಧ್ಯಾಹ್ನ 12.15 ಗಂಟೆಗೆ  ರೋಣದ ಡ್ರೋಣಾಚಾರ್ಯ ತಾಲೂಕು ಕ್ರೀಡಾಂಗಣದಲ್ಲಿ ಗದಗ ಜಿಲ್ಲಾಡಳಿತ,  ಜಿಲ್ಲಾ ಪಂಚಾಯತ್ ದಿಂದ ಆಯೋಜಿಸಿರುವ  ರೋಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.  ನಂತರ ಸಂಜೆ 4 ಗಂಟೆಗೆ ರೋಣದಿಂದ ಹೆಲಿಕಾಪ್ಟರ್ ಮೂಲಕ ನಿರ್ಗಮಿಸಿ ಸಂಜೆ 5 ಗಂಟೆಗೆ ಬೆಳಗಾವಿಯ ಸುವರ್ಣ ಸೌಧದ ಹೆಲಿಪ್ಯಾಡ್ ಗೆ ಪ್ರಯಾಣಿಸುವರು ಎಂದು ಪ್ರಕಟಣೆ ತಿಳಿಸಿದೆ.