ಶರಣರ ಮಾರ್ಗದರ್ಶನದಲ್ಲಿ ನಡೆದರೆ ನಿಜಮುಕ್ತಿ ಪ್ರಾಪ್ತಿ : ವಿರೇಶ ಪಾಟೀಲ

True liberation is attained if one follows the guidance of the Sharan: Viresh Patil

ಶರಣರ ಮಾರ್ಗದರ್ಶನದಲ್ಲಿ ನಡೆದರೆ ನಿಜಮುಕ್ತಿ ಪ್ರಾಪ್ತಿ : ವಿರೇಶ ಪಾಟೀಲ  

ಯಮಕನಮರಡಿ, 07 : ಸ್ಥಳೀಯ ಹುಣಸಿಕೊಳ್ಳಮಠದ ಲಿಂಗೈಕ್ಯ ಗುರುಸಿದ್ದಮಹಾಸ್ವಾಮಿಗಳ 31ನೇ ಪುಣ್ಯಸ್ಮರಣೋತ್ಸವ ಅಂಗವಾಗಿ ಆಯೋಜಿಸಲಾಗಿದ್ದ ಶರಣ ಚಿಂತಣಗೋಷ್ಠಿ ಪ್ರವಚನಕ್ಕೆ ದಿನಾಂಕ 6 ರಂದು ಆಗಮಿಸಿ ಶರಣ ಮತ್ತು ಉಪನ್ಯಾಸಕರಾದ ವೀರೇಶ ಪಾಟೀಲ ರವರು ಮಾತನಾಡುತ್ತಾ ನಾವೆಲ್ಲರೂ 12ನೇ ಶತಮಾನದಲ್ಲಿ ಆಗಿಹೋದ ಶರಣರ ಚಿಂತನ ಮಂಥನದಲ್ಲಿ ಕಾಲ ಕಳೆಯಬೇಕು ಅದರಿಂದ ನಮ್ಮ ಜನ್ಮ ಸಾರ್ಥಕವಾಗುತ್ತದೆ. ಅಲ್ಲದೇ ಅಜ್ಞಾನವೆಂಬ ಕತ್ತಲೆ ಹೋಗಲಾಡಿಸಲು ಉಜ್ವಲ ಮಾರ್ಗ ದೋರಕುವುದು ಶರಣರು ಹಾಕಿಕೊಟ್ಟ ಮಾರ್ಗವು ನಮ್ಮೆಲ್ಲರಿಗೆ ನಿರಂತರ ಜ್ಯೋತಿಯಾಗಿದೆ ಆಜ್ಯೋತಿ ಬೆಳಕಿನಲ್ಲಿ ಶರಣರ ಕುರಿತು ಆಚಾರ ವಿಚಾರಗಳನ್ನು ಮುಂದುವರೆಸಿಕೊಂಡು ಹೋಗಬೇಕಾಗಿದೆ. ಶ್ರೀ ಮಠದ ಪೂಜ್ಯರಾಗಿದ್ದ ಲಿಂಗೈಕ್ಯ ಗುರುಸಿದ್ದ ಮಹಾಸ್ವಾಮಿಗಳ ಮಾರ್ಗದರ್ಶನವು ನಮ್ಮೆಲ್ಲರಿಗೆ ಆದರ್ಶವಾಗಿದೆ ಅಪಾರ ಶಿಲ್ಪಕಲೆಗಳಿಂದ ಕೂಡಿದ ಶ್ರೀ ಮಠವು ನಮ್ಮೆಲ್ಲರಿಗೆ ಶರಣರ ತತ್ವಗಳನ್ನು ಭೋದಿಸುತ್ತದೆ. ಶ್ರೀ ಮಠವು ಜಾತಿ ದರ್ಮಗಳ ಭಾವೈಕತೆಯ ಕೆಂದ್ರವಾಗಿದೆ ಎಂದು ಹೆಳಿದರು. ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ಶ್ರೀ ಗಣಲಿಂಗ ದೇವರು ಉತ್ತರಾಧಿಕಾರಿಗಳು ಕುಮಾರೇಶ್ವರ ವೀರುಕ್ತಮಠ ಖಡಕಲಾಟ, ಶ್ರೀ ಸಿದ್ದಬಸವ ದೇವರು ಶ್ರೀ ಜಗದ್ಗುರು ಶೂನ್ಯ ಸಂಪಾದನಾ ಹುಣಸಿಕೊಳ್ಳಮಠ ಯಮಕನಮರಡಿ, ಉಪನ್ಯಾಸಕರಾದ ವಿರೇಶ ಪಾಟೀಲರು ಹಾಗೂ ಯ ವಿ ಸಂಘದ ಪ್ರಧಾನ ಗುರುಗಳಾದ ಹುನ್ನರಗಿ , ದುಂಡಪ್ಪಾ ಆಲೂರಿ, ಅನಿಲ ಮಂಗಾವತಿ ನಿವೃತ್ತ ಕೆ ಎಸ್ ಆರ್ ಟಿ ಸಿ ಅಧಿಕಾರಿಗಳು, ಕೆಂಪಣ್ಣಾ ಬಿಸಿರೊಟ್ಟಿ, ರುದ್ರಾ​‍್ಪ ಸಂಗಪ್ಪಗೋಳ ಮಜಲಟ್ಟಿ ಮೂರಾರ್ಜಿ ದೇಸಾಯಿ ವಸತಿ ಶಾಲೆ ಅಧ್ಯಕ್ಷರು, ದುಂಡಯ್ಯಾ ಹಿರೇಮಠ, ವಿಶ್ವನಾಥ ಧುಮಾಳ ರಾಜ್ಯ ನೌಕರರ ಸಂಘದ ರಾಜ್ಯಾಧ್ಯಕ್ಷರು, ಸಿದ್ದು ಪಾಟೀಲ ಲಿಂಗಾಯತ ಸಂಘಟನೆ ಜಿಲ್ಲಾ ಕಾರ್ಯದರ್ಶಿ, ಮಹಾದೇವ ಭೂಪಲೆ, ಕ ರಮೇಶ ರವರು ಉಪಸ್ಥತರಿದ್ದರು.