ಲೋಕದರ್ಶನ ವರದಿ
ಮುಧೋಳ 10: ಭಾರತದಲ್ಲಿ ಈ ಮುಂಚೆ ಗುಡಿ ಕೈಗಾರಿಕೆಗಳು ಹೆಚ್ಚಾಗಿದ್ದವು. ಗೃಹ ಬಳಕೆ ವಸ್ತುಗಳನ್ನು ತಾವೇ ತಯಾರಿಸಿಕೊಳ್ಳುವಂಥ ಚಾಣಾಕ್ಷತೆ ಮತ್ತು ಸ್ವಾವಲಂಬಿತನವನ್ನು ನಮ್ಮ ಜನ ಹೊಂದಿದ್ದರು. ಗೃಹ ಕೈಗಾರಿಕೆಗಳಿಂದ ನಿರುದ್ಯೋಗ ಸಮಸ್ಯೆ ದೂರವಾಗುತ್ತದೆ ಎಂದು ವೇದಮೂತರ್ಿ ಮಧ್ವಾಚಾರ ಜೋಶಿ ತಿಳಿಸಿದರು.
ಅವರು ನಗರದ ದೇಸಾಯಿಗಲ್ಲಿಯಲ್ಲಿ ನವ್ಯಾ ಸೋಪ್ಸನವರ ಗೃಹ ಕೈಗಾರಿಕೆಯನ್ನು ಉದ್ಘಾಟಿಸಿ ಶುಕ್ರವಾರ ಮಾತನಾಡುತ್ತಿದ್ದರು. ಶಿಕ್ಷಣ ಪಡೆಯುವದು ಜ್ಞಾನವೃದ್ಧಿಗಾಗಿ ಮಾತ್ರವಾಗಿದ್ದು, ನೌಕರಿ ಮಾಡುವದಕ್ಕಾಗಿಯೇ ಶಿಕ್ಷಣ ಎಂದು ತಿಳಿಯಬಾರದು. ಸ್ವ ಉದ್ಯೋಗದ ಬಗ್ಗೆ ನಮ್ಮ ಶಿಕ್ಷಣದಲ್ಲಿಯೂ ತಿಳಿಸಿಕೊಡುವದು ತುಂಬಾ ಅಗತ್ಯವಾಗಿದ್ದು, ಇಂದಿನ ಶಿಕ್ಷಣ ನಮ್ಮ ್ಬ ಯುವಕರನ್ನು ಒಬ್ಬಗುಮಾಸ್ಥನನ್ನಾಗಿ ಮಾತ್ರ ಮಾಡಲು ಸಾಧ್ಯ ಎಂದು ವಿಷಾದಿಸಿದರು. ಪ್ರಾಥಮಿಕ ಶಿಕ್ಷಣದಿಂದಲೇ ಗೃಹೋಪಯೋಗಿ ವಸ್ತುಗಳ ತಯಾರಿಕೆಯನ್ನು ಮಕ್ಕಳಿಗೆ ಕಲಿಸುವದರಿಂದ ಅವರು ಪರಾವಲಂಬಿಗಳಾಗುವದಿಲ್ಲ. ನಮ್ಮ ಶಿಕ್ಷಣ ಪದ್ಧತಿ ಬದಲಾಗಬೇಕಿದೆ ಎಂದರು. ಕೆ.ಎಸ್.ದೇಶಪಾಂಡೆ ಯವರು ಸ್ವಂತ ಬಂಡವಾಳ ಹಾಕಿ ನವ್ಯಾ ಸೋಪ್ಸ್ ಮತ್ತು ಡಿಟರ್ಜಂಟ್ಸ ಗೃಹ ಕೈಗಾರಿಕೆ ಪ್ರಾರಂಭಿಸಿರುವದು ನಿಜಕ್ಕು ಹೆಮ್ಮೆಯ ವಿಷಯವಾಗಿದ್ದು, ಗೃಹ ಕೈಗಾರಿಕೆಗಳನ್ನು ಹೆಚ್ಚು ಹೆಚ್ಚು ಪ್ರಾರಂಭಿಸುವದರೊಂದಿಗೆ ನಮ್ಮ ಯುವಕರು ಇನ್ನಷ್ಟು ಸ್ವಾವಲಂಬಿಗಳಾಗಬೇಕು. ಮತ್ತು ವಿದೇಶಿ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವದನ್ನು ತಡೆಯಬೇಕು. ಅದಕ್ಕೆ ನಮ್ಮ ಜನರು ಕೂಡಾ ಸ್ವದೇಶಿ ವಸ್ತುಗಳನ್ನೇ ಬಳಸಿ ಯುವಕರಿಗೆ ಪ್ರೋತ್ಸಾಹಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀನಿವಾಸ ದೇಶಪಾಂಡೆ ಮಾತನಾಡಿ ಪುರಾತನ ಭಾರತದಲ್ಲಿ ಬಟ್ಟೆ, ಕಂಬಳಿ ತಯಾರಿಕೆ, ಹಲ್ಲು ಪುಡಿ, ಪಾದರಕ್ಷೆ, ಕೊಬ್ಬರಿ ಎಣ್ಣೆ, ಆಯುವರ್ೇದ ಔಷಧಗಳು ಹೀಗೆ ಬಹುತೇಕ ಉತ್ಪನ್ನಗಳನ್ನು ಮನೆಯಲ್ಲಿಯೇ ತಯಾರಿಸಲಾಗುತ್ತಿತ್ತು, ಅಂದಿನ ಭಾರತೀಯರಲ್ಲಿ ಅಂಥದ್ದನ್ನೆಲ್ಲ ಮಾಡುವಷ್ಟು ತಾಳ್ಮೆ ಇತ್ತು, ಆದರೆ ಇಂದು ಅಧುನಿಕತೆಯ ಹೆಸರಿನಲ್ಲಿ ನಮ್ಮತನವನ್ನು ಮರೆಯುತ್ತಿದ್ದೇವೆ. ಬಿತ್ತನೆಯ ಬೀಜಗಳನ್ನು ಕೂಡಾ ವಿದೇಶದಿಂದ ತರಿಸುವಷ್ಟು ಆಲಸಿಗಳು ನಮ್ಮವರಾಗಿದ್ದಾರೆ ಎಂದು ವಿಷಾದಿಸಿದ ಅವರು. ಗುಡಿಕೈಗಾರಿಕೆಗಳಿಗೆ ಸರಕಾರ ಉತ್ತೇಜನ ನೀಡಬೇಕು. ಕೋಟಿ ಗಟ್ಟಲೆ ಬಂಡವಾಳಹಾಕಿ ಉದ್ಯೋಗ ಮಾಡುವದಕ್ಕಿಂತ ಕಡಿಮೆ ಬಂಡವಾಳದಲ್ಲಿ ಸಣ್ಣ ಉದ್ದಿಮೆಗಳನ್ನು ಪ್ರಾರಂಭಿಸಿ ಗುಣಮಟ್ಟದ ಉತ್ಪನ್ನ ಕೊಡುವತ್ತ ಯುವಕರು ಚಿಂತನೆ ಮಾಡಬೇಕು ಎಂದರು.
ನವ್ಯಾ ಸೋಪ್ಸನ ಉತ್ಪಾದಕ ಕೆ.ಎಸ್.ದೇಶಪಾಂಡೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ ಕಡಿಮೆ ಬಂಡವಾಳದಲ್ಲಿ ಸಧ್ಯಕ್ಕೆ ಉದ್ದಿಮೆ ಪ್ರಾರಂಭಿಸಿದ್ದು, ಸಂಪೂರ್ಣ ಆಗ್ಯರ್ಾನಿಕ್ ಬಳಕೆ ಮತ್ತು ಕೆಮಿಕಲ್ ಮುಕ್ತ ಸಾಬೂನು ತಯಾರಿಕೆ ನಮ್ಮದಾಗಿದ್ದು, ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ತಯಾರಿಸಬೇಕು ಮತ್ತು ಉತ್ತಮ ಗುಣಮಟ್ಟದ ಉತ್ಪನ್ನ ಕೊಡಬೇಕು ಎಂದು ಗುರಿಹೊಂದಲಾಗಿದೆ.
ಹತ್ತಾರು ಜನರಿಗೆ ಉದ್ಯೋಗ ನೀಡುವ ಗುರಿ ನಮ್ಮದಾಗಿದೆ. ಮನೆಯಲ್ಲಿ ಎಲ್ಲರೂ ಸೇರಿ ಮಾಡುವ ಉದ್ಯೋಗಗಳು ಸಾಕಷ್ಟಿದ್ದು, ಯುವಕರು ಮುಂದೆ ಬಂದರೆ ನಾವು ಮುಕ್ತವಾಗಿ ಸಲಹೆ ನೀಡುತ್ತೇವೆ. ಮಹಿಳೆಯರು, ಯುವಕರು ಮಾಡುವಂಥ ಉದ್ಯೋಗಗಳಿಗೆ ನಮ್ಮಲ್ಲಿ ಕೊರತೆಯಿಲ್ಲ ಎಂದರು.
ಮಮತಾ ಕಾರ್ಯಕ್ರಮ ನಿರೂಪಿಸಿದರು. ವಷರ್ಾ ವಂದಿಸಿದರು.