ಕೇಂದ್ರ ಸಚಿವ ಪ್ರಲ್ಹಾದ ಜೋಶಿ ದೂರವಾಣಿ ಮೂಲಕ ಕುಟುಂಬ ಸದಸ್ಯರಿಗೆ ಸಾಂತ್ವನ
ಶಿಗ್ಗಾವಿ 26 : ತಾಲೂಕಿನ ಹುಲಿಕಟ್ಟಿ ಗ್ರಾಮದ ಹೊರವಲಯದಲ್ಲಿ ಕುರಿ ಕಾಯುವ ಸಂದರ್ಭದಲ್ಲಿ ಮಾಳಪ್ಪ ಗಡ್ಡೆ ಎನ್ನುವವರು ಸಿಡಿಲು ಬಡಿದು ಸಾವನ್ನಪ್ಪಿದರು ಹಾಗೂ ಅವರ ಪುತ್ರ ಆದ ಆಕಾಶ ಗಡ್ಡೆ ಅವರಿಗೂ ಸಿಡಿಲಿನ ಹೊಡೆತಕ್ಕೆ ತೀವ್ರ ಗಾಯಗೊಂಡಿದ್ದು ಅವರ ಮನೆಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರ ನಿರ್ದೇಶನದ ಮೇರೆಗೆ ಯುವ ಮುಖಂಡ ನರಹರಿ ಕಟ್ಟಿಯವರು ಹಾಗೂ ಕೇಂದ್ರ ಸಚಿವರ ಕಾರ್ಯದರ್ಶಿ ಮಲ್ಲಿಕಾರ್ಜುನ ಪಾಟೀಲ ಮೃತರ ಹಾಗೂ ಗಾಯಾಳುಗಳ ಮನೆಗೆ ಹೋಗಿ ಕುಟುಂಬದ ಸದಸ್ಯರಿಗೆ ಸಾಂತ್ವಾನ ಹೇಳಿ ಅದೆ ಸಮಯಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ದೂರವಾಣಿ ಮೂಲಕ ಕುಟುಂಬ ಸದಸ್ಯರೊಂದಿಗೆ ಮಾತನಾಡಿ ಘಟನೆಯ ವಿವರಣೆ ಪಡೆದು ಹಾವೇರಿ ಜಿಲ್ಲಾಧಿಕಾರಿಗಳಿಗೆ ಹಾಗೂ ತಾಲೂಕ ದಂಢಾಧಿಕಾರಿಗಳಿಗೆ ದೂರವಾಣಿ ಮೂಲಕ ಮಾತನಾಡಿ ಮೃತರ ಕುಟುಂಬಕ್ಕೆ 25 ಲಕ್ಷ ರೂಪಾಯಿ ಹಾಗೂ ಗಾಯಗೊಂಡ ವ್ಯಕ್ತಿಗೆ 5 ಲಕ್ಷ ರೂಪಾಯಿ ಪರಿಹಾರ ಧನ ನೀಡಬೇಕೆಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ತಾಲೂಕ ಭಾಜಪ ಅಧ್ಯಕ್ಷ ವಿಶ್ವನಾಥ ಹರವಿ, ನಿಕಟಪೂರ್ವ ತಾಲೂಕ ಅಧ್ಯಕ್ಷ ಶಿವಾನಂದ ಮ್ಯಾಗೇರಿ, ಗಂಗಾಧರ ಗಡ್ಡೆ , ಗ್ರಾಮದ ಹಿರಿಯರು ಉಪಸ್ಥಿತರಿದ್ದರು