ವಚನಗಳು ಸಮಾಜದಲ್ಲಿ ಸಮಾನತೆ : ತಹಶೀಲ್ದಾರ ಅನಿಲ್ ಬಡಿಗೇರ

Vachanas Equality in Society : Tehsildar Anil Badigera

ವಚನಗಳು ಸಮಾಜದಲ್ಲಿ ಸಮಾನತೆ : ತಹಶೀಲ್ದಾರ ಅನಿಲ್ ಬಡಿಗೇರ  

ಶಿರಹಟ್ಟಿ  14: ಶರಣರು ಜಾತಿ, ಮತ, ಲಿಂಗ ತಾರತಮ್ಯಗಳನ್ನು ವಿರೋಧಿಸಿದರು ಮತ್ತು ಎಲ್ಲರೂ ಸಮಾನರು ಎಂದು ಪ್ರತಿಪಾದಿಸಿದರು. ಅವರ ವಚನಗಳು ಸಮಾಜದಲ್ಲಿ ಸಮಾನತೆ ಮತ್ತು ನ್ಯಾಯವನ್ನು ಸ್ಥಾಪಿಸಲು ಪ್ರೇರೇಪಿಸಿದವು ಎಂದು ತಹಶೀಲ್ದಾರ ಅನಿಲ್ ಬಡಿಗೇರ ಹೇಳಿದರು. ಕಾಯಕ ಶರಣರ ಜಯಂತಿ ಅಚರಣೆ ನಿಮಿತ್ತ ತಹಶೀಲ್ದಾರ್ ಕಚೇರಿಯಲ್ಲಿ ಏರಿ​‍್ಡಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಶರಣರು ಕಾಯಕವೇ ಕೈಲಾಸ ಎಂದು ಪ್ರತಿಪಾದಿಸಿದರು. ಪ್ರತಿಯೊಬ್ಬರೂ ತಮ್ಮ ಕೆಲಸವನ್ನು ಶ್ರದ್ಧೆಯಿಂದ ಮಾಡಬೇಕು ಮತ್ತು ಅದನ್ನು ದೇವರ ಸೇವೆ ಎಂದು ಭಾವಿಸಬೇಕು ಎಂದು ಅವರು ಹೇಳಿದರು. ಈ ತತ್ವವು ಸಮಾಜದಲ್ಲಿ ಶ್ರಮ ಸಂಸ್ಕೃತಿಯನ್ನು ಬೆಳೆಸಲು ಸಹಾಯ ಮಾಡಿತು ಎಂದರು.  ಶರಣರು ಸರಳ ಭಕ್ತಿಯ ಮಾರ್ಗವನ್ನು ಪ್ರತಿಪಾದಿಸಿದರು. ಅವರು ದೇವರನ್ನು ಪ್ರೀತಿಸಲು ಮತ್ತು ಆತನಿಗೆ ಶರಣಾಗಲು ಜನರನ್ನು ಪ್ರೋತ್ಸಾಹಿಸಿದರು. ಈ ಚಳುವಳಿಯು ಸಮಾಜದಲ್ಲಿ ಧಾರ್ಮಿಕ ಸಹಿಷ್ಣುತೆಯನ್ನು ಹೆಚ್ಚಿಸಲು ಸಹಾಯ ಮಾಡಿತು ಎಂದರು. ಶರಣರ ವಚನಗಳು ಕನ್ನಡ ಸಾಹಿತ್ಯಕ್ಕೆ ಒಂದು ವಿಶಿಷ್ಟ ಕೊಡುಗೆ. ಅವು ಸರಳ ಭಾಷೆಯಲ್ಲಿ ರಚಿಸಲ್ಪಟ್ಟಿವೆ ಮತ್ತು ಅವುಗಳಲ್ಲಿ ಸಾಮಾಜಿಕ, ಧಾರ್ಮಿಕ ಮತ್ತು ತಾತ್ವಿಕ ವಿಷಯಗಳ ಬಗ್ಗೆ ಬೆಳಕು ಚೆಲ್ಲಲಾಗಿದೆ. ಈ ವಚನಗಳು ಕನ್ನಡ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿವೆ ಎಂದರು ತಾಲ್ಲೂಕು ಶಸಾಅ ಅಧ್ಯಕ್ಷ ಎಂ.ಕೆ ಲಮಾಣಿ ಮಾತನಾಡಿ, ಶರಣರ ವಚನಗಳು ಸಮಾಜದಲ್ಲಿ ಮೌಲ್ಯಗಳು ಮತ್ತು ನೈತಿಕತೆಯನ್ನು ಬೆಳೆಸಲು ಸಹಾಯ ಮಾಡಿವೆ. ಅವರು ಸತ್ಯ, ನ್ಯಾಯ, ದಯೆ, ಪ್ರೀತಿ ಮತ್ತು ಸಹನೆಯಂತಹ ಮೌಲ್ಯಗಳನ್ನು ಪ್ರತಿಪಾದಿಸಿದರು. ಈ ಮೌಲ್ಯಗಳು ಸಮಾಜವನ್ನು ಉತ್ತಮಗೊಳಿಸಲು ಮತ್ತು ಜನರಲ್ಲಿ ಸದ್ಗುಣಗಳನ್ನು ಬೆಳೆಸಲು ಸಹಾಯಕವಾಗಿವೆ ಎಂದರು. ಈ ವೇಳೆ ಸಮಾಜ ಕಲ್ಯಾಣ ಅಧಿಕಾರ ಗೋಪಾಲ ಪವಾರ,ಉಪ ತಹಶಿಲ್ದಾರರ ಗಿರಿಜಾ ಪೂಜಾರ,ಸುಜತಾ ಸುಂಕದ ,ಎಂ ಎಂ ತಿರ್ಲಾಪೂರ,ಶಿರಸ್ತೇದಾರ ಸಂತೋಷ ಅಸ್ಕಿ, ಸಿ.ಕೆ ಮುಳುಗುಂದ, ನಜೀರ ಡಂಬಳ, ವಿನೋದ ಪಾಟೀಲ ಹಾಗೂ ಸಮಾಜದ ಪ್ರಮುಖ ಇದ್ದರು.