ಲೋಕದರ್ಶನ ವರದಿ
ವಿಜಯಪುರ 04: ಕನರ್ಾಟಕ ರಾಜ್ಯ ಗ್ರಾಮ ಪಂಚಾಯತ ನೌಕರರ 8ನೇ ಸಮ್ಮೇಳನವು ಇಂದಿಲ್ಲಿ ವಿಜಯಪುರ ತಾಲೂಕಾ ಪಂಚಾಯತ ಸಭಾ ಭವನದಲ್ಲಿ ನಡೆಯಿತು.
ತಾಲೂಕಾ ಪಂಚಾಯತ ಆಡಳಿತಾಧಿಕಾರಿಗಳಾದ ಬಿ.ಎಸ್.ರಾಠೋಡ ಅವರು ಜ್ಯೋತಿ ಬೆಳಗಿಸುವದರೊಂದಿಗೆ ಸಮ್ಮೇಳನ ಪ್ರಾರಂಭವಾಯಿತು.
ಸಮ್ಮೇಳನವನ್ನು ರಾಜ್ಯ ಉಪಾಧ್ಯಕ್ಷರಾದ ಭೀಮಶಿ ಕಲಾದಗಿ ಉದ್ಘಾಟಿಸಿ ಮಾತನಾಡಿ, ಕಡಿಮೆ ಸಂಬಳದಲ್ಲಿ ದುಡಿಯುತ್ತಿದ್ದ ಗ್ರಾ.ಪಂ. ನೌಕರರು ಸಂಘದ ಹೋರಾಟದ ಫಲವಾಗಿ ಇಂದು 14000 ರೂಗಳವರೆಗೆ ವೇತನ ಪಡೆಯಲು ಸಾಧ್ಯವಾಗಿದೆ ಇನ್ನು ಹಲವಾರು ಗ್ರಾ. ಪಂ. ಗಳಲ್ಲಿ ಸರಕಾರ ನಿಗಧಿಗೊಳಿಸಿದ ವೇತನ ನೀಡುತ್ತಿಲ್ಲ. ಸರಕಾರವು ಈ ಬಗ್ಗೆ ಕ್ರಮ ಜರುಗಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಖಾತ್ರಿ ಯೋಜನೆ ಸಮಪರ್ಕವಾಗಿ ಜಾರಿಯಾಗುತ್ತಿಲ್ಲ ಯಂತ್ರಗಳನ್ನು ಹಚ್ಚಿ ಕೆಲಸ ಮಾಡುತ್ತಿದ್ದಾರೆ ಇದನ್ನು ತಡೆಗಟ್ಟಬೇಕು. ಇವಿಎಂ ವೇತನವು ಎಲ್ಲ ಸಿಬ್ಬಂಧಿಗಳಿಗೆ ಸಿಗುವಂತೆ ಆಗಬೇಕು ಎಂದರು.
ಸಿಐಟಿಯು ಜಿಲ್ಲಾ ಕಾರ್ಯದಶರ್ಿ ಲಕ್ಷ್ಮಣ ಹಂದ್ರಾಲ ಜನವಾದಿ ಮಹಿಳಾ ಸಂಘ ರಾಜ್ಯ ಉಪಾಧ್ಯಕ್ಷ ಸುರೇಖಾ ರಜಪೂತ ಶುಭಾಷಯ ಕೋರಿ ಮಾತನಾಡಿದರು. ರಾಜು ಜಾಧವ ಅವರ ಸ್ವಾತದೊಂದಿಗೆ ಪ್ರಾರಂಭವಾದ ಉದ್ಘಾಟನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ರಂಗಪ್ಪಾ ದಳವಾಯಿ ಅವರ ಒಂದನೆಯೊಂದಿಗೆ ಮುಕ್ತಾಯವಾಯಿತು.
ಇದೇ ಸಂದರ್ಭದಲ್ಲಿ ಗಣ್ಯರಿಗೆ ಶಾಲು ಹೊದಿಸಿ ಹೂ ಹಣ್ಣು ನೀಡುವ ಮೂಲಕ ಸನ್ಮಾಣಿಸಿ ಗೌರವ ಸಲ್ಲಸಿದರು. ಈ ಸಂದರ್ಭದಲ್ಲಿ ಚಂದ್ರಶೇಖರ ವಾಲಿಕಾರ, ಶಿವಶಂಕರ ಯಾಳವಾರ, ದಶರಥ ದಳವಾಯಿ, ಗೋಪಾಲ ರಾಠೋಡ, ಸೋಮಲಿಂಗ ಮಾದರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.