ಹಳ್ಳಿಗಳು ಕಲೆ, ಸಾಹಿತ್ಯ, ರಂಗಭೂಮಿಯ ಜೀವಾಳ: ಅಂಜಲಿ ಬೆಳಗಲ್

Villages are the lifeblood of art, literature, and theater: Anjali Belgal

ಹಳ್ಳಿಗಳು ಕಲೆ, ಸಾಹಿತ್ಯ, ರಂಗಭೂಮಿಯ ಜೀವಾಳ: ಅಂಜಲಿ ಬೆಳಗಲ್ 

ಬಳ್ಳಾರಿ 09: ಹಳ್ಳಿಗಳು ಜಾನಪದ ಕಲೆ, ಸಾಹಿತ್ಯ, ರಂಗಭೂಮಿಯನ್ನು ಜೀವಂತವಾಗಿರಿಸುತ್ತವೆ ಎಂದು ಖ್ಯಾತ ಲೇಖಕಿ, ಕವಯಿತ್ರಿ ಅಂಜಲಿ ಬೆಳಗಲ್ ಹೇಳಿದರು. ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿಯ ಕೋಗಳಿ ರಥೋತ್ಸವದಲ್ಲಿ ಪಂಡಿತ ಪುಟ್ಟರಾಜ ಕವಿ ಗವಾಯಿಗಳ ಸೇವಾ ಟ್ರಸ್ಟ್‌ ಆಯೋಜಿಸಿದ್ದ ಪೌರಾಣಿಕ ನಾಟಕ ‘ರಕ್ತರಾತ್ರಿ’ ಪ್ರಹಸನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಹಳ್ಳಿಗಳೇ ಜನಪದ ಸೊಗಡಿನ ಜೀವನದ ಕಲೆ, ಸಾಹಿತ್ಯ ಮತ್ತು ರಂಗಭೂಮಿಗೆ ಜೀವಂತಿಕೆಯ ಪಸೆ ಮೂಡಿಸುವ ತಾಣವಾಗಿವೆ  ಎಂದು ತಿಳಿಸಿದರು. 

 ಕಲಾವಿದನಿಗೆ ಜಾತಿ, ಧರ್ಮದ ಭೇದವಿಲ್ಲ. ಕಲಾವಿದನಿಗೆ ಇರುವುದು ಒಂದೆ ಜಾತಿ. ಅದು ಕಲೆ ಮಾತ್ರ. ರಂಗಭೂಮಿ ಕಲೆಗೆ ಮೂಲವೇ ನಮ್ಮ ಹಳ್ಳಿಗಳು. ಜನಪದರಿಂದ ಹುಟ್ಟಿದ ಕಾವ್ಯ, ನಾಟಕ  ಎಂದಿಗೂ ಶ್ರಿಮಂತ. ಸಾರ್ವಜನಿಕ ಸಭೆ, ಸಮಾರಂಭಗಳಲ್ಲಿ ಭಾಗವಹಿಸಿ ಸಮಾಜಮುಖಿಯಾಗಿ ಕೆಲಸ ಮಾಡುವವರು ಮತ್ತು ಭಾವನೆಗಳನ್ನು ಹಂಚಿಕೊಳ್ಳುವವರು ಹೈ ಫೈ ವೇದಿಕೆಗಳಿಗೆ ಮಾತ್ರ ಸೀಮಿತವಾಗಬಾರದು. ಇಂತಹ ಕಟ್ಟ ಕಡೆಯ ಗ್ರಾಮಗಳಿಗೂ ಆಗಮಿಸಿ ತಮ್ಮ ವಿಚಾರಧಾರೆಗಳನ್ನು ಹಂಚಿಕೊಳ್ಳುವ ಮೂಲಕ ಗ್ರಾಮೀಣರಲ್ಲಿ ಉತ್ತೇಜನ ನೀಡಬೇಕು. ರಕ್ತರಾತ್ರಿ ನಾಟಕದ ವೇದಿಕೆ ಕಳೆಗಟ್ಟಿದೆ. ಇಂತಹ ವೇದಿಕೆಯನ್ನು ನಾನು ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ. ಹಳ್ಳಿಗಳೇ ಕಲೆ ಮತ್ತು ರಂಗಭೂಮಿಯ ಜೀವಾಳ. ಕೋಗಳಿ ಗ್ರಾಮದ ಹೆಸರು ಅಜಾರಾಮರ. ಏಕೆಂದರೆ ರಾಜ್ಯೊತ್ಸವ ಪ್ರಶಸ್ತಿಗಳು ಕೋಗಳಿ ಗ್ರಾಮದ ಕಲಾವಿದರಿಗೆ ಸಂದಿವೆ. ಗ್ರಾಮದಲ್ಲಿ ಹಲವಾರು ಸಮಾಜ ಸೇವೆ ಮಾಡಿ ಬಡತನದಲಿರುವ ಪ್ರತಿಭೆಗಳಿಗೆ ಶಿಕ್ಷಣಕ್ಕೆ ಸಹಾಯ ಹಸ್ತ ನೀಡಿ, ಕಲಾವಿದರನ್ನು ಪೋಷಿಸಿದ ಎಲೆ ಮರೆ ಕಾಯಿಯಂತೆ ಸೇವೆ ಸಲ್ಲಿಸುತ್ತಿರುವ ಕೋಗಳಿ ಬಸವರಾಜ್ ಅವರನ್ನು ಸ್ಮರಿಸಿದರು, 

ಬಸವರಾಜ್ ಅವರು ಮಾತನಾಡಿ, ಇಂದು ನಮ್ಮ ಹಳ್ಳಿಗಳಲ್ಲಿ ಕಲಾವಿದರನ್ಮು ಮತ್ತು ಶಿಕ್ಷಣವನ್ನು ಗುರುತಿಸುವುದೇ ತುಂಬಾ ಕಷ್ಟದ ಕೆಲಸ. ಏನೇ ತೊಂದರೆ ಆದರು ಜಾತಿ ಭೇದವಿಲ್ಲದ ಒಗ್ಗಟ್ಟಿಗೆ ಬಲ ಎಂಬಂತೆ ಸಹಾಯಕ್ಕೆ ಬರುತ್ತಾರೆ. ಕಲೆ, ಸಾಹಿತ್ಯ, ಶಿಕ್ಷಣಕ್ಕೆ ನಾನು ನನ್ನಿಂದಾದ ಪ್ರೋತ್ಸಾಹ ಸದಾ ನೀಡುತ್ತೇನೆ. ಇಂತಹ ನಾಟಕಗಳು ಇನ್ನೂ ಜೀವಂತ ಇರಬೇಕು. ಕೋಗಳಿ ಎಂಬ ಪುಟ್ಟ ಗ್ರಾಮದಲ್ಲಿ ವಿದ್ಯುತ್ ಇಲ್ಲದೆ ಕಗ್ಗತ್ತಲಲ್ಲಿ ಜೀವನ ನಡೆಯುತ್ತಿದ್ದು,  

ಆ ಸಂದರ್ಭದಲ್ಲಿ ಕೊಟ್ಟೂರಿನಿಂದ ಕೋಗಳಿಗೆ ವಿದ್ಯುತ್ ಅನ್ಮು ಬಸವರಾಜ್ ಅವರ ತಂದೆ ದಿವಂಗತ ಮರುಳಸಿದ್ದನಗೌಡ ಅವರು ಗ್ರಾಮದಲ್ಲಿ ಹಿಟ್ಟಿನಗಿರಣಿ ಹಾಕುವ ಮೂಲಕ ವಿದ್ಯುತ್ ಗ್ರಾಮಕ್ಕೆ ಬರುವಂತಾಯಿತು ಎಂದು ನೆನಪಿಸಿಕೊಂಡರು. ಇದೇವೇಳೆ ಯುಪಿಎಸ್ಸಿ ಪರೀಕ್ಷೆ ಬರೆದಿದ್ದ ಅಂಜಲಿ ಬೆಳಗಲ್ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.  ಗ್ರಾಮದ ಹಿರಿಯರಾದ ಕೆಂಚಪ್ಪ ಗೌಡ, ಶಂಕ್ರಯ್ಯ, ಉಪಸ್ಥಿತರಿದ್ದರು. ಕವಿ ವೀರೇಶ್ ನಿರೂಪಿಸಿದರು. ಬಳಿಕ ರಕ್ತರಾತ್ರಿ ನಾಟಕ ರಾತ್ರಿಯಿಡೀ ಪ್ರಹಸನಗೊಂಡು ಗ್ರಾಮಸ್ಥರು ಸಂಭ್ರಮಿಸಿದರು.