ಗದಗ 26: ಗದಗ ಬೆಟಗೇರಿ ನಗರದ ಜಿಲ್ಲಾ ಕಾರಾಗೃಹಕ್ಕೆ ಗದಗ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರಿಂದು (ದಿ.26) ಅನಿರೀಕ್ಷಿತ ಭೇಟಿ ನೀಡಿದರು. ಕಾರಾಗೃಹದಲ್ಲಿ ಇರುವ ಮೂಲಭೂತ ಸೌಕರ್ಯ, ಕಾರಾಗೃಹವಾಸಿಗಳಿಗೆ ಇರುವ ಸಮಸ್ಯೆ ಹಾಗೂ ಸ್ವಚ್ಛತೆ ಮತ್ತು ಆರೋಗ್ಯಕರ ವಾತಾವರಣ ಕುರಿತು ಜಿಲ್ಲಾಧಿಕಾರಿಗಳು ಪರಿಶೀಲಿಸಿದರು. ಕಾರಾಗೃಹ ಅಧಿಕಾರಿ ಕೆ.ಎಸ್.ಮಾನ್ವಿ ಕಾರಾಗೃಹವಾಸಿಗಳ ಕುರಿತು ಹಾಗೂ ಅವರಿಗೆ ನೀಡಲಾಗುತ್ತಿರುವ ಊಟ ಮತ್ತು ಇತರ ಸೌಲಭ್ಯಗಳ ಕುರಿತು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.