ಮತದಾರರ ಪಟ್ಟಿ ಪರಿಷ್ಕರಣೆ ಅರಿವು ಕಾರ್ಯಕ್ರಮ: ಮೊಹಮ್ಮದ ಮೊಹಸಿನ್

ಬಾಗಲಕೋಟೆ16: ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಈಗಾಗಲೇ ಪ್ರಾರಂಭವಾಗಿದ್ದು, ಪರಿಷ್ಕರಣೆ ಕಾರ್ಯವನ್ನು ಪರಿಣಾಮಕಾರಿಯಾಗಿ ಮಾಡುವ ನಿಟ್ಟಿನಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸರಕಾರದ ಕಾರ್ಯದಶರ್ಿ ಹಾಗೂ ಮತದಾರರ ಪಟ್ಟಿ ವೀಕ್ಷಕರಾದ ಮೊಹಮ್ಮದ ಮೊಹಸಿನ್ ಅಧಿಕಾರಿಗಳಿಗೆ ತಿಳಿಸಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಜರುಗಿದ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ನವೆಂಬರ 20ಕ್ಕೆ ಕೊನೆಗೊಳ್ಳಲಿದ್ದು, ಜಿಲ್ಲೆಯಲ್ಲಿ ಜನರು ಹೆಚ್ಚಾಗಿ ಸೇರ್ಪಡೆಗೊಳ್ಳುವ ಸಂತೆ, ಜಾತ್ರೆಗಳಲ್ಲಿ ಹಾಗೂ ನಗರ, ಪಟ್ಟಣಗಳ ಮಾರುಕಟ್ಟೆಗಳಲ್ಲಿ ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಾಲೋನಿಗಳಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿ, ಹಾಗೂ ವಗರ್ಾವಣೆ ಕುರಿತು ಹೆಚ್ಚಿನ ಅರಿವು ಮೂಡಿಸುವ ಕೆಲಸವಾಗಬೇಕು. ಚುನಾವಣೆಗೆ ಸಂಬಂಧಿಸಿದ ಕಾರ್ಯವು ಬಹಳ ಮಹತ್ವವಾಗಿದ್ದರಿಂದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಚಾಕಚಕ್ಯತೆಯಿಂದ ಕಾರ್ಯನಿರ್ವಹಿಸಬೇಕು ಎಂದರು.

ಪಿಯುಸಿ, ಪದವಿ ಕಾಲೇಜುಗಳಲ್ಲಿ, ಎನ್ಸಿಸಿ, ಎನ್ಎಸ್ಎಸ್ ಕಾರ್ಯಕ್ರಮಗಳಲ್ಲಿ ಹಾಗೂ ಚರ್ಚ, ಮಸೀದಿ ಹಾಗೂ ಮಂದಿರಗಳಲ್ಲಿ ಸಹ ಮತದಾರರ ಪಟ್ಟಿ ಪರಿಷ್ಕರಣೆ, ನೋಂದಣಿ ಕುರಿತು ಅರಿವು ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕೆಂದು ತಿಳಿಸಿದರು. ಪ್ರತಿ ಚುನಾವಣೆಗಳಲ್ಲಿ ರೂಲ್ಸ್ಗಳು ಬದಲಾವಣೆಗೊಳ್ಳುತ್ತಿರುತ್ತವೆ. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಸಹ ಅಪ್ಡೆಟ್ ಆಗಬೇಕು. ಈ ಕುರಿತು ಎಲ್ಲ ತಾಲೂಕುಗಳಲ್ಲಿ ರಾಜಕೀಯ ಪಕ್ಷಗಳ ಸಭೆ ನಡೆಸಲು ತಿಳಿಸಿದರು. ಮನೆ ಮನೆಗೆ ಭೇಟಿ ನೀಡಿ ಮತದಾರ ಪಟ್ಟಿ ಪರಿಶೀಲಿಸಬೇಕು ಹಾಗೂ ಬಿಎಲ್ಓಗಳ ಸಭೆ ಮಾಡಬೇಕೆಂದರು. ಬಿಎಲ್ಓಗಳಿಗೆ ಕಡ್ಡಾಯವಾಗಿ ಗುರುತಿನ ಚೀಟಿ ನೀಡಬೇಕೆಂದರು. 

ನಂತರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಈಗಾಗಲೇ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವು ಆರಂಭಗೊಂಡಿದ್ದು, ಅಕ್ಟೋಬರ 10ಕ್ಕೆ ಜಮಖಂಡಿ ಮತಕ್ಷೇತ್ರ ಹೊರತುಪಡಿಸಿ ಉಳಿದ 6 ವಿಧಾನಸಭಾ ಮತಕ್ಷೇತ್ರಗಳಲ್ಲಿ ಕರಡು ಮತದಾರರ ಪಟ್ಟಿಯನ್ನು ಗ್ರಾಮ ಚಾವಡಿ, ಮತಗಟ್ಟೆಗಳಲ್ಲಿ, ಗ್ರಾ.ಪಂ ಕಚೇರಿ, ಪಟ್ಟಣ ಪಂಚಾಯತಿ, ಪುರಸಭೆ, ನಗರಸಭೆ ಹಾಗೂ ತಾಲೂಕಾ ಕಚೇರಿಗಳಲ್ಲಿ ಪ್ರಚೂರಪಡಿಸಲಾಗಿದೆ. ಜಮಖಂಡಿ ವಿಧಾನಸಭಾ ಕ್ಷೇತ್ರದಲ್ಲಿ ನವೆಂಬರ 10 ರಂದು ಪ್ರಚೂರಪಡಿಸಲಾಗಿದೆ ಎಂದರು.

ಈಗಾಗಲೇ ರಾಜಕೀಯ ಪಕ್ಷಗಳಿಗೆ ಕರಡು ಮತದಾರರ ಪಟ್ಟಿಯನ್ನು ಪೂರೈಸಲಾಗಿದ್ದು, ಅವರ ಹಂತದಲ್ಲಿ ಬಿಎಲ್ಎಗಳ ನೇಮಕಾತಿ ಪ್ರಕ್ರಿಯೆ 3 ವಿಧಾನಸಭಾ ಮತಕ್ಷೇತ್ರಗಳಲ್ಲಿ ಆಗಿದೆ. ಉಳಿದ 4 ವಿಧಾನಸಭಾ ಕ್ಷೇತ್ರಗಳಲ್ಲಿ ನೇಮಕಾತಿ ಮಾಡುವುದು ಬಾಕಿ ಇವೆ. ಪ್ರತಿಯೊಂದು ಮತಗಟ್ಟೆಗಳಿಗೆ ಸಮರ್ಪಕವಾಗಿ ನಮೂನೆ-6, 7, 8 ಮತ್ತು 8ಎ ಗಳ ಲಭ್ಯತೆ ನೀಡಲಾಗಿದೆ. ನಮೂನೆ-6ಗೆ 2016, ನಮೂನೆ-7ಗ ೆ 1189, ನಮೂನೆ-8ಗೆ 792, ನಮೂನೆ-8ಎಗೆ 182 ಅಜರ್ಿಗಳು ಸ್ವೀಕೃತವಾಗಿವೆ. ಈ ಪೈಕಿ ನಮೂನೆ-6ಕ್ಕೆ 1658, ನಮೂನೆ-7ಕ್ಕೆ 757, ನಮೂನೆ-8ಕ್ಕೆ 406 ಹಾಗೂ ನಮೂನೆ-8ಎಗೆ 103 ಡಾಟಾ ಎಂಟ್ರಿ ಹಾಗೂ ಇಂದ್ರೀಕರಣ ಆಗಿದೆ ಎಂದರು.

ಯುವ ಮತದಾರರು ಹಾಗೂ ಮತದಾರ ಪಟ್ಟಿಯಿಂದ ಬಿಟ್ಟುಹೋದ ಮತದಾರ ಸೇರ್ಪಡೆಗೆ ಕೈಗೊಂಡ ಸ್ವೀಪ್ ಕಾರ್ಯಕ್ರಮದ ಮೂಲಕ ನೋಂದಣಿ ಮಾಡಲು ಕ್ರೀಯಾ ಯೋಜನೆ ರೂಪಸಿಸಿದ್ದು, ಕ್ರಮಕೈಗೊಳ್ಳಲಾಗುತ್ತಿದೆ. ಇಆರ್ಓ, ಎಇಆರ್ಓ ಮತ್ತು ಡಿಇಓಗಳ ಮಟ್ಟದಲ್ಲಿ ಸಹಾಯವಾಣಿ ಕೇಂದ್ರದ ಸ್ಥಾಪನೆ ಮಾಡಲಾಗಿದೆ. ಇಆರ್ಎಂಎಸ್ ಪೋರ್ಟಲ್ನ ವ್ಯವಸ್ಥಿತ ರೀತಿಯಲ್ಲಿ ಕಾರ್ಯನಿರ್ವಹಣೆ ಸಮರ್ಪಕವಾಗಿದೆ ಎಂದು ತಿಳಿಸಿದರು.

ನವೆಂಬರ 20 ವರೆಗೆ ನಮೂನೆ6, 7, 8 ಮತ್ತು 8ಎ ಗಳನ್ನು ಸ್ವೀಕರಿಸಲು ಅಂತಿಮ ದಿನಾಂಕ ನಿಗಧಿಪಡಿಸಲಾಗಿದ್ದು, ಬಿಎಲ್ಓ, ಸಹಾಯವಾಣಿ ಕೇಂದ್ರ ಹಾಗೂ ಸಿಎಸ್ಸಿ ಮೂಲಕ ಮತದಾರರು ತಮ್ಮ ಹೆಸರನ್ನು ಮತದಾರರ ಪಟ್ಟಿಗೆ ಸೇರ್ಪಡೆ, ತೆಗೆಯುವಿಕೆ, ವಗರ್ಾವಣೆ ಹಾಗೂ ತಿದ್ದುಪಡಿಯ ಬಗ್ಗೆ ಈ ಅವಧಿಯಲ್ಲಿ ಅಜರ್ಿ ಸಲ್ಲಿಸಬಹುದಾಗಿದೆ. ಮತದಾರರ ಗುರುತಿನ ಚೀಟಿ ನಂಬರ್ ತಿಳಿದುಕೊಳ್ಳಲು ಚುನಾವಣಾ ಆಯೋಗದ ವತಿಯಿಂದ 1950 ಕಾಲ್ ಸೆಂಟರ್ಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ. ಮತದಾರರ ಗುರುತಿನ ಚೀಟಿ ಕಳೆದುಹೋದಲ್ಲಿ ನಿಗಧಿತ ಶುಲ್ಕವನ್ನು ಆಯಾ ತಾಲೂಕು ಕೇಂದ್ರಗಳಲ್ಲಿ ಪಾವತಿಸಿ ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ, ಜಿ.ಪಂ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಗಂಗೂಬಾಯಿ ಮಾನಕರ, ಉಪವಿಭಾಗಾಧಿಕಾರಿಗಳಾದ ಎಚ್.ಜಯ, ಮಹಮ್ಮದ ಇಕ್ರಮ್ ಸೇರಿದಂತೆ ಇತರರು ಉಪಸ್ಥಿತರಿದ್ದರು.