ಮುಂಬೈ, ಮೇ 2 ಸನ್ ರೈಸರ್ಸ್ ಹೈದರಾಬಾದ್ ತಂಡದ ಸ್ಫೋಟಕ ಆರಂಭಿಕ ಬ್ಯಾಟ್ಸ್ಮನ್ ಡೇವಿಡ್ ವಾರ್ನರ್ ಇನ್ನುಳಿದ ಐಪಿಎಲ್ ಪಂದ್ಯಗಳಲ್ಲಿ ಆಡದೆ ಇರುವುದು ಮುಂಬೈ ಇಂಡಿಯನ್ಸ್ಗೆ ಪ್ರಯೋಜನವಾಗಲಿದೆ ಎಂದು ಮುಂಬೈ ಇಂಡಿಯನ್ಸ್ ಆಲ್ ರೌಂಡರ್ ಕಿರೋನ್ ಪೊಲಾರ್ಡ್ ಹೇಳಿದ್ದಾರೆ.
ಮೇ.30 ರಿಂದ ಇಂಗ್ಲೆಂಡ್ ಹಾಗೂ ವೇಲ್ಸ್ನಲ್ಲಿ ನಡೆಯಲಿರುವ ಐಸಿಸಿ ವಿಶ್ವಕಪ್ ನಿಮಿತ್ತಾ ಆಸ್ಟ್ರೇಲಿಯಾ ತಂಡ ಪೂರ್ವ ತಯಾರಿ ನಡೆಸಲಿದೆ. ಹಾಗಾಗಿ, ಡೇವಿಡ್ ವಾರ್ನರ್ ಐಪಿಎಲ್ ಇನ್ನುಳಿದ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ಪ್ರಸಕ್ತ ಆವೃತ್ತಿಯ 12 ಪಂದ್ಯಗಳಲ್ಲಿ ವಾರ್ನರ್ ತಮ್ಮ ಅದ್ಭುತ ಬ್ಯಾಟಿಂಗ್ನಿಂದಾಗಿ ಒಟ್ಟು 692 ರನ್ ಕಲೆ ಹಾಕಿ ಅತ್ಯಧಿಕ ಐಪಿಎಲ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.
ಇಂದು ಐಪಿಎಲ್ 51ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಸನ್ ರೈಸರ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಏ. 29ರಂದು ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಕೊನೆಯ ಪಂದ್ಯವಾಡಿದ್ದರು. ವಾರ್ನರ್ ಅನುಪಸ್ಥಿ ಸನ್ ರೈಸಸರ್್ ಹೈದರಾಬಾದ್ ತಂಡಕ್ಕೆ ದೊಡ್ಡ ನಷ್ಟವಾಗಲಿದೆ ಎಂದು ಪೊಲಾರ್ಡ್ ಅಭಿಪ್ರಾಯಪಟ್ಟಿದ್ದಾರೆ.
ಡೇವಿಡ್ ವಾರ್ನರ್ ಇಂದಿನ ಪಂದ್ಯದಲ್ಲಿ ಇಲ್ಲದೇ ಇರುವುದು ಮುಂಬೈ ಇಂಡಿಯನ್ಸ್ ತಂಡಕ್ಕೆ ಲಾಭವಾಗಲಿದೆ. ಇದನ್ನೂ ನಾವು ಸಂಪೂರ್ಣವಾಗಿ ಸದುಪಯೋಗಪಡಿಸಿಕೊಳ್ಳಲಿದ್ದೇವೆ ಎಂದು ಪೊಲಾಡರ್್ ಹೇಳಿದರು.
ಚೆಂಡು ವಿರೂಪ ಪ್ರಕರಣದಲ್ಲಿ ಸ್ಟೀವ್ ಸ್ಮಿತ್ ಅವರ ಜತೆ ಒಂದು ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ಅಮಾನತುಗೊಂಡಿದ್ದ ಡೇವಿಡ್ ವಾರ್ನರ್, ಕಳೆದಮಾರ್ಚ್ ಅಂತ್ಯದಲ್ಲಿ ತಮ್ಮ ಶಿಕ್ಷೆಯ ಅವಧಿ ಮುಗಿದಿತ್ತು. ತಮ್ಮ ಬ್ಯಾಟಿಂಗ್ ಲಯ ಪರೀಕ್ಷೆ ಮಾಡಲು ಐಪಿಎಲ್ಗೆ ಆಗಮಿಸಿದ್ದ ಡೇವಿಡ್ ವಾರ್ನರ್ ನಿರೀಕ್ಷೆಗೂ ಮೀರಿ ಅಮೋಘ ಬ್ಯಾಟಿಂಗ್ ಮಾಡಿದರು. ಇದರೊಂದಿಗೆ ಒಂದು ವರ್ಷ ಆಸ್ಟ್ರೇಲಿಯಾ ತಂಡದಿಂದ ದೂರ ಉಳಿದರೂ ತನ್ನ ಸಾಮಾಥ್ರ್ಯ ಕುಂದಿಲ್ಲ ಎಂದು ಕ್ರಿಕೆಟ್ ಜಗತ್ತಿಗೆ ಸಾಬೀತು ಮಾಡಿದರು.