ಮಾಂಜರಿ ದಿ4: ನೆರೆಯ ಮಹಾರಾಷ್ಟ್ರದ ಕಾಳಮ್ಮಾವಾಡಿ ಜಲಾಶಯದಿಂದ ದೂಧಗಂಗಾ ನದಿಗೆ ಕೊನೆಯ ಕಂತಿನ ಆರ್ಧ ಟಿ.ಎಮ್.ಸಿ ನೀರು ಸುಳಕೂಡ ಬಾಂದಾರದಿಂದ ಬಿಡುಗಡೆ ಮಾಡಿರುವುದರಿಂದ ದೂಧಗಂಗಾ ನದಿಯ ದಂಡೆಯ ರೈತರಿಗೆ ಸಂತಸ ಮೂಡಿಸಿದೆ.
ಕಳೆದ ಏರಡು ವಾರಗಳಿಂದ ದೂಧಗಂಗಾ ನದಿಯು ಸಂಪೂರ್ಣ ಬರಿದಾಗಿ ರೈತರು ಮತ್ತು ಜಾನುವಾರುಗಳು ನೀರಿನ ತೊಂದರೆ ಅನುಭವಿಸುವ ಪ್ರಸಂಗ ಬಂದೂದಗಿತ್ತು, ಆದರೆ ದೂಧಗಂಗಾ ನದಿಗೆ ನೀರು ಹರಿದು ಬರುತ್ತಿರುವುದರಿಂದ ರೈತರು ನಿಟ್ಟಿಸಿರು ಬಿಟ್ಟಿದ್ದಾರೆ. ದೂಧಗಂಗಾ ನದಿಗೆ ಕಾಳಮ್ಮಾವಾಡಿ ಜಲಾಶಯದಿಂದ ಬಿಡುವ ನೀರು ಪ್ರಸಕ್ತ ಸಾಲಿನ ಕಂತುಗಳು ಮುಕ್ತಾಯವಾಗಿದ್ದು, ನದಿಯಲ್ಲಿ ಮಳೆಯ ಹೊಸ ನೀರು ಬರುವವರೆಗೆ ಕಾಯುವ ಪ್ರಸಂಗ ನದಿ ತೀರದ ಜನತೆಗೆ ಬಂದೊದಗಿದೆ.
ಬೇಸಿಗೆ ಆರಂಭವಾದಾಗಿನಿಂದ ಇಹೊತ್ತಿನವರೆಗೆ ಮಳೆ ಸುರಿಯದೆ ಇರುವುದರಿಂದ ರೈತರಲ್ಲಿ ನಿರಾಶೆ ಮೂಡಿಸಿದ್ದು, ರೈತರು ಮಳೆಯ ನಿರೀಕ್ಷೆಯಲ್ಲಿದ್ದಾರೆ, ಬಿಸಲಿನ ಧಗೆಗೆ ಬೆಳೆದ ಪೈರುಗಳು ಬಾಡಿಹೊಗುತ್ತಿದ್ದವು, ನದಿಗೆ ನೀರು ಬಂದಿರುವುದರಿಂದ ಸ್ವಲ್ಪ ಜೀವ ಬಂದಂತಾಗಿದೆ.
ದೂಧಗಂಗಾ ನದಿಯ ದಂಡೆಯ ಬಾರವಾಡ, ಮಾಂಗೂರ, ಕಾರದಗಾ, ಜನವಾಡ, ಸದಲಗಾ, ಮಲಿಕವಾಡ ಮತ್ತು ಯಕ್ಸಂಬಾ ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆ ತುತರ್ು ಬಗೆಹರಿದಂತಾಗಿದೆ. ಬಿಡುಗಡೆ ಮಾಡಿರುವ ನೀರಿನ ಹರಿವು ಮಂದಗತಿಯಲ್ಲಿದ್ದು, ನೀರು ಸದಲಗಾ ದಾಟಿದ್ದು, ಮಲಿಕವಾಡ, ಯಕ್ಸಂಬಾ ಪಟ್ಟಣದ ವರಗೆ ನೀರು ಮುಟ್ಟುವ ನೀಟ್ಟಿನಲ್ಲಿ ನದಿ ತೀರದ ವಿದ್ಯೂತ್ ಕಡಿತ ಗೊಳಿಸಿದ್ದು, ಇನ್ನು ಯಕ್ಸಂಬಾ ಪಟ್ಟಣಕ್ಕೆ ನೀರು ಮುಟ್ಟಬೇಕಿದೆ.