ಮೋದಿ ಅವರಿಗೆ ರಾಮಮಂದಿರ ನಿಮರ್ಾಣ ಬೇಡ ಎಂದಿದ್ದವರು ಯಾರು?: ಎಚ್.ಕೆ ಪಾಟೀಲ್

ಬಾಗಲಕೋಟೆ: ಕಳೆದ ಐದು ವರ್ಷಗಳ ಅವಧಿಯಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ನಿಮರ್ಾಣ ಮಾಡದಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಯಾರೂ ತಡೆ ಹಿಡಿದಿರಲಿಲ್ಲ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್ ಕೆ ಪಾಟೀಲ್ ಹೇಳಿದ್ದಾರೆ.  

   ಇಲ್ಲಿನ ಬೀಳಗಿಯಲ್ಲಿ ಕಾಂಗ್ರೆಸ್ ಅಭ್ಯಥರ್ಿ ಪರ ಚುನಾವಣಾ ಪ್ರಚಾರ ಸಭೆ ನಡೆಸಿದ ಅವರು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, 5 ವರ್ಷಗಳ ಆಡಳಿತದಲ್ಲಿ ಮೋದಿ ಸಕರ್ಾರ ರಾಮಮಂದಿರ ವಿಚಾರವನ್ನು ಪ್ರಸ್ತಾಪವ ಮಾಡಿಲ್ಲ. ಚುನಾವಣೆ ಸಮೀಪಿಸುತ್ತಿರುವಂತೆಯೇ ಬಿಜೆಪಿ ಸಕರ್ಾರ ಸುಪ್ರೀಂ ಕೋಟ್ರ್ಗ ಅಜರ್ಿ ಸಲ್ಲಿಸಿದೆ. 5 ವರ್ಷದಲ್ಲಿ ರಾಮಮಂದಿರ ಕಟ್ಟುವುದು ಬೇಡ ಅಂದಿದ್ದವರು ಯಾರು ಎಂದು ಪ್ರಶ್ನಿಸಿದರು.  

  ಬಿಜೆಪಿಯ ಪ್ರಣಾಳಿಕೆಯಲ್ಲಿ ಸುಳ್ಳುಗಳ ಸರಮಾಲೆಯೇ ಇದೆ. ನಿವೃತ್ತಿ ವೇತನ, ಜಮ್ಮು - ಕಾಶ್ಮೀರಕ್ಕೆ ಪ್ರತ್ಯೇಕ ಸ್ಥಾನಮಾನ ನೀಡುವ ಸಂವಿಧಾನದ 370ರ ವಿಧಿ  ರದ್ದು ವಿಚಾರವನ್ನು ಬಿಜೆಪಿ ಈಗ ಪ್ರಸ್ತಾಪಿಸುತ್ತಿದೆ. ಅದಾನಿ - ಅಂಬಾನಿ ಹಾಗೂ ತಮಗೆ ಆಪ್ತರಾದ ಕೆಲ ಉದ್ಯಮಿಗಳಿಗೆ ಅನುಕೂಲ ಮಾಡುವ ಕಾನೂನು ಜಾರಿ ಮಾಡಿದ ಇವರಿಗೆ 5 ವರ್ಷದ ಆಡಳಿತಾವಧಿಯಲ್ಲಿ ಈ ಎಲ್ಲಾ ವಿಷಯಗಳು ನೆನಪಾಗಲಿಲ್ಲ ಏಕೆ ಎಂದರು.  

  ಮೋದಿ ಆಡಳಿತದಲ್ಲಿ ಹೆಚ್ಚಿನ ತೊಂದರೆ ಅನುಭವಿಸಿದ್ದು ರೈತರು. ಕೃಷಿಕರ ಆದಾಯ 2 ಪಟ್ಟು ಮಾಡುವ ಭರವಸೆ ನೀಡಿದ್ದರು. ಆದರೆ ವಾಸ್ತವವಾಗಿ ರೈತರ ಅದಾಯ ಅರ್ಧಕ್ಕೆ ಇಳಿದಿದೆ. 

   ಬಿಜೆಪಿಯ ಅಚ್ಛೇ ದಿನ್ ನೋಟು ಅಮಾನ್ಯ ಮಾಡಿ ದಾಗಲೇ ಹೊರಟು ಹೋಯಿತು ಎಂದು ಟೀಕಿಸಿದರು. ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ರೈತ ಹಾಗೂ ಜನಪರ ಅಂಶಗಳನ್ನು ನೀಡಿದ್ದು, ರೈತರ ಸಾಲ ಮನ್ನಾ ಕಾಂಗ್ರೆಸ್ ನ ಮೊದಲ ಆದ್ಯತೆಯಾಗಿದೆ. ನ್ಯಾಯ್ ಯೋಜನೆ ದೇಶದ ಬಡಜನರ ಜೀವನದಲ್ಲಿ ನೆಮ್ಮದಿ ತರಲಿದೆ. ಕಪ್ಪು ಹಣ ಗುಡಿಸಿ ಹಾಕಿ ಎಲ್ಲರ ಖಾತೆಗೆ 15 ಲಕ್ಷ ಜಮೆ ಮಾಡುವ ಭರವಸೆ ಹಾಗೆಯೇ ಉಳಿದಿದೆ. ಆದರೆ ಒಬ್ಬರ ಖಾತೆಗೂ 15 ಸಾವಿರ ರೂಪಾಯಿ ಕೂಡ ಬಂದಿಲ್ಲ. ವಚನ ಭ್ರಷ್ಟರಾಗಿರುವ ಮೋದಿ ಅವರನ್ನು ಬೆಂಬಲಿಸುವಂತೆ ಮತ ಕೇಳಲು ಬಿಜೆಪಿಯವರಿಗೆ ನೈತಿಕ ಹಕ್ಕಿಲ್ಲ ಎಂದರು