ಬೆಳಗಾವಿ: ಪರಿಶ್ರಮಕ್ಕೆ ಲಕ್ಷ್ಮೀ- ಸರಸ್ವತಿ ತಾನಾಗಿಯೆ ಒಲಿಯುತ್ತಾರೆ: ಡಾ.ಜಂಬಗಿ

ಲೋಕದರ್ಶನ ವರದಿ

ಬೆಳಗಾವಿ 19:  ಜಂಬಗಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ರವಿವಾರ ದಿ. 16ರಂದು ಓರಿಯೆಂಟೇಶನ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಸಂಸ್ಥೆಯ ಪ್ರಧಾನ ಕಾರ್ಯದಶರ್ಿ ಡಾ. ವಷರ್ಾ ಜಂಬಗಿ ಮಾತನಾಡಿ, ಪ್ರಾಮಾಣಿಕತೆ ಮತ್ತು ಪರಿಶ್ರಮಕ್ಕೆ ಲಕ್ಷ್ಮೀ ಮತ್ತು ಸರಸ್ವತಿ ತಾನಾಗಿಯೆ ಒಲಿಯುತ್ತಾರೆ ಎಂದು ಶ್ರದ್ಧೆಯಿಂದ ಕಲಿಯುವ ಗುಟ್ಟನ್ನು ವಿದ್ಯಾಥರ್ಿಗಳಿಗೆ ಹೇಳಿದರು. ಸತತ ಪರಿಶ್ರಮ ಫಲವನ್ನು ನೀಡುತ್ತದೆ ಎಂದು ಹೇಳಿದರು. ಸಂಸ್ಥೆಯ ಸಂಸ್ಥಾಪಕ ಡಾ. ಲಕ್ಷ್ಮಣ ಜಂಬಗಿಯವರು ಮಾತನಾಡಿ, ವಿದ್ಯಾಥರ್ಿಗಳ ಸರ್ವತೋಮುಖ ಬೆಳವಣಿಗೆಗೆ ನಮ್ಮ ಸಂಸ್ಥೆಯು ಶ್ರಮಿಸುತ್ತದೆ. ನಿಮ್ಮ ಪ್ರೀತಿ ವಿಶ್ವಾಸಕ್ಕೆ ಚಿರಋಣಿ ಎಂದು ಪಾಲಕರಿಗೆ ಹೇಳಿದರು. ನಿಮ್ಮ ಮಕ್ಕಳು ಇನ್ನು ಮುಂದೆ ನಮ್ಮ ಮಕ್ಕಳಂತೆ ನಮ್ಮ ವಿದ್ಯಾಸಂಸ್ಥೆಯು ಮತ್ತು ಉಪನ್ಯಾಸಕರು ನೋಡಿಕೊಳ್ಳುತ್ತಾರೆ. ಯಾವುದೇ ಕಾಳಜಿಯನ್ನು ಮಾಡಬೇಡಿ. ನಾವು ಮಕ್ಕಳಿಗೆ ಗುಣಮಟ್ಟ ಶಿಕ್ಷಣವನ್ನು ನೀಡುತ್ತೇವೆ. ನಿಮ್ಮ ನಮ್ಮ ಬೆಳೆಸುವವರೆಂದು ಪಾಲಕರಿಗೆ ತಿಳಿಸಿದರು. 

ಕಾರ್ಯಕ್ರಮದಲ್ಲಿ ಸಂಸ್ಥೆಯ ನಿದರ್ೇಶಕ ಬಾಲಚಂದ್ರ ಬಾಳಿರವರು ಉಪನ್ಯಾಸಕರ ಪರಿಚಯ ಮಾಡಿದರು. ಮಹಾವಿದ್ಯಾಲಯದ ಶೈಕ್ಷಣಿಕ ವರ್ಷದ ಮುಖ್ಯಸ್ಥೈ ರಾಘವೇಂದ್ರ ವಾಷರ್ಿಕ ಯೋಜನೆ ಮಂಡಿಸಿದರು. ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಪ್ರಾಚಾರ್ಯ ಅರುಣಕುಮಾರ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ರಫೀಕ್  ನಿರೂಪಿಸಿದರು, ಜಯಲಕ್ಷ್ಮಿ ಸ್ವಾಗತಿಸಿದರು. ವಿದ್ಯಾಥರ್ಿನಿಯರು ಪ್ರಾರ್ಥನಾಗೀತೆಯನ್ನು ಹಾಡಿದರು, ಅನಿತಾ ವಂದಿಸಿದರು. ಕಾರ್ಯಕ್ರಮದಲ್ಲಿ ಬೋಧಕ ಮತ್ತು ಬೋಧಕೇತರ ವರ್ಗದವರು ಹಾಜರಿದ್ದರು.

ಓರಿಯೆಂಟೇಶನ್ ಕಾರ್ಯಕ್ರಮದ ಜೊತೆಗೆ ವಿಶ್ವ ಪರಿಸರ ದಿನಾವರಣೆ ಅಂಗವಾಗಿ ಮಹಾವಿದ್ಯಾಲಯದಲ್ಲಿ ವಿದ್ಯಾಥರ್ಿಗೊಂದು ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆ ಅಧಿಕಾರಿ ಸಚಿನ ಒಂದು ಸಸಿ ನೆಡುವ ಮೂಲಕ ಸುಮಾರು 65 ಕ್ಕಿಂತ ಹೆಚ್ಚು ಸಸಿಗಳನ್ನು ನೆಡಲಾಯಿತು.