ಹಾವೇರಿ16: ಆಯೋಗದ ಮಾರ್ಗಸೂಚಿಯಂತೆ ದಕ್ಷತೆಯಿಂದ ಕಾರ್ಯನಿರ್ವಹಿಸಿ ವ್ಯವಸ್ಥಿತ ಮತದಾನ ಪ್ರಕ್ರಿಯೆ ನಡೆಸಲು ನಿಯಮಾವಳಿಗಳನ್ನು ನಿಖರವಾಗಿ ಹಾಗೂ ಸ್ಪಷ್ಟವಾಗಿ ತಿಳಿದುಕೊಳ್ಳುವಂತೆ ಮತದಾನ ಪ್ರಕ್ರಿಯೆಗೆ ನಿಯೋಜಿತ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಕೇಂದ್ರ ಚುನಾವಣಾ ಸಾಮಾನ್ಯ ವೀಕ್ಷಕರಾದ ಡಾ.ಅಖ್ತರ್ ರಿಯಾಜ್ ಅವರು ಸಲಹೆ ನೀಡಿದರು.
ಮತಗಟ್ಟೆ ಅಧ್ಯಕ್ಷಾಧಿಕಾರಿ ಹಾಗೂ ಸಹಾಯಕ ಅಧ್ಯಕ್ಷಾಧಿಕಾರಿ ಮತಗಟ್ಟೆ ಸಹಾಯಕರಿಗೆ ಸೋಮವಾರ ಹಾಗೂ ಮಂಗಳವಾರ ನಗರದ ಹುಕ್ಕೇರಿಮಠದ ಪ್ರೌಢಶಾಲೆಯಲ್ಲಿ ಆಯೋಜಿಸಲಾದ ಎರಡನೇ ಸುತ್ತಿನ ತರಬೇತಿ ಕಾಯರ್ಾಗಾರದಲ್ಲಿ ಮಂಗಳವಾರ ಪರಿಶೀಲನೆ ನಡೆಸಿ ಸಿಬ್ಬಂದಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.
ಮತಕೇಂದ್ರ ಸಿದ್ದತೆ, ಮತ ಯಂತ್ರಗಳ ಸಿದ್ಧತೆ ಹಾಗೂ ಚುನಾವಣಾ ಕೈಪಿಡಿಯಂತೆ ವಿವಿಧ ಮತಗಟ್ಟೆ ಅಧಿಕಾರಿಗಳ ಕಾರ್ಯನಿರ್ವಹಣೆ ಕುರಿತಂತೆ ಮಾಹಿತಿ ನೀಡಿದ ಅವರು ಮತದಾನ ಪ್ರಕ್ರಿಯೆಯಲ್ಲಿ ಯಾವುದೇ ಸಮಸ್ಯೆಯಾದರೆ ಮೇಲಾಧಿಕಾರಿಗಳ ಗಮನಕ್ಕೆ ತಂದು ಪರಿಹಾರಕಂಡುಕೊಳ್ಳಿ. ಮತದಾನದ ದಿನ ಕ್ಷೇತ್ರ ಭೇಟಿಯಲ್ಲಿ ನಾನು ಇರುವೆ ನನ್ನನ್ನು ಸಂಪಕರ್ಿಸಿದರೆ ಅಗತ್ಯ ಮಾರ್ಗದರ್ಶನ ನೀಡುವೆ. ಚುನಾವಣೆಯ ಪ್ರಕ್ರಿಯೆಯ ನಿಯಮಗಳನ್ನು ಚೆನ್ನಾಗಿ ತಿಳಿದುಕೊಂಡು ದಕ್ಷತೆಯಿಂದ ಕಾರ್ಯನಿರ್ವಹಿಸಿ. ಮತದಾನ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಿರ್ವಹಿಸಿ ಎಂದು ಹಾರೈಸಿದರು.
ಅಣುಕು ಮತದಾನ ಕಡ್ಡಾಯ: ಸೋಮವಾರ ತರಬೇತಿ ಕೇಂದ್ರಕ್ಕೆ ಭೇಟಿ ನೀಡಿದ ಅಪರ ಜಿಲ್ಲಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿ ಗೋವಿಂದರೆಡ್ಡಿ ಅವರು ಮಾತನಾಡಿ, ಮತದಾನದ ಹಿಂದಿನ ದಿನ ಮಸ್ಟರಿಂಗ್ ಕೇಂದ್ರದಲ್ಲಿ ವಿತರಣೆಯಾಗುವ ಚುನಾವಣಾ ಸಾಮಗ್ರಿಗಳನ್ನು ಮತಯಂತ್ರಗಳನ್ನು ಜವಾಬ್ದಾರಿಯುತವಾಗಿ ಪರಿಶೀಲಿಸಿ ಪಡೆಯಬೇಕು. ತಮಗೆ ನಿಗಧಿಪಡಿಸಿದ ಮತಗಟ್ಟೆ ಕೇಂದ್ರಗಳಿಗೆ ತೆರಳಿದ ನಂತರ ಅಂದು ಸಂಜೆಯೇ ಆಯೋಗದ ಮಾರ್ಗಸೂಚಿಯಂತೆ ತಮಗೆ ಹಂಚಿಕೆಯಾದ ಜವಾಬ್ದಾರಿಗಳಂತೆ ಮತಗಟ್ಟೆ ಕೇಂದ್ರ ಸಿದ್ಧಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮತದಾನ ಆರಂಭವಾಗುವ ಒಂದು ಗಂಟೆ ಮುಂಚಿತವಾಗಿ ಬೆಳಿಗ್ಗೆ 6 ಗಂಟೆಗೆ ಮೈಕ್ರೋ ಅಬ್ಜರವರ್ ಹಾಗೂ ವಿವಿಧ ಪಕ್ಷಗಳ ಮತಗಟ್ಟೆ ಏಜೆಂಟರ ಸಮ್ಮುಖದಲ್ಲಿ ಅಣುಕು ಮತದಾನ ನಡೆಸಿ ಅಭ್ಯಥರ್ಿವಾರು ಮತದಾನವಾಗಿರುವ ಕುರಿತಂತೆ ಎಣಿಕೆಮಾಡಿ ಸಹಿ ಪಡೆಯಬೇಕು.
ಪೊಲೀಸರಿಗೆ ಒಪ್ಪಿಸಿ: ಉಪವಿಭಾಗಾಧಿಕಾರಿ ಹಾಗೂ ಹಾವೇರಿ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಎನ್.ತಿಪ್ಪೇಸ್ವಾಮಿ ಅವರು ಮಾತನಾಡಿ, ಎ. 23ರ ಬೆಳಿಗ್ಗೆ 7 ರಿಂದ ಸಂಜೆ 6 ಗಂಟೆವರೆಗೆ ಮತದಾನದ ಅವಧಿಯನ್ನು ನಿಗಧಿಪಡಿಸಲಾಗಿದೆ. ಸಂಜೆ 6 ಗಂಟೆಯೊಳಗೆ ಮತ ಕೇಂದ್ರದ ಪರಿಧಿಯೊಳಗೆ ಮತದಾರರು ಪ್ರವೇಶಮಾಡಿದರೆ ಸ್ಲಿಪ್(ಚೀಟಿ) ನೀಡಿ ಮತದಾನಕ್ಕೆ ಅವಕಾಶ ಕಲ್ಪಿಸಬೇಕು. ಎಡಗೈ ತೋರುಬೆರಳಿಗೆ ಇಂಕ್ನ್ನು ಹಚ್ಚಬೇಕು.ಮತಗಟ್ಟೆಯ 100 ಮೀಟರ್ ವಿಸ್ತೀರ್ಣದೊಳಗೆ ಪ್ರಚಾರಮಾಡುವುದನ್ನು ನಿಷೇಧಿಸಬೇಕು. ಚುನಾವಣೆ ನೀತಿ ಸಂಹಿತೆ ಅನ್ವಯ ಚುನಾವಣಾ ಘೋಷಣೆ ಹೊಂದಿರುವ ಭಾವಚಿತ್ರಗಳು, ಬರಹಗಳನ್ನು ತೆರವುಗೊಳಿಸಬೇಕು. ಮತ ಕೇಂದ್ರದ ಹೊರಗಡೆ ಮತದಾನ ನಡೆಯುವ ಸಮಯ, ಚುನಾವಣಾ ಕಣದಲ್ಲಿರುವ ಅಭ್ಯಥರ್ಿಗಳ ಪಟ್ಟಿ ಒಳಗೊಂಡಂತೆ ಆಯೋಗದ ಮಾರ್ಗಸೂಚಿಗಳನ್ನು ಸೂಚನಾ ಫಲಕಗಳಲ್ಲಿ ಪ್ರಕಟಿಸಬೇಕು ಎಂದು ಸಲಹೆ ನೀಡಿದರು.
ಮತದಾರರ ಅಧಿಕೃತ ಪಟ್ಟಿಯನ್ನು ಖಚಿತಪಡಿಸಿಕೊಂಡು ಪಕ್ಷದ ಏಜಂಟರ ಬಳಿ ಇರುವ ಪಟ್ಟಿಯನ್ನು ತಾಳೆ ನೋಡಬೇಕು. ಹಾಗೂ ಪೊಲಿಂಗ್ ಏಜೆಂಟರ್ ನೇಮಕ ಪತ್ರಗಳನ್ನು ಪರಿಶೀಲಿಸಬೇಕು. ವೋಟಿಂಗ್ ಕಂಪಾಟರ್್ಮೆಂಟ್ಗೆ ಸೂಕ್ತ ಬೆಳಕಿನ ವ್ಯವಸ್ಥೆ, ಮತಗಟ್ಟೆಗಳಲ್ಲಿ ಮತದಾರರ ಸೌಲಭ್ಯಗಳ ಕುರಿತಂತೆ ಮತಗಟ್ಟೆ ಅಧಿಕಾರಿ, ಸಿಬ್ಬಂದಿಗಳು ಪರಿಶೀಲಿಸಿ ವ್ಯವಸ್ಥಿತ ಮತದಾನ ಪ್ರಕ್ರಿಯೆ ಕೈಗೊಳ್ಳುವಂತೆ ಸಲಹೆ ನೀಡಿದರು.
ಅಧಿಕೃತ ಮತದಾರರ ಬದಲಿಗೆ ಬೆರೊಬ್ಬರು ಮತ ಚಲಾಯಿಸಿ ಹೋದ ನಂತರ ಅಧಿಕೃತ ವ್ಯಕ್ತಿ ಮತದಾನ ಮಾಡಲು ಬಂದಾಗ ಆ ವ್ಯಕ್ತಿಗೆ ಮತದಾನ ಮಾಡಲು ಅವಕಾಶ ನೀಡಬೇಕು. ಈ ಮತವನ್ನು ಪ್ರತ್ಯೇಕವಾಗಿ ನಿರ್ವಹಿಸಬೇಕು. ಈ ಪ್ರಕ್ರಿಯೆಯನ್ನು ಟೆಂಡರ್ ವೋಟ್ ಎಂದು ಕರೆಯಲಾಗುತ್ತದೆ ಎಂದು ಎಚ್ಚರಿಸಿದರು.
ಮತದಾರರ ಪಟ್ಟಿಯಲ್ಲಿರುವ ವ್ಯಕ್ತಿಗೂ ಹಾಗೂ ಮತದಾನ ಮಾಡಲು ಬಂದಿರುವ ವ್ಯಕ್ತಿಗೂ ವ್ಯತ್ಯಯವಿದೆ ಎಂದು ಪೊಲಿಂಗ್ ಏಜೆಂಟರು ಆಕ್ಷೇಪ ವ್ಯಕ್ತಪಡಿಸಿದಾಗ ವ್ಯಕ್ತಿ ನಕಲಿಯೋ ಅಥವಾ ಅಸಲಿಯೋ ಎಂದು ಮತಗಟ್ಟೆ ಅಧಿಕಾರಿ ಸಕ್ಷಿಪ್ತ ವಿಚಾರಣೆ ನಡೆಸಬೇಕು. ಮತ ಚಲಾಯಿಸಲು ಬಂದಿರುವ ವ್ಯಕ್ತಿ ನಕಲಿ ಎಂದು ಕಂಡುಬಂದರೆ ಪೊಲೀಸರಿಗೆ ಒಪ್ಪಿಸಬೇಕು. ನೈಜ ವ್ಯಕ್ತಿಯಾದರೆ ಮತದಾನ ಮಾಡಲು ಅವಕಾಶ ಕಲ್ಪಿಸಬೇಕು. ಈ ಪ್ರಕ್ರಿಯೆಯನ್ನು ಚಾಲೆಂಜ್ಡ್ ವೋಟ್ ಎಂದು ಕರೆಯಲಾಗುತ್ತದೆ. ಈ ಸೂಕ್ಷ್ಮಗಳನ್ನು ಅರಿತು ಕಾರ್ಯನಿರ್ವಹಿಸಿ ಎಂದು ಸಲಹೆ ನೀಡಿದರು.
ಮತ ಕೇಂದ್ರದೊಳಗೆ ಸೂಕ್ಷ್ಮ ವೀಕ್ಷಕರು, ಅನುಮತಿ ಪತ್ರ ಹೊಂದಿರುವ ಚುನಾವಣಾ ಅಭ್ಯಥರ್ಿ ಅಥವಾ ಏಜೆಂಟರು, ಚುನಾವಣಾ ವೀಕ್ಷಕರು ದುರ್ಬಲ ಮತದಾರರ ಸಹಾಯಕ ವ್ಯಕ್ತಿ, ಮತದಾರರ ಜೊತೆಗಿರುವ ಸಣ್ಣ ಮಗುವಿಗೆ ಮಾತ್ರ ಪ್ರವೇಶಾವಕಾಶವಿದೆ. ಮತದಾನ ಗೌಪ್ಯ ಪ್ರಕ್ರಿಯೆಯಾಗಿರುವುದರಿಂದ ಮತಕೇಂದ್ರದೊಳಗೆ ವಿಡಿಯೋ, ಛಾಯಾಚಿತ್ರ ಹಾಗೂ ಮೊಬೈಲ್ ತೆಗೆದುಕೊಂಡು ಹೋಗಲು ಹಾಗೂ ಚಿತ್ರಿಕರಿಸಲು ಅವಕಾಶ ಕೊಡಬಾರದು ಎಂದು ತಿಳಿಸಿದರು. ತಹಶೀಲ್ದಾರ ಶಿವಕುಮಾರ, ತರಬೇತಿ ಅಧಿಕಾರಿಗಳು ಉಪಸ್ಥಿತರಿದ್ದರು.