ಮಕ್ಕಳ ಸಂರಕ್ಷಣೆಗಾಗಿ ಪೋಕ್ಸೋ ಕಾಯ್ದೆ ತಿಳಿಯಿರಿ: ಶ್ರೀದೇವಿ

ಲೋಕದರ್ಶನ ವರದಿ

ಶಿಗ್ಗಾವಿ 20ಃ ಮಕ್ಕಳ ಮೇಲೆ ಆಗುತ್ತಿರುವ ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣೆಗಾಗಿ ಪೋಕ್ಸೋ ಕಾಯ್ದೆ ಜಾರಿಯಲ್ಲಿದ್ದು ಕಾನೂನು ಅರಿವು-ನೆರವು ಕಾರ್ಯಕ್ರಮದ ಮೂಲಕ ಅದರ ಅರಿವು ಪಡೆದು ಅಪರಾಧಗಳ ತಡೆಗೆ ಪ್ರತಿಯೊಬ್ಬರೂ ಕೈಜೋಡಿಸುವಂತೆ ದಿವಾಣಿ ನ್ಯಾಯಾಧೀಶರಾದ ಶ್ರೀದೇವಿ ದರಬಾರೆ ಕರೆ ನೀಡಿದರು.

 ಪಟ್ಟಣದ ನ್ಯಾಯಾಲಯ ಆವರಣದಲ್ಲಿ ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಅಧಿನಿಯಮ 2012 ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿಲಾಗಿತು. 

ಅಪರಾಧ ತಡೆಗಾಗಿ ಸಕರ್ಾರ ನ್ಯಾಯಾಂಗ ಇಲಾಖೆ ಕಠಿಣ ಕಾನೂನುಗಳನ್ನು ರೂಪಿಸಿದ್ದು ಅವುಗಳನ್ನು ನುರಿತ ನ್ಯಾಯವಾದಿಗಳು ನೀಡುವ ಉಪನ್ಯಾಸಗಳ ಮೂಲಕ ತಿಳಿದುಕೊಂಡು. ಪ್ರತಿಯೊಬ್ಬರೂ ಅಪರಾಧ ತಡೆಗೆ ಕೈಜೋಡಿಸುವ ಮೂಲಕ ಸುಂದರ ಸಮಾಜ ನಿಮರ್ಾಣ ಮಾಡಬೇಕು ಎಂದು ಸಲಹೆ ನೀಡಿದರು.

   ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಹಿರಿಯನ್ಯಾಯವಾದಿಗಳಾದ ಜಿ.ಆಯ್ ಅಂಕಲಕೋಟಿ ಮಾತನಾಡಿ. ಮಕ್ಕಳ ಪಾಲಕರು ಮಕ್ಕಳಿಗೆ ಉತ್ತಮ ಉಡುಗೆ ತೊಡುಗೆ ಕೊಡಿಸಿ ಉತ್ತಮ ಸಂಸ್ಕೃತಿ ಬೆಳೆಸಬೇಕು. ಹಾಗೂ ಮೊಬೈಲ್ ಪೋನಗಳಿಂದ ದೂರವಿಟ್ಟು ಉತ್ತಮ ಶಿಕ್ಷಣ ನೀಡಬೇಕು ಎಂದು ಸಲಹೆ ನೀಡಿದರು.

   ನ್ಯಾಯವಾದಿಗಳು ಹಾಗೂ ಕಾನೂನು ಸಲಹೆಗಾರರಾದ ಕೆ.ಎನ್.ಭಾರತಿ ಪೋಕ್ಸೊ ಕಾಯ್ದೆ 2012ರ ಕುರಿತು ಉಪನ್ಯಾಸ ನೀಡಿದರು. ನ್ಯಾಯವಾದಿ ಪಿ.ಪಿ.ಹೊಂಡದಕಟ್ಟಿ ನಿರೂಪಿಸಿ ವಂದಿಸಿದರು. ನ್ಯಾಯವಾದಿಗಳು ಸಾರ್ವಜನಿಕರು ಉಪಸ್ಥಿತರಿದ್ದರು.