ಹಾವೇರಿ: 30: ಪ್ರತಿ ವರ್ಷದಂತೆ ಈ ವರ್ಷವೂ ಮುಂಗಾರು ಅವಧಿಯಲ್ಲಿ ಅರಣ್ಯ ಇಲಾಖೆ ಜಿಲ್ಲೆಯಾದ್ಯಂತ ಸಸಿಗಳ ನೆಡುತೋಪು ಕೆಲಸ ಪ್ರಾರಂಭಿಸಿದೆ. ಈಗಾಗಲೇ ಬ್ಲಾಕ್ ಮತ್ತು ರಸ್ತೆ ಬದಿಯಲ್ಲಿ ಗುಂಡಿಗಳನ್ನು ತೆಗೆದು ಸಸಿ ನೆಡುವ ಕಾರ್ಯ ಪ್ರಗತಿಯಲ್ಲಿದೆ.
ಪ್ರಾದೇಶಿಕ ಅರಣ್ಯ ವಿಭಾಗದಿಂದ 15,13,413 ಹಾಗೂ ಸಾಮಾಜಿಕ ಅರಣ್ಯ ವಿಭಾಗದಿಂದ ಐದು ಲಕ್ಷ ಒಳಗೊಂಡಂತೆ ಈ ವರ್ಷ 20,13,413 ವಿವಿಧ ಜಾತಿಯ ಸಸಿಗಳ ನಾಟಿಮಾಡಲು ಗುರಿ ಹೊಂದಲಾಗಿದೆ. ಬೇವು, ಹೊಂಗೆ, ತಪಸಿ, ಅತ್ತಿ, ಅರಳಿ, ಬಸರಿ, ಸಂಪಿಗೆ, ಬಸವನಪಾದ, ಹೊಳೆದಾಸವಾಳ, ಶಿವನಿ, ಸಿತಾಫಲ, ಸಿಹಿಹುಣಸೆ, ಗುಡ್ಡದನೆಲ್ಲಿ, ಕಾಸವಾಡ ಸೇರಿದಂತೆ ವಿವಿಧ ಬಗೆಯ ಸಸಿಗಳನ್ನು ಸಸ್ಯಪಾಲನಾ ಕ್ಷೇತ್ರದಲ್ಲಿ ಬೆಳೆಸಿ ನಾಟಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.
ಪ್ರಾದೇಶಿಕ ಅರಣ್ಯ ವಿಭಾಗದಿಂದ ಎರಡು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ 15.15 ಲಕ್ಷ ಸಸಿಗಳು, ಸಾಮಾಜಿಕ ಅರಣ್ಯ ವಿಭಾಗದಿಂದ 139 ಹೆಕ್ಟೇರ್ನಲ್ಲಿ ಐದು ಲಕ್ಷ ಸಸಿಗಳು ಸೇರಿ ಒಟ್ಟು 2139 ಹೆಕ್ಟೇರ್ ಪ್ರದೇಶದಲ್ಲಿ 20.15 ಲಕ್ಷ ಸಸಿಗಳನ್ನು ರಸ್ತೆಯ ಇಕ್ಕೆಲಗಳಲ್ಲಿ, ಅರಣ್ಯ ವನಮಹೋತ್ಸವ ಕಾರ್ಯಕ್ರಮ, ಶಾಲಾ-ಕಾಲೇಜುಗಳ ಖಾಲಿ ನಿವೇಶನಗಳಲ್ಲಿ ಹಾಗೂ ರೈತರ ಹೊಲದಲ್ಲಿ ನೆಡಲು ರೈತರಿಗೆ ವಿತರಣೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಸಿಗಳ ವಿತರಣೆ ಹಾಗೂ ಅರಣ್ಯದಲ್ಲಿ ಸಸಿಗಳ ನಾಟಿ ಆರಂಭಿಸಲಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್.ಇ. ಕ್ರಾಂತಿ ಅವರು ತಿಳಿಸಿದ್ದಾರೆ.
ತಾಲೂಕವಾರು ವಿವರ: ಸಾಮಾಜಿಕ ಅರಣ್ಯ ವಿಭಾಗದಿಂದ ಬ್ಯಾಡಗಿ ತಾಲೂಕಿನಲ್ಲಿ 62 ಸಾವಿರ, ಹಾನಗಲ್ ತಾಲೂಕಿನಲ್ಲಿ 80ಸಾವಿರ, ಹಾವೇರಿ ತಾಲೂಕಿನಲ್ಲ್ಲಿ 98 ಸಾವಿರ, ಹಿರೇಕೆರೂರನಲ್ಲಿ 63 ಸಾವಿರ, ರಾಣೆಬೆನ್ನೂರ ತಾಲೂಕಿನಲ್ಲಿ 52 ಸಾವಿರ, ಸವಣೂರ ತಾಲೂಕಿನಲ್ಲಿ 80 ಸಾವಿರ ಹಾಗೂ ಶಿಗ್ಗಾಂವ ತಾಲೂಕಿನಲ್ಲಿ 65 ಸಾವಿರ ಸೇರಿದಂತೆ 5 ಲಕ್ಷ ಸಸಿಗಳನ್ನು ಬೆಳೆಸಲಾಗಿದೆ.
ಪ್ರಾದೇಶಿಕ ವಿಭಾಗದಿಂದ ಅರಣ್ಯದಲ್ಲಿ ಸಸಿ ನೆಡಲು ಹಾವೇರಿ 1,41,249, ಬ್ಯಾಡಗಿ 70,786, ರಾಣೆಬೆನ್ನೂರ 1,97,999, ಹಾನಗಲ್ 1,75,759, ಹಿರೇಕೆರೂರ 1,47,599, ದುಂಡಸಿ 3,45021 ಸೇರಿ ಒಟ್ಟು 10,78,413 ಸಸಿ, ರೈತರಿಗೆ ವಿತರಣೆ ಮಾಡಲು ಹಾವೇರಿ 73,700, ಬ್ಯಾಡಗಿ 72,700, ರಾಣೆಬೆನ್ನೂರ 71,800, ಹಾನಗಲ್ 72,200, ಹಿರೇಕೆರೂರ 72,900, ದುಂಡಸಿ 71,700 ಸೇರಿದಂತೆ ಒಟ್ಟಾರೆ 15,13,413 ಸಸಿಗಳನ್ನು ಬೆಳೆಸಲಾಗಿದೆ.
ಆಸಕ್ತ ರೈತರು ಸಸಿಗಳನ್ನು ಪಡೆಯಲು ಆಯಾ ತಾಲೂಕು ಸಾಮಾಜಿಕ ಮತ್ತು ಪ್ರಾದೇಶಿಕ ಅರಣ್ಯ ಇಲಾಖೆ ಕಚೇರಿಗಳಿಗೆ ಹೊಲದ ಪಹಣಿ ಪತ್ರಿಕೆ(ಉತಾರ), ಬ್ಯಾಂಕ್ ಪಾಸ್ ಬುಕ್, ಪೋಟೋ, ಆಧಾರ ಕಾಡರ್್ ಪ್ರತಿ ಜೊತೆಗೆ ಅಜರ್ಿ ಸಲ್ಲಿಸಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.