ಲೋಕದರ್ಶನ ವರದಿ
ಕಾಗವಾಡ 14: ಕಳೇದ 20 ವರ್ಷಗಳಿಂದ ಮುಖ್ಯ ರಸ್ತೆಯಿಂದ ಜಮೀನಗಳಿಗೆ ಸಂಪರ್ಕಿಸುವ ರಸ್ತೆಗಳ ಅಭಿವೃದ್ಧಿಗಾಗಿ ಕಾಗವಾಡ ಕ್ಷೇತ್ರದ ಜನರು ಬೇಡಿಕೆಯಿಟ್ಟಿದ್ದರು. ಆದರೆ, ಈ ವರೆಗೆ ಯಾರೂ ಕೂಡ ಈಡೆಯರಿಸಿರಲಿಲ್ಲಾ.
ಕಾಗವಾಡ ಶಾಸಕ ಶ್ರೀಮಂತ ಪಾಟೀಲರು ಕಳೇದ 2 ತಿಂಗಳಗಳಿಂದ ಕೋಟ್ಯಾಂತರ ರೂ. ಅನುದಾನ ತಂದು ಜನರ ಬೇಡಿಕೆ ಈಡೆಯರಿಸುತ್ತಿದಾರೆ. ಸೋಮವಾರ ರಂದು ಕಾಗವಾಡ ಕ್ಷೇತ್ರದ ಜುಗೂಳ, ಶಿರಗುಪ್ಪಿ, ಕಾಗವಾಡ, ಶೇಡಬಾಳ, ಲೋಕುರ, ಮಂಗಸೂಳಿ, ಮೋಳೆ ಈ ಗ್ರಾಮಗಳಲ್ಲಿ ರಸ್ತೆ ಅಭಿವೃದ್ಧಿ, ಚರಂಡಿ ನಿರ್ಮಾಣ ಕಾಮಗಾರಿಗೆ ಸಂಪೂರ್ಣ ದಿನ ಗ್ರಾಮಗಳಿಗೆ ಭೇಟಿನೀಡಿ ಚಾಲನೆ ನೀಡಿದರು.
ಮುಖ್ಯ ಕಾಮಗಾರಿಗಳು: ಜುಗೂಳ ಗ್ರಾಮದಲ್ಲಿಯ ರಸ್ತೆ ಅಭಿವೃದ್ಧಿ 58 ಲಕ್ಷ, ಶಿರಗುಪ್ಪಿ 21 ಲಕ್ಷ, ಕಾಗವಾಡ ಬಾಳೇಶ್ವರ ಜಾಕವೇಲ್ ರೋಡ್ 35 ಲಕ್ಷ, ಗ್ರಾಮ ಪಂಚಾಯತಿ ಅಭಿವೃದ್ಧಿ 30 ಲಕ್ಷ, ಇಂಗಳಿ ರಸ್ತೆ ನಿರ್ಮಾಣಕ್ಕಾಗಿ 35 ಲಕ್ಷ, ಲೋಕುರ ಚರಂಡಿ ಮತ್ತು ರಸ್ತೆ ಮತ್ತು ಚರಂಡಿಗಾಗಿ 24 ಲಕ್ಷ, ಮಂಗಸೂಳಿ ರಸ್ತೆ ಅಭಿವೃದ್ಧಿಗಾಗಿ 72 ಲಕ್ಷ, ಮೋಳೆ 28 ಲಕ್ಷ ರೂ. ಯೋಜನೆಗಳಿಗೆ ಪೂಜೆ ಸಲ್ಲಿಸಿ, ಶಾಸಕರು ಚಾಲನೆ ನೀಡಿದರು.
ಬೆಳಿಗ್ಗೆ ಜುಗೂಳದಲ್ಲಿ ಶಾಸಕ ಶ್ರೀಮಂತ ಪಾಟೀಲರನ್ನು ಅದ್ಧೂರಿವಾಗಿ ಸ್ವಾಗತಿಸಿ, ಸತ್ಕರಿಸಿದ್ದರು. ಡಿಕೆಎಸ್ಎಸ್ ಸಕ್ಕರೆ ಕಾರ್ಖಾನೆ ನಿರ್ದೇಶಕ ಅಣ್ಣಾಸಾಹೇಬ ಪಾಟೀಲ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವಿನಾಯಕ ಬಾಗಡಿ, ಮಾಜಿ ಎಪಿಎಂಸಿ ಅಧ್ಯಕ್ಷ ಅನೀಲ ಕಡೋಲೆ, ಶಿವಾನಂದ ಪಾಟೀಲ, ಸೊಮೇಶ ಪಾಟೀಲ, ಸುಧಾಕರ ಗಣೇಶವಾಡಿ, ಅರುಣ ಗಣೇಶವಾಡಿ, ಶಿರಗುಪ್ಪಿಯಲ್ಲಿ ನ್ಯಾಯವಾದಿ ಅಭಯಕುಮಾರ ಅಕಿವಾಟೆ, ಸುಭಾಷ ಮೋನೆ, ರಾಮಗೌಡಾ ಪಾಟೀಲ, ಬೊಮ್ಮನ್ನಾ ಚೌಗುಲೆ, ಆರ್.ಎಂ.ಪಾಟೀಲ, ಕಾಗವಾಡದಲ್ಲಿ ಗ್ರಾಪಂ ಆಧ್ಯಕ್ಷೆ ಶ್ರೀದೇವಿ ಚೌಗುಲೆ, ಕಾಕಾಸಾಹೇಬ ಪಾಟೀಲ, ಪ್ರಕಾಶ ಚೌಗುಲೆ, ಶೇಡಬಾಳದಲ್ಲಿ ಭರತ್ ಪಾಟೀಲ, ಎಂ.ಎ.ಗಣೆ, ಶೀತಲ ಪಾಟೀಲ, ಅಣ್ಣಾಗೌಡಾ ಪಾಟೀಲ, ರಾಜು ನಾಂದ್ರೆ, ಎಪಿಎಂಸಿ ತಾಲೂಕಾಧ್ಯಕ್ಷ ರವೀಂದ್ರ ಪೂಜಾರಿ, ತಾಪಂ ಸದಸ್ಯ ಸುಧಾಕರ ಭಗತ್, ಸಂಭಾಜಿ ಪಾಟೀಲ, ಅಮೀರ ಶೇಖ್, ಬಾಬಾಸಾಹೇಬ ಪಾಟೀಲ, ಅಧಿಕಾರಿಗಳಾದ ಎಂ.ಎಸ್.ವಡೆಯರ, ಎಂ.ಪಿ.ಅವತಾಡೆ, ಎನ್.ಎ.ಮಗದುಮ, ಜಿಪಂ ಅಭಿಯಂತ ಅಮರ್ ಮೇತ್ರೆ, ಸೇರಿದಂತೆ ಅನೇಕರು ಇದ್ದರು.