4ನೇ ವರ್ಷದ ಬುದ್ಧ ಜಾತ್ರೆ: ವಿವಿಧ ಕಾರ್ಯಕ್ರಮ

4th Annual Buddha Fair: Various Programs

ಕಾಗವಾಡ 13: ತಾಲೂಕಿನ ಶಿರಗುಪ್ಪಿ ಗ್ರಾಮದ ಬುದ್ಧ ಫೌಂಡೇಶನ್ ಮತ್ತು ಗ್ರಾಮಸ್ಥರ ಸಹಯೋಗದಲ್ಲಿ ರವಿವಾರ ದಿ. 11 ಮತ್ತು ಸೋಮವಾರ ದಿ. 12 ರಂದು 2 ದಿನಗಳ ಕಾಲ 4ನೇ ವರ್ಷದ ಬುದ್ಧ ಜಾತ್ರೆ ಅದ್ದೂರಿಯಾಗಿ ನಡೆಯಿತು. ಜಾತ್ರೆ ನಿಮಿತ್ಯವಾಗಿ ವಿವಿಧ ಕಾರ್ಯಕ್ರಮಗಳು ಸಂಪನ್ನಗೊಂಡವು. 

ರವಿವಾರ ಬೆಳಿಗ್ಗೆ 8 ಗಂಟೆಗೆ ಧ್ವಜಾರೋಹಣ, ನಂತರ ಕುಂಭ ಹೊತ್ತ ಮಹಿಳೆಯರಿಂದ ಮೆರವಣಿಗೆ ಭೌದ್ಧ ವಿಹಾರದಲ್ಲಿ ಬುದ್ಧ, ಅಂಬೇಡ್ಕರರ ಪ್ರತಿಮೆಯ ಪೂಜೆಯೊಂದಿಗೆ ದೀಪ ಬೆಳಗಿಸಿ, ವೇದಿಕೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. 

ದಿವ್ಯ ಸಾನಿಧ್ಯವನ್ನು ಬಾಗಲಕೋಟೆ ಬೌದ್ಧ ವಿಹಾರದ ಭಂತೇಜೀ ಧಮ್ಮಪಾಲಜಿ ವಹಿಸಿದ್ದರು. ಗ್ರಾ.ಪಂ. ಅಧ್ಯಕ್ಷೆ ಶೋಭಾ ಗದಾಳೆ ಉದ್ಘಾಟಕರಾಗಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಹ-ಶಿಕ್ಷಕ ಸುಭಾಶ ನಿಜನ್ನವರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರಮೇಶ ಜಯಕರ, ಖ್ಯಾತ ಬುಧ್ಧ-ಅಂಬೇಡ್ಕರ ವಾದಿಗಳಾದ ಡಾ. ರಾಜು ಕಾಂಬಳೆ, ಪ್ರಾಚಾರ್ಯ ಡಾ. ಎಸ್‌.ಪಿ. ತಳವಾರ ವಕೀಲರಾದ ರಾಜೇಂದ್ರ ಮೂಶಿ, ಮಲ್ಲೇಶ ಕಸ್ತೂರಿ, ವಿಕ್ರಂ ಕರನಿಂಗ, ಸುಧಾಕರ ಮದರಕಂಡಿ, ಮಯೂರ ಮದಲೆ, ಮಚ್ಚೇಂದ್ರ ಕಾಡಾಪೂರೆ, ತಮ್ಮಣ್ಣಿ ಕಾಂಬಳೆ, ಪುರಂದರ ಕಾಂಬಳೆ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ, ಸಾಧಕರಿಗೆ, ಗಣ್ಯರಿಗೆ ಸನ್ಮಾನಿಸಿ, ಸತ್ಕರಿಸಲಾಯಿತು. ಆಗಮಿಸಿದ್ದ ಎಲ್ಲರಿಗೆ ಭೋಜನೆ ವ್ಯವಸ್ಥೆ ಮಾಡಲಾಗಿತ್ತು. 

ಸೋಮವಾರ ದಿ. 12 ರಂದು ತಹಶೀಲ್ದಾರ ರಾಜೇಶ ಬುರ್ಲಿ, ಅಧಿಕಾರಿಗಳಾದ ಅಣ್ಣಾಸಾಬ ಕೋರೆ, ವಿಜಯಕುಮಾರ ಚೌಗುಲೆ ಕರುಣಾ ಬುದ್ಧ ವಿಹಾರಕ್ಕೆ ಭೇಟ್ಟಿ ನೀಡಿ, ಧ್ವಜಾರೋಹಣ ಮಾಡಿ, ಪೂಜೆ ಸಲ್ಲಿಸಿದರು.  

ಈ ಸಮಯಲ್ಲಿ ಗ್ರಾಮದ ಮುಖಂಡರು, ಬುದ್ಧ ಫೌಂಡೇಶನ್ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿ, ಖಜಾಂಚಿ ಸೇರಿದಂತೆ ಸರ್ವ ಸದಸ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದತರು.