ನೆರೆ ಸಂತ್ರಸ್ತರಿಗೆ 50 ಸಾವಿರ ಸಹಾಯ

ಲೋಕದರ್ಶನ ವರದಿ

ರಾಣೇಬೆನ್ನೂರ24: ಸುಂದರಿನಗರಿ ಕೊಡಗಿನಲ್ಲಿ ಸಂಭವಿಸಿದ ಗುಡ್ಡಕುಸಿತ ಹಾಗೂ ನೆರೆಹಾವಳಿಗೆ ತುತ್ತಾದ ನಿರಾಶ್ರಿತರಿಗೆ ನಗರದ ಸ್ಥಳೀಯ ಬಂಟರ ಸಂಘ ಹಾಗೂ ಬಂಟ್ಸ್ ಕ್ರೇಡಿಟ್ ಸೌಹಾದರ್್ ಸಹಕಾರಿ ನಿಯಮಿತ ವತಿಯಿಂದ 50 ಸಾವಿರ ರೂಗಳ ಪರಿಹಾರದ ಚೆಕ್ನ್ನು ತಹಶೀಲ್ದಾರ ಗ್ರೇಡ್-2 ಶಂಕರ್ ಜಿ.ಎಸ್. ಅವರ ಮುಖಾಂತರ ಶುಕ್ರವಾರದಂದು ಕಳುಹಿಸಿಕೊಡಲಾಯಿತು. 

   ಬಂಟ್ಸ್ ಕ್ರೇಡಿಟ್ ಸೊಸೈಟಿ ಅಧ್ಯಕ್ಷ ಎಂ.ಅಪ್ಪುಶೆಟ್ಟಿ ಮಾತನಾಡಿ, ಹಿಂದೆಂದೂ ಕಂಡರಿಯದ ನೆರೆಹಾವಳಿಗೆ ತುತ್ತಾಗಿರುವ ಕೊಡುಗಿನ ನಿರಾಶ್ರಿತ ಜನರಿಗೆ ಸರ್ವರೂ ಮಾನವೀಯತೆ ಹಿತದೃಷ್ಟಿಯನ್ನಿಟ್ಟುಕೊಂಡು ಕೈಲಾದಷ್ಟು ಸಹಾಯದ ನೆರವು ನೀಡಬೇಕು. ಇದರಿಂದಾಗಿ ಅಲ್ಲಿನ ಜನತೆಗೆ ನಾವು ನೆರವು ನೀಡಿದಂತಾಗುತ್ತದೆ ಎಂದರು.

  ರಾಜ್ಯದಲ್ಲಿ ಹಲವಾರು ಸಂಘ ಸಂಸ್ಥೆಗಳು, ಸೊಸೈಟಿಗಳು, ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಇಂತಹ ಘಟನೆಗಳಿಗೆ ಸ್ಪಂದಿಸಿ ಸಹಾಯದ ನೆರವು ನೀಡಬೇಕು. ಕೇವಲ ಸರಕಾರದ ಮೇಲೆ ಭಾರ ಹಾಕುವುದು ಸರಿಯಲ್ಲ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಪರಿಹಾರ ನೀಡುವುದರ ಜೊತೆಗೆ ಅಲ್ಲಿನ ಜನತೆಗೆ ಶಾಶ್ವತ ಪರಿಹಾರ ಸಿಗುವಂತೆ ಸರ್ವರೂ ಪ್ರಾಮಾಣಿಕವಾಗಿ ಕೈಜೋಡಿಸಿದಾಗ ನಾವು ಒಳ್ಳೆಯ ಕೆಲಸ ಮಾಡಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು.

 ಸಂಘದ ಅಧ್ಯಕ್ಷ ಹೆಚ್.ಜಯರಾಮ ಶೆಟ್ಟಿ, ಉಪಾಧ್ಯಕ್ಷ ಟಿ ಕೃಷ್ಣಶೆಟ್ಟಿ, ಗೌರವ ಅಧ್ಯಕ್ಷ ಬಿ.ಮಂಜುನಾಥ ಶೆಟ್ಟಿ, ಕಾರ್ಯದಶರ್ಿ ಅರುಣಕುಮಾರ ಶೆಟ್ಟಿ, ವಿಶ್ವನಾಥ ಶೆಟ್ಟಿ, ಶಾಂತರಾಮ ಹೆಗಡೆ, ಚಂದ್ರಶೇಖರ ಶೆಟ್ಟಿ, ರಾಮಚಂದ್ರಶೆಟ್ಟಿ, ರಾಘವೇಂದ್ರ ಎನ್ ಶೆಟ್ಟಿ, ಹೆಚ್ ರಾಘವೇಂದ್ರ ಶೆಟ್ಟಿ ಸೇರಿದಂತೆ ಮತ್ತಿತರರು ಇದ್ದರು.