7ನೇ ವಾರ್ಷಿಕ ಸ್ನೇಹ ಸಮ್ಮೇಳನ

ಲೋಕದರ್ಶನ ವರದಿ

ಶೇಡಬಾಳ 13: ಶಿಕ್ಷಣ ಸಂಸ್ಥೆಗಳನ್ನು ಹುಟ್ಟು ಹಾಕುವುದು ಸುಲಭ. ಆದರೆ ಸ್ವಂತ ಕಟ್ಟಡ, ಶಿಕ್ಷಕರ ಹಾಗೂ ಸಿಬ್ಬಂದಿ ವರ್ಗದವರ ವೇತನ ನೀಡುವುದು, ಸಂಸ್ಥೆಯನ್ನು ನಡೆಸಿಕೊಂಡು ಹೋಗುವುದು ಅಷ್ಟೋಂದು ಸುಲಭದ ಕೆಲಸವಲ್ಲ. ಕಾರಣ ಪಾಲಕರು ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗಾಗಿ ತನು, ಮನ, ಧನದ ರೂಪದಲ್ಲಿ ಸಹಾಯ ಸಹಕಾರ ನೀಡಿದಾಗ ಮಾತ್ರ ಶಿಕ್ಷಣ ಸಂಸ್ಥೆಗಳು ಅಭಿವೃದ್ಧಿ ಹೊಂದಲು ಸಾಧ್ಯವೆಂದು ನವದೆಹಲಿ ಭಾರತೀಯ ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಹಾಗೂ ಬೆಳಗಾವಿ ಮಲ್ಲಿಕಾಜರ್ುನ ವಿದ್ಯಾಪೀಠದ ಅಧ್ಯಕ್ಷರಾದ ಗುರುಗೌಡ ಪಾಟೀಲ ಕರೆ ನೀಡಿದರು. 

ಅವರು ರವಿವಾರ ದಿ. 12 ರಂದು ಸಮೀಪದ ಉಗಾರ ಖುರ್ದ ಪಟ್ಟಣದ ಶ್ರೀ ಗುರುವಿದ್ಯಾ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಜರುಗಿದ ಸ್ವಾಮಿ ವಿವೇಕಾನಂದರ 157 ನೇ ಜಯಂತೋತ್ಸವ ಕಾರ್ಯಕ್ರಮ ಹಾಗೂ ಶಾಲೆಯ 7 ನೇ ವಾಷರ್ಿಕ ಸ್ನೇಹ ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಿದ್ದರು. ಅವರು ಮುಂದೆ ಮಾತನಾಡುತ್ತಾ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಿಗೆ ಕನರ್ಾಟಕ ಸಕರ್ಾರ ಆದಷ್ಟು ಬೇಗನೆ ಅನುದಾನವನ್ನು ನೀಡಿ ಆ ಭಾಗದ ಶಿಕ್ಷಣ ಕ್ರಾಂತಿಗೆ ಅನುವು ಮಾಡಿ ಕೊಡುವಂತೆ ಸಕರ್ಾರವನ್ನು ಒತ್ತಾಯಿಸಿದರು. ಅಲ್ಲದೇ ತಾವು ಉಗಾರದಲ್ಲಿನ ಗುರು ವಿದ್ಯಾ ಇಂಗ್ಲಿಷ್ ಮಾಧ್ಯಮ ಶಾಲೆಗೆ 2 ಗಣಕಯಂತ್ರಗಳನ್ನು ದೇಣಿಗೆ ನೀಡುವುದಾಗಿ ವಾಗ್ದಾನ ಮಾಡಿದರು.

ಕಾರ್ಯಕ್ರಮದ ಅತಿಥಿಗಳಾಗಿ ಆಗಮಿಸಿದ ಕಾಗವಾಡ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎಸ್.ಜೋಡಗೇರಿ ಮಾತನಾಡುತ್ತಾ ಶಿಕ್ಷಣ ಸಂಸ್ಥೆಗಳು ಅಭಿವೃದ್ಧಿ ಹೊಂದಬೇಕಾದರೆ ಪಾಲಕರ ಸಹಾಯ ಸಹಕಾರ ಅಮೂಲ್ಯವಾಗಿದೆ. ಪಾಲಕರು ಮಕ್ಕಳಿಗಾಗಿ ಆಸ್ತಿಯನ್ನು ಗಳಿಸದೇ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಿ ಅವರನ್ನೇ ಆಸ್ತಿಯನ್ನಾಗಿ ಮಾಡುವಂತೆ ಕರೆ ನೀಡಿದರು.

ಶಾಲಾ ವಾಷರ್ಿಕೋತ್ಸವ ಕಾರ್ಯಕ್ರಮಗಳಲ್ಲಿ ವಿದ್ಯಾಥರ್ಿಗಳು ಮನೋರಂಜನೆ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಅವರಲ್ಲಿ ಸೂಪ್ತವಾಗಿರುವ ಪ್ರತಿಭೆಯನ್ನು ಹೊರ ಹೊಮ್ಮಿಸಲು ಈ ಕಾರ್ಯಕ್ರಮಗಳು ಉತ್ತಮ ವೇದಿಕೆಯಾಗಿವೆ ಎಂದು ಬಣ್ಣಿಸಿದರು. ಮೊಬೈಲ್, ದೂರದರ್ಶನದಿಂದ ಮಕ್ಕಳನ್ನು ದೂರವಿಟ್ಟು ಮಕ್ಕಳಲ್ಲಿ ಓದುವ ಹವ್ಯಾಸವನ್ನು ಹೆಚ್ಚಿಸಲು ಪಾಲಕರು ಹೆಚ್ಚಿನ ಮುತುವಜರ್ಿ ವಹಿಸುವಂತೆ ಕಿವಿ ಮಾತು ಹೇಳಿದರು. 

ಪಾಲಕರು ಚಿಕ್ಕಂದಿನಲ್ಲಿಯೇ ಮಕ್ಕಳಲ್ಲಿ ಅಧ್ಯಾತ್ಮಿಕ ಪ್ರವತರ್ಿವನ್ನು ಅಳವಡಿಸುವದರ ಜತೆಗೆ ಸನಾತನ ಭಾರತೀಯ ಸಂಸ್ಕೃತಿಯನ್ನು ಬಿತ್ತಿದಾಗ ಮುಂದೆ ಅವರು ಸ್ವಾಮಿ ವಿವೇಕಾನಂದರಂತೆ ವಿಶ್ವ ವಿಖ್ಯಾತರಾಗುತ್ತಾರೆಂದು ಹೇಳಿದರು. ಯಾವುದೇ ಒಬ್ಬ ವ್ಯಕ್ತಿ ಪ್ರಸಿದ್ದಿಯನ್ನು ಪಡೆಯಬೇಕಾದರೆ ಆತನಿಗೆ ಗುರುಗಳ ಮಾರ್ಗದರ್ಶನ ಅತ್ಯವಶ್ಯವಾಗಿದೆ. ರಾಮಕೃಷ್ಣ ಪರಮಹಂಸರ ಶಿಷ್ಯರಾಗಿ ಸ್ವಾಮಿ ವಿವೇಕಾನಂದರು ವಿಶ್ವದಲ್ಲಿ ಪ್ರಸಿದ್ಧಿ ಹೊಂದಿದರು.  ಮಾಜಿ ಸೈನಿಕ ಬಸಣ್ಣ ಎ. ದೇಸಾಯಿ ಅತಿಥಿಗಳಾಗಿ ಆಗಮಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಎ.ಎಂ.ಕೆಂಪಿ ವಹಿಸಿದ್ದರು.  

ಇದೇ ಸಮಯದಲ್ಲಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ಶಾಲಾ ವಿದ್ಯಾಥರ್ಿಗಳನ್ನು ಸತ್ಕರಿಸಿ ಸನ್ಮಾನಿಸಲಾಯಿತು. ನಂತರ ಶಾಲಾ ಮಕ್ಕಳಿಂದ ಮನೋರಂಜನೆ ಕಾರ್ಯಕ್ರಮಗಳು ಜರುಗಿದವು.  

ಈಸಮಯದಲ್ಲಿ ಮುಖ್ಯೋಪಾಧ್ಯಾಯರಾದ ಈಶ್ವರ ಪಟಗಾರ, ಆಡಳಿತ ಮಂಡಳಿ ಸದಸ್ಯರಾದ ವಿಜಯ ಸುಣಧೋಳಿ, ಉಗಾರ ಬುದ್ರುಕ ಜೆ.ಇ.ಟಿ. ಪ್ರಧಾನ ಗುರುಮಾತೆಯರಾದ ಶಾಂತಾ ಕೆಂಪಿ, ಶಿಕ್ಷಕರು, ಶಿಕ್ಷಕಿಯರು ವಿವಿಧ ಶಾಲೆಗಳ ಶಾಲಾ ಶಿಕ್ಷಕರು, ಪಾಲಕರು, ಗ್ರಾಮಸ್ಥರು ಅಪಾರ ಸಂಖ್ಯೆಯಲ್ಲಿ ಇದ್ದರು.