ಹಾವೇರಿ: ಜನಪದ ಕಲೆಯಾದ ಬೀದಿನಾಟಕಗಳಿಂದ ನಮ್ಮ ಸಮಾಜಕ್ಕೆ ಒಳ್ಳೆಯ ಸಂದೇಶಗಳು ತಲುಪುತ್ತಿವೆ ಎಂದು ಶಾಸಕರಾದ ನೆಹರು ಓಲೇಕಾರ ಅವರು ಹೇಳಿದರು.
ಮೈಲಾರ ಮಹದೇವಪ್ಪ ವೃತ್ತದಲ್ಲಿ ಮಂಗಳವಾರ ಬೆಂಗಳೂರಿನ ಬಾಲಭವನ ಸೊಸೈಟಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಬಾಲ ಭವನ ಸಹಯೋಗದಲ್ಲಿ ನಡೆದ ಅಭಿರಂಗ ಮಕ್ಕಳ ನಾಟಕೋತ್ಸವ ಕಾರ್ಯಕ್ರಮಕ್ಕೆ ತಮಟೆ ಬಾರಿಸುವುದರ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಸಾಮಾಜಿಕ ಸಮಸ್ಯೆಗಳನ್ನು ತೆರೆದಿಟ್ಟು ಸಮಾಜದ ಪರಿವರ್ತನೆಗೆ ಸಂದೇಶಗಳನ್ನು ನೀಡಲು ಬೀದಿ ನಾಟಕ ಪರಿಣಾಮಕಾರಿ ಮಾಧ್ಯಮವಾಗಿದೆ. ಈ ಸಾಮಾಜಿಕ ಬದಲಾವಣೆ ಕೆಲಸದಲ್ಲಿ ಮಕ್ಕಳು ಮುಂದಾಗಿರುವುದರಿಂದ ಈ ಮಕ್ಕಳಿಗೆ ಸಾಮಾಜಿಕ ಅರಿವು ಮತ್ತು ಬದಲಾವಣೆ ಮಾಡುವ ಮನೋಭಾವ ಬೆಳೆಯುತ್ತದೆ. ಇದು ಸಕರ್ಾರದ ಉದ್ದೇಶವು ಆಗಿದೆ. ಮಕ್ಕಳನ್ನು ಇಂತಹ ಚಟುವಟಿಕೆಗಳಲ್ಲಿ ಶಿಕ್ಷಕರು ತೊಡಗಿಸುವ ಮೂಲಕ ಜಾಗೃತ ಪ್ರಜೆಗಳನ್ನಾಗಿ ಬೆಳೆಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಲ ರಕ್ಷಣೆಯ ಸಂದೇಶ ಬಿಂಬಿಸುವ 'ಕೆರೆ ಕಳದೈತ್ರಿ ನಾಟಕ ಹಾಗೂ ಬಾಲ್ಯ ವಿವಾಹ ನಿಷೇಧ ಕುರಿತಂತೆ ಜಾಗೃತಿ ಮೂಡಿಸುವ 'ತಿಮ್ಮನ ಮದುವೆ' ಬೀದಿ ನಾಟಕಗಳನ್ನು ಮನ್ನಂಗಿ ಹಾಗೂ ಕುನ್ನೂರು ಗ್ರಾಮದ ಸಕರ್ಾರಿ ಪ್ರೌಢಶಾಲೆಯ ವಿದ್ಯಾಥರ್ಿಗಳು ಅಭಿನಯಿಸಿದರು.
ಮುಖಂಡರಾದ ಗಿರೀಶ್ ತುಪ್ಪದ, ದೊಡ್ಡಪ್ಪಗೌಡ್ರ ಪಾಟೀಲ, ಉಮೇಶ ಮಾಗಳ, ರಂಗಕಮರ್ಿ ಸತೀಶ ಕುಲಕಣರ್ಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿದರ್ೆಶಕ ಪಿ.ವೈ.ಶೆಟ್ಟಪ್ಪನವರ, ಹಾವೇರಿಯ ಸರಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಸುರೇಶ ಮೂಡಲದವರ, ಸಿಆರ್ಪಿ ಪರಮೇಶ ಬಡಿಗೇರ, ಸರಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲೆ ನಂ.2ರ ಮುಖ್ಯೋಪಾಧ್ಯಾಯ ಶ್ರೀಕಾಂತ್ ಭಜಂತ್ರಿ ಉಪಸ್ಥಿತರಿದ್ದರು.