ಲೋಕದರ್ಶನವರದಿ
ರಟ್ಟೀಹಳ್ಳಿ24: ಸಾಮಾನ್ಯವಾಗಿ ರಾಜಕಾರಣಿಗಳು ಎಂದರೆ ಗೂಟದ ಕಾರು, ಖಾದಿ ಬಟ್ಟೆ, ಅಕ್ಕಪಕ್ಕ ಜನ ರಾಜಕೀಯ ಒತ್ತಡದಲ್ಲಿ ಜೀವನ ನಡೆಸುವ ರಾಜಕಾರಣಿಗಳ ಮಧ್ಯೆ ವಿಭಿನ್ನವಾಗಿ ನಿಲ್ಲುವ ರಾಜಕಾರಣಿ, ಕೃಷಿಕರು ಎಂದರೆ ಅದುವೇ ಮಾಜಿ ಶಾಸಕರು, ರಾಜ್ಯ ಉಗ್ರಾಣ ನಿಗಮದ ಅಧ್ಯಕರಾದ ಯು.ಬಿ.ಬಣಕಾರ ಅವರು.
40 ಎಕರೆ ಕೃಷಿ ಮಾಡುವ ಬಣಕಾರ: 40 ಎಕರೆ ಜಮೀನು ಹೊದಿರುವ ಬಣಕಾರ, ಕಬ್ಬು, ಗೋವಿನ ಜೋಳ, ಚಿಕ್ಕು, ಮಾವಿನ ಹಣ್ಣು, ತೆಂಗು, ಅಡಿಕೆ ಸೇರಿದಂತೆ ಅನೇಕ ಬೆಳೆಗಳನ್ನು ತಮ್ಮ ಹೊಲದಲ್ಲಿ ಬೆಳೆಯುತ್ತಾರೆ. ಜೊತೆಗೆ ತಾವೇ ಬೆಳಿಗ್ಗೆ ಹಾಗೂ ಸಂಜೆ 6 ಗಂಟೆಗೆ ಸರಿಯಾಗಿ ಹೊಲಕ್ಕೆ ಹಾಜರಾಗುವ ಇವರು ಒಂದು ಕಡೆಯಿಂದ ಎಲ್ಲ ಬೆಳೆಗಳ ವೀಕ್ಷಣೆಯ ಜೊತೆಗೆ, ನೀರು ಬಿಡುವುದು, ಔಷಧಿ ಸಿಂಪಡಣೆ ಜೊತೆಗೆ ಹೊಲದಲ್ಲಿ ಕೆಲಸ ಮಾಡುವವರಿಗೆ ಮಾರ್ಗದರ್ಶನ ಮಾಡುವುದು,ಕಳೆ ಕೀಳುವುದು ಸೇರಿದಂತೆ ಕೃಷಿಗೆ ಸಂಭಂಧಿಸಿದ ಹೊಸ ಹೊಸ ರೂಪರೇಷಗಳನ್ನು ತಮ್ಮ ಬೆಳೆಗಳಿಗೆ ಅಳವಡಿಸುತ್ತಾರೆ,ಸಾವಯವ ಕೃಷಿಯ ಬಗ್ಗೆ ಸಾಕಷ್ಟು ಆಸಕ್ತಿ ಹೊದಿರುವ ಬಣಕಾರ ಹೆಚ್ಚು ಹೆಚ್ಚಾಗಿ ಸಾವಯವ ಬೆಳೆಗಳನ್ನು ಬೆಳೆಯುತ್ತಾರೆ.
ಹೊಲ ಉಳುಮೆ ಮಾಡುವ ಬಣಕಾರ: ಕೆಲಸದವರಿಗೆ ನೆಚ್ಚಿಕೊಳ್ಳದ ಬಣಕಾರ ತಾವೇ ಎತ್ತುಗಳನ್ನು ಹಿಡಿದು ಹೊಲವನ್ನು ಉಳುಮೆ ಮಾಡುವುದರ ಜೊತೆಗೆ ಬಿತ್ತನೆ ಕೆಲಸವನ್ನು ಸಹ ಮಾಡುವುದು, ಮದ್ಯಾನದ ವೇಳೆಯಲ್ಲಿ ಎಲ್ಲ ಕೆಲಸದವರ ಜೊತೆ ಕೂತು ರೊಟ್ಟಿ ಪಲ್ಯ ತಿಂದು ರಾಜಕಾರಣಿ ಎಂಬ ಅಹಂ ಮೆರೆತು ಸಂಪೂರ್ಣ ಕೃಷಿಕರಾಗುವುದು ಜನಸಾಮಾನ್ಯರ ಮೆಚ್ಚುಗೆಗೆ ಪಾತ್ರವಾಗಿದೆ.
ರಾಜಕೀಯ ಎಂಬುದು ಜನಸೇವೆ ಮಾತ್ರ, ಆದರೆ ರಾಜಕೀಯದ ಜೊತೆ ಸಾಮಾನ್ಯ ರೈತನಂತೆ ಹೊಲದಲ್ಲಿ ದುಡಿಮೆ ಮಾಡುವುದೇ ನಿಜವಾದ ಜೀವನ, ಅವರ ಕೃಷಿ, ಸರಳತೆ ಸಜ್ಜನಿಕೆ, ಮಾತುಗಾರಿಕೆಯೇ ನಮಗೆ ಪ್ರೇರಣೆ ಎಂಬುದು ಬಣಕಾರ ಅಭಿಮಾನಿ ಬಸವರಾಜ ಗಬ್ಬೂರ ಅವರ ಮಾತುಗಳು.ಒಟ್ಟಿನಲ್ಲಿ ಕೇವಲ ರಾಜಕೀಯಕ್ಕೆ ಒತ್ತುಕೊಡದೆ, ಕಷ್ಟಪಟ್ಟು ದುಡಿದು ರಾಜಕಾರಣಿಗಳು ಹೀಗರಬಹುದು ಜೊತಗೆ ಯುವಕರಿಗೆಲ್ಲ ಇಂತಹ ನಾಯಕರು ಮಾದರಿಯಾಗುತ್ತಾರೆ ಎಂಬುದು ಇಮ್ರಾನ ಸವಣೂರ ಅವರ ಅಭಿಪ್ರಾಯ.
-ರಿಜ್ವಾನ ಕಪ್ನಳ್ಳಿ