ಸದೃಢ ದೇಹದಲ್ಲಿ ಸದೃಢ ಮನಸ್ಸಿರಬೇಕು : ಚಂದ್ರಶೇಖರ ಬಿ ಕಂದಕೂರ

A sound mind should be in a sound body : Chandrasekhara B Kandakura

ಸದೃಢ ದೇಹದಲ್ಲಿ ಸದೃಢ ಮನಸ್ಸಿರಬೇಕು : ಚಂದ್ರಶೇಖರ ಬಿ ಕಂದಕೂರ

ರೋಣ 18: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಮಲ್ಲಾಪುರ ಗ್ರಾಮ ಪಂಚಾಯಿತಿಯಲ್ಲಿ ಮಹಿಳಾ ಸಂಜೀವಿನಿ ಒಕ್ಕೂಟ ಜಂಟಿ ಆಶ್ರಯದಲ್ಲಿ ಉಚಿತ ಯೋಗ ಶಿಬಿರವನ್ನು ಹಮ್ಮಿಕೊಂಡಿದ್ದರು ಈ ಕಾರ್ಯಕ್ರಮದಲ್ಲಿ ತಾಲೂಕ ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ ಚಂದ್ರಶೇಖರ ಬಿ ಕಂದಕೂರ ಉದ್ಘಾಟಿಸಿ ಮಾತನಾಡಿದರು..ಪ್ರತಿಯೊಬ್ಬ ಮಹಿಳೆಯರು ಕೂಡ ಯೋಗದ ಸದುಪಯೋಗ ಪಡೆದುಕೊಳ್ಳಲು ಹಾಗೂ ಸದೃಢ ದೇಹದಲ್ಲಿ ಸದೃಢ ಮನಸ್ಸಿರಬೇಕು, ಯೋಗಾಸನವು ನಿರಂತರ ಅಭ್ಯಾಸದಿಂದ ವ್ಯಕ್ತಿಯ ಒತ್ತಡವನ್ನು ನಿವಾರಿಸಬಹುದು. ದೇಹ ಮತ್ತು ಇಂದ್ರಿಯಗಳ ನಿಯಂತ್ರಣ ದೊಂದಿಗೆ ಮಾನವ ಪ್ರಜ್ಞೆಯನ್ನು ಪರಿವರ್ತಿಸುತ್ತದೆ ಮನಸ್ಸು, ದೇಹ ಮತ್ತು ಆತ್ಮ ಸೇರಿದ ಎಲ್ಲಾ ಮೂರು ಅಂಶಗಳನ್ನು ಶುದ್ಧೀಕರಿಸಲು ನೆರವಾಗುತ್ತದೆ. ಇದು ನಾವು ಮತ್ತು ಪ್ರಕೃತಿಯ ಜೊತೆಗೆ ಸಂಪರ್ಕ ವನ್ನು ಕಲ್ಪಿಸುವ ಮೂಲಕ ನಮ್ಮ ನೈಜಕತೆಯ ಹತ್ತಿರಕ್ಕೆ ಕೊಂಡೊಯ್ಯುತ್ತದೆ ಎಂದರು ವಿವರಿಸಿದರು. ಪ್ರಾಸ್ತಾವಿಕ ಮಾತನಾಡಿದಂತ ಡಾ. ಎನ್ ಕೆ ಹಿರೇಗೌಡರ್ ಮಾತನಾಡಿ ನಮ್ಮ ಭಾಗದ ಮಹಿಳೆಯರಿಗೆ ಆರೋಗ್ಯದ ಸಮಸ್ಯೆ ತುಂಬಾ ಕಾಡುತ್ತಿರುವುದರಿಂದ ಈ ಒಂದು ವಾರದ ಯೋಗದ ಸದುಪಯೋಗವನ್ನು ಪಡೆದುಕೊಳ್ಳಲು ಗ್ರಾಮ ಪಂಚಾಯಿತಿ ಮಟ್ಟದ ಮಹಿಳೆಯರಿಗೆ ಅವಕಾಶವನ್ನು ತಾಲೂಕ ಪಂಚಾಯಿತಿಯವರು ನೀಡಿರುವುದು ತುಂಬಾ ಸಂತೋಷ ವಾದ ವಿಷಯವೆಂದು ಎಂದು ತಿಳಿಸಿದರು...ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದ ಅಧ್ಯಕ್ಷರಾದ ಲಲಿತಾ ಕಲ್ಲನಗೌಡ್ರು, ಒಕ್ಕೂಟದ ಕಾರ್ಯದರ್ಶಿಗಳಾದ ಶ್ರೀಮತಿ ಶೈಲಾ ಕುಷ್ಟಗಿ ಹಾಗೂ ತಾಲೂಕು ಕಾರ್ಯಕ್ರಮದ ವ್ಯವಸ್ಥಾಪಕರಾದ ಗುರು ವೀರಾಪುರ್ ಮುಖ್ಯ ಪುಸ್ತಕ ಬರಹಗಾರ ಈರಮ್ಮ ಕಲ್ಲನಗೌಡ ಸಮುದಾಯ ಸಂಪನ್ಮೂಲ ವ್ಯಕ್ತಿಗಳು ಹಾಗೂ ಸ್ವ ಸಹಾಯ ಸಂಘದ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.