ಉತ್ತಮ ಸಂಸ್ಕಾರಯುತ ಶಿಕ್ಷಣದಿಂದ ವಿದ್ಯಾರ್ಥಿಗಳು ಉತ್ತಮ ಜೀವನ ರೂಪಿಸಿಕೊಳ್ಳಲು ಸಾಧ್ಯ

A well-rounded education enables students to build a better life

ಹಾವೇರಿ  03: ಉತ್ತಮ ಸಂಸ್ಕಾರಯುತ ಶಿಕ್ಷಣದಿಂದ ವಿದ್ಯಾರ್ಥಿಗಳು ಉತ್ತಮ ಜೀವನ ರೂಪಿಸಿಕೊಳ್ಳಲು ಸಾಧ್ಯ ಆದ್ದರಿಂದ ಶ್ರೀಮಠದ   ಮಲ್ಲಿಕಾರ್ಜುನ ಆಂಗ್ಲಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆಯು ಆಧುನಿಕ ಶಿಕ್ಷಣ ಪದ್ಧತಿಯೊಂದಿಗೆ ಭಾರತೀಯ ಸಂಸ್ಕೃತಿ ಗನುಗುಣವಾಗಿ ಶಿಕ್ಷಣ ನೀಡುವ ಉದ್ದೇಶದಿಂದ ಸ್ಥಾಪಿತವಾಗಿದ್ದು ಆದರಲ್ಲೂ ವಿಶೇಷವಾಗಿ ಗ್ರಾಮೀಣ ಭಾಗದ ರೈತ -ಕೃಷಿ -ಕಾರ್ಮಿಕಕ ಹೆಚ್ಚಿನ ಅಧ್ಯತೆ ಕೊಡುವ ಉದ್ದೇಶ ಹೊಂದಿದೆ ಎಂದು ಹಾವೇರಿ, ಕರಜಗಿ ಗೌರಿಮಠದ ಪೂಜ್ಯ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ಜಿಲ್ಲೆಯ ಹಿರೇಮುಗದೂರ, ಕಲಕೋಟಿ ಗ್ರಾಮಗಳಲ್ಲಿ ಭಕ್ತ ಸಮುದಾಯಕ್ಕೆ ಆಶೀರ್ವಾದ ನೀಡಿ ಶಾಲೆಯ ಬಗ್ಗೆ ವಿವರಿಸಿದರು. ಶಾಲೆ ಶ್ರೀಮಠದ ಪ್ರಶಾಂತ ವಾತಾವರಣದಲ್ಲಿದ್ದು ಕಂಪ್ಯೂಟರ್ ಸ್ಮಾರ್ಟ್‌ ಕ್ಲಾಸ್ ಮೂಲಕ ಬೋಧನೆ, ವಿವಿಧ ರೀತಿಯ ಸಂಸ್ಕೃತಿಕ ಚಟುವಟಿಕೆಗಳು, ಹಾಗೂ ವಿದ್ಯಾರ್ಥಿಗಳಿಗೆ ವ್ಯಯಕ್ತಿಕ ಕಾಳಜಿ ಮೂಲಕ ಇಂಗ್ಲಿಷ ನೀರರ್ಗಳವಾಗಿ ಮಾತನಾಡಲು ತರಬೇತಿ ನೀಡಿ ವ್ಯಕ್ತಿತ್ವ ವಿಕಸನಕ್ಕಾಗಿ ಪ್ರೇರಣಾತ್ಮಕ ಹಾಗೂ ಸ್ಫೂರ್ತಿದಾಯಕ ಕಾರ್ಯಕ್ರಮ ಮಾಡಲಾಗುವುದು ಎಂದರು.

ಕೃಷಿ ಸಲಹೆಗಾರ ಡಾ. ಗಂಗಯ್ಯ ಕುಲಕರ್ಣಿ ಮಾತನಾಡಿ ಶ್ರೀಮಠದ   ಮಲ್ಲಿಕಾರ್ಜುನ ಆಂಗ್ಲ ಮಾಧ್ಯಮ ಶಾಲೆಯು ಸುಂದರವಾದ ಕಟ್ಟಡ ಹೊಂದಿದ್ದು ವಿಶೇಷವಾಗಿ ನುರಿತ ಅನುಭವಿ ಶಿಕ್ಷಕರ ಉತ್ತಮ ಬೋಧನೆಯಿಂದ ಪ್ರತಿ ವರ್ಷ ಉತ್ತಮ ಫಲಿತಾಂಶ ಪಡೆದಿದ್ದು ಕಡಿಮೆ ಶುಲ್ಕದಲ್ಲಿ ಉತ್ತಮ ಶಿಕ್ಷಣ ಪಡೆಯಲು ಹಾವೇರಿ ನಗರ ಹಾಗೂ ಸುತ್ತ-ಮುತ್ತಲಿನ ಹಳ್ಳಿಗಳ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿದೆ. ಶ್ರೀಗಳ ವಿಶೇಷ ಕಾಳಜಿ ಇದಕ್ಕೆ ಕಾರಣವಾಗಿದೆ ಎಂದರು. ತೋಟದಯಲ್ಲಾಪುರ,ಕರಜಗಿ, ಗಾಂಧಿಪುರ, ಜಂಗಮನಕೊಪ್ಪ, ಯತ್ತಿನಹಳ್ಳಿ, ಕನಕಾಪುರ, ನೆಲೋಗಲ್, ಹೊಂಬರಡಿ, ಕಲ್ಲಾಪುರ, ಚಿಕ್ಕಲಿಂಗದಹಳ್ಳಿ, ಹಿರೇಲಿಂಗದಲ್ಲಿ, ಕುರುಬಗೊಂಡ, ಕೇರಿಮತ್ತಿಹಳ್ಳಿ, ಆಲದಕಟ್ಟಿ ಮುಂತಾದ ಗ್ರಾಮಗಳ ಭಕ್ತ ಸಮುದಾಯಕ್ಕೆ ಶ್ರೀಗಳು ಶಾಲೆಯ ಕುರಿತು ವಿವರಿಸಿದರು.