ಕಂಪ್ಲಿ 07: ಎಪಿಎಂಸಿಯಲ್ಲಿ ವಿದ್ಯುತ್ ದೀಪ ಕುಡಿಯುವ ನೀರು ವ್ಯವಸ್ಥೆ ಜಂಗಲ್ ಕಟಿಂಗ್ ಮಾಡಬೇಕು. ಇಲ್ಲಿನ ಸಮಸ್ಯೆಗಳಿಗೆ ಅಭಿವೃದ್ಧಿಯೊಂದಿಗೆ ಮುಕ್ತಿ ನೀಡುವ ಮೂಲಕ ಎಪಿಎಂಸಿಯನ್ನು ಹತ್ತು ದಿನದಲ್ಲಿ ಅಭಿವೃದ್ಧಿಪಡಿಸಿ ಇಲ್ಲವಾದಲ್ಲಿ ಉಗ್ರ ಹೋರಾಟ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನಗರ ಘಟಕ ಅಧ್ಯಕ್ಷ ಎನ್.ತಿಮ್ಮಪ್ಪ ಆಗ್ರಹಿಸಿದರು.
ಪಟ್ಟಣದ ಅತಿಥಿ ಗೃಹದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರೈತ ಸಂಘ ಹಾಗೂ ಹಸಿರು ಸೇನೆಯ ಸಂಘಟನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಕೃಷಿ ಉತ್ಪನ್ನ ಮಾರ್ಕೇಟ್ ಅಭಿವೃದ್ಧಿನೀರಿನ.ವ್ಯವಸ್ಥೆ ವಿದ್ಯುತ್ ದೀಪ ಅಳವಡಿಸಬೇಕು. ಪಟ್ಟಣದಲ್ಲಿರುವ ವ್ಯಾಪಾರ ಅಂಗಡಿಗಳನ್ನು ಎಪಿಎಂಸಿಯ ವ್ಯಾಪಾರ ಮಳಿಗೆಯಲ್ಲೇ ವ್ಯವಹಾರ ಮಾಡಲು ಸ್ಥಳಾಂತರಿಸಬೇಕು. ಇಲ್ಲೇ ಬ್ಯಾಂಕ್ ನಿರ್ಮಿಸಿದರೆ, ರೈತರಿಗೆ ಹಾಗೂ ವ್ಯಾಪಾರಸ್ಥರಿಗೆ ಅನುಕೂಲವಾಗಲಿದೆ. ಖರೀದಿ ಮಾಡಿದ ರೈತರಿಗೆ ಚೆಕ್ ನೀಡುವ ವ್ಯವಸ್ಥೆಯಾಗಬೇಕು. ಕೆಲ ವರ್ಷದಿಂದ ರೈತ ಸಂಪರ್ಕದಿಂದ ರೈತರಿಗೆ ಸಲಕರಣೆ ನೀಡುವಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಕಛೇರಿಗೆ ರೈತರು ಬಂದರೆ, ಸಲಕರಣೆ ಸ್ಕೀಮ್ ಇನ್ನೂ ಬಂದಿಲ್ಲ ಎನ್ನುತ್ತಿದ್ದಾರೆ. ಆದ್ದರಿಂದ ಈ ಎಲ್ಲಾ ರೈತರ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲವಾದಲ್ಲಿ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆಯ ನೇತೃತ್ವದಲ್ಲಿ ಸಾಕಷ್ಟು ರೈತರ ಬೆಂಬಲದೊಂದಿಗೆ ಬೃಹತ್ ಹೋರಾಟ ಮಾಡಲಾಗುವುದು ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ವಿ.ಟಿ.ನಾಗರಾಜ, ನಗರ ಘಟಕದ ಗೌರವಾಧ್ಯಕ್ಷ ರಂಗಪ್ಪ, ಖಜಾಂಚಿ ಗಂಗಣ್ಣ, ಪ್ರಧಾನ ಕಾರ್ಯದರ್ಶಿ ಬಿ.ಮಲ್ಲಿಕಾರ್ಜುನ, ರೈತ ಮುಖಂಡರಾದ ಎಂ.ಈರಣ್ಣ, ಎಂ.ನಾಗಪ್ಪ, ಎಲ್.ಯಮನಪ್ಪ, ಎನ್.ನಾಗರಾಜ, ಎ.ನಾಗರಾಜ ಇದ್ದರು.