ಪ್ರಭಾ ಬೋರಗಾಂವಕರ ಅವರ ಕೃತಿಗೆ ಅಬ್ಬಿಗೇರಿ ದತ್ತಿ ನಿಧಿ ಪ್ರಶಸ್ತಿ

Abbigeri Endowment Fund Award for Prabha Boragaonkar's work

ಅಥಣಿ 01: ತಾಲೂಕಿನ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಪ್ರಭಾ ಬಾಳಕೃಷ್ಣ ಬೋರಗಾಂವಕರ ಇವರು ತಮ್ಮನ್ನು ತಾವು ಸಾಹಿತ್ಯಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.ಈಗಾಗಲೇ ಅವರು ರಚಿಸಿದ ಹಾಗೂ ಅನುವಾದಿಸಿದ ಕೃತಿಗಳಿಗೆ ಅನೇಕ ಪ್ರಶಸ್ತಿಗಳು ಲಭಿಸಿವೆ 

2024ರಲ್ಲಿ ಪ್ರಕಟವಾದ ಮಹಿಳಾ ಪರ ಚಿಂತನೆಯ ಹೆಣ್ಣು ಹುಣ್ಣಲ್ಲ ಹೂವು ಮತ್ತು ಇತರೆ ಲೇಖನಗಳು  ಕೃತಿಗೆ ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದಿಂದ ಅಬ್ಬಿಗೇರಿ ದತ್ತಿ ನಿಧಿ ಪ್ರಶಸ್ತಿ ಬಂದಿದೆ ಎಂದು ಸಂಘದ ಅಧ್ಯಕ್ಷ ಸುಮಾ ಕಿತ್ತೂರ ಹಾಗೂ ಪ್ರಧಾನ ಕಾರ್ಯದರ್ಶಿ ಆಶಾ ಯಮಕನಮರಡಿ ಅವರು ತಿಳಿಸಿ ಅಭಿನಂದಿಸಿದ್ದಾರೆ. 

ಕುಟುಂಬದವರು ಸಹೃದಯಿ ಓದುಗರು ಅವರಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ. ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಮೇ 2ನೇ ತಾರೀಖಿನಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.