ಮೇ 1 ರಿಂದ ಆದಿಶಂಕರಾಚಾರ್ಯ ಜಯಂತಿ ಆಚರಣೆ

Adi Shankaracharya Jayanti celebrations from May 1

ಬಳ್ಳಾರಿ  26: ಇಲ್ಲಿನ ಸಂಗನಕಲ್ಲು ರಸ್ತೆಯಲ್ಲಿರುವ   ಶಾರದಾ ಶಂಕರ ಮಠದಲಿ  ಜಗದ್ಗುರು ಶಂಕರ ಭಗವತ್ಪಾದಾಚಾರ್ಯರ ಜಯಂತ್ಯುತ್ಸವದ ಅಂಗವಾಗಿ ವಿಶ್ವಾವಸುನಾಮ ಸಂವತ್ಸರದ ವೈಶಾಖ ಮಾಸ ಶುದ್ಧ ಚತುರ್ಥಿ ಹಾಗೂ ಪಂಚಮಿ ಮೇ.1 ಮತ್ತು 2 ರಂದು   ಜಗದ್ಗುರು ಮಹಾಸ್ವಾಮಿಗಳವರ ಆದೇಶಾನುಸಾರ ವಿಜೃಂಭಣೆಯಿಂದ ಜಯಂತ್ಯುತ್ಸವ ನಡೆಸಲು ಭಕ್ತರು ಸಂಕಲ್ಪಿಸಿದ್ದಾರೆ.

ಶೃಂಗೇರಿ   ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನಂ ದಕ್ಷಿಣಾಮ್ನಾಯ ಶೃಂಗೇರಿ   ಶಾರದಾ ಪೀಠದ   ಮತ್ಪರಮಹಂಸೇತ್ಯಾದಿ ಸಮಸ್ತ ಬಿರುದಾವಳಿ ವಿರಾಜಮಾನರಾಗಿರುವ ಶೃಂಗೇರಿ   ಶಾರದಾ ಪೀಠಾಧೀಶ್ವರರಾದ ಜಗದ್ಗುರು   ಭಾರತೀ ತೀರ್ಥ ಮಹಾಸನ್ನಿಧಾನಂಗಳವರ ಮತ್ತು ತತ್ತರ ಕಮಲ ಸಂಜಾತರಾದ ಜಗದ್ಗುರು   ವಿಧುಶೇಖರ ಭಾರತೀ ಸನ್ನಿಧಾನಂಗಳವರ ಪರಮಾನುಗ್ರಹದಿಂದ ಬಳ್ಳಾರಿ ಮಹಾನಗರದ ಸಂಗನಕಲ್ಲು ರಸ್ತೆಯಲ್ಲಿ ಸ್ಥಾಪಿಸಲಾಗಿರುವ   ಶೃಂಗೇರಿ ಶಾರದಾ ಶಂಕರ ಮಠದಲ್ಲಿ ಅತ್ಯಂತ ಶ್ರದ್ಧಾಭಕ್ತಿಯಿಂದ ಜಯಂತ್ಯುತ್ಸವ ಆಚರಿಸಲಾಗುತ್ತಿದ್ದು ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಆಚಾರ್ಯರ ಕೃಪೆಗೆ ಪಾತ್ರರಾಗಲು ಕೋರಿದೆ. ಇಲ್ಲಿನ ಸತ್ಯನಾರಾಯಣ ಪೇಟೆಯ ವೆಂಕಟರಮಣ ದೇವಸ್ಥಾನದಿಂದ ಸಭಾಪತಿ ಬೀದಿಯ ಶಂಕರ ಮಠದವರೆಗೆ ಮೇ 1 ರಂದು ಸಂಜೆ 4-30ರಿಂದ   ಶಂಕರ ಭಗವತ್ಪಾದರ ಭಾವಚಿತ್ರದ ಭವ್ಯ ಶೋಭಾ ಯಾತ್ರೆ ಜರುಗಲಿದೆ. ಸಂಗನಕಲ್ಲು ರಸ್ತೆಯ ಶಂಕರಮಠದಲ್ಲಿ ಎರಡು ದಿನ ಪೂಜೆ, ಅಭಿಷೇಕಾದಿಗಳು ಜರುಗಲಿವೆ.

ಪ್ರವಚನ, ವೇದ ಪಾರಾಯಣ, ಸಾಮೂಹಿಕ ಭಜನೆ, ಸಾಮೂಹಿಕ ಉಪನಯನಗಳು ಜರುಗಲಿದ್ದು ಸಕಲ ಭಕ್ತಾದಿಗಳು ಈ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಭಗವತ್ಪಾದರ ಕೃಪೆಗೆ ಪಾತ್ರರಾಗುವಂತೆ ಆಡಳಿತಾಧಿಕಾರಿ ಪಿ.ಎ.ಮುರಳಿ ಅವರು ಕೋರಿದ್ದಾರೆ.