ಮರಣ ನಂತರ ನೇತ್ರದಾನ ಮಾಡಿ ಅಂಧರ ಬಾಳಿಗೆ ಬೆಳಕಾಗಿ

ಲೋಕದರ್ಶನವರದಿ

ರಾಣಿಬೆನ್ನೂರ:  ಯಾಂತ್ರಿಕೃತ ಬದುಕಿನ ಇಂದಿನ ದಿನಮಾನಗಳಲ್ಲಿ ಮನುಷ್ಯನು  ತಮ್ಮ ಕಣ್ಣುಗಳನ್ನು ನಿಧನದ ಆನಂತರ ಅಂಧರಿಗೆ ದಾನ ಮಾಡುವುದರಿಂದ ಇನ್ನೊಬ್ಬರ ಬಾಳು ಹಸನಾಗುವುದು. ಸಮಾಜದಲ್ಲಿ ಅನೇಕ ಸಂಸ್ಥೆಗಳು ಇಂತಹ ನೇತ್ರ ದಾನದ ಪರೋಪಕಾರಿ ಕಾರ್ಯಗಳ ಮೂಲಕ ದೃಷ್ಠಿಹೀನರಿಗೆ ದೃಷ್ಠಿ ಒದಗಿಸುವ ಪುಣ್ಯದ ಕೆಲಸ ಮಾಡುತ್ತಲಿರುವುದು ನಿಜಕ್ಕೂ ಅಂಧರಿಗೆ ಬಯಸದೇ ಬಂದ ಸಂಜೀವಿನಿಯಾಗಿದೆ ಎಂದು ಗುಡ್ಡದ ಆನ್ವೇರಿಯ ಶಿವಯೋಗಿ ಶಿವಾಚಾರ್ಯ ಶ್ರೀಗಳು ಹೇಳಿದರು.

       ಗುರುವಾರ ಸುಕ್ಷೇತ್ರವೆಂದೇ ಹೆಸರಾದ ತಾಲೂಕಿನ ಹೊನ್ನತ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ  ಸ್ವಾಭಿಮಾನಿ ಕನರ್ಾಟಕ ರಕ್ಷಣಾ ವೇದಿಕೆ, ಶಿವಮೊಗ್ಗದ ಶಂಕರ ಕಣ್ಣಿನ ಆಸ್ಪತ್ರೆ, ಲಯನ್ಸ್ ಮತ್ತು ಲಿಯೋ ಕ್ಲಬ್,  ಜಿಲ್ಲಾ ನೇತ್ರ ಸಂಚಾರಿ ಘಟಕ, ಜಿಲ್ಲಾ ಕುಟುಂಬ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ಏರ್ಪಡಿಸಿದ್ದ ಉಚಿತ ನೇತ್ರ ತಪಾಸಣಾ ಮತ್ತು ಶಸ್ತ್ರಚಿಕಿತ್ಸಾ ಶಿಭಿರವನ್ನು ಉದ್ಘಾಟಿಸಿ ಮಾತನಾಡಿದರು. ಕಣ್ಣಿಲ್ಲದವರ ಬಗ್ಗೆ ಯಾರೂ ಕೀಳಾಗಿ ನೋಡುವ ಮನೋಭಾವನೆ ಯಾರಲ್ಲೂ ಬರಬಾರದು. ಇದರಿಂದ  ಇತರರಿಗೂ ನೋವಾಗುತ್ತದೆ ಎಂಬುದನ್ನು ಅರಿಯಬೇಕು  ಎಂದರು.

    ಬಡವರ ಬಾಳಿಗೆ ಬೆಳಕಾಗಲು ಇದ್ದವರು, ಅಭಿರುಚಿ ಹೊಂದಿದವರು ಇಲ್ಲದವರಿಗೆ ಕಣ್ಣು ದಾನ ನೀಡುವುದರ ಮೂಲಕ ನಿಜವಾದ ಮಾನವೀಯತೆಯನ್ನು ಮೆರೆಯಬೇಕು. ತಮ್ಮ ಅಕಾಲಿಕ ಜೀವದ ಮಧ್ಯೆಯೂ ಇಂತಹ ಪರೋಪಕಾರ ಮಾಡಿದರೆ ಜೀವನ ಮುಕ್ತಿಯ ಜೊತೆಗೆ ಇತರರಿಗೂ ನೋಡುವ ಭಾಗ್ಯ ನೀಡಿದ ಮಹಾನ್ ಕೀತರ್ಿ ನಿಮ್ಮದಾಗುತ್ತದೆ. ಈ ದಿಸೆಯಲ್ಲಿ ಸರ್ವರೂ ಕಣ್ಣಿನ ಬಗ್ಗೆ ಹೆಚ್ಚಿನ ಜಾಗರೂಕತೆಯ ಜೊತೆಗೆ ದಾನ ನೀಡುವಲ್ಲಿಯೂ ಮುಂದಾಗುವುದರ ಮೂಲಕ ಇತರರನ್ನು ದಾನ ನೀಡಲು ಪ್ರೇರೇಪಿಸಬೇಕು  ಎಂದರುಅಧ್ಯಕ್ಷತೆ ವಹಿಸಿದ್ದ ಸ್ವಾಕರವೇ ರಾಜ್ಯಾಧ್ಯಕ್ಷ ನಿತ್ಯಾನಂದ ಕುಂದಾಪುರ ಮಾತನಾಡಿ ಹಳ್ಳಿಗಳಲ್ಲಿ ನೇತ್ರ ಸಂಬಂಧಿ ಕಾಯಿಲೆಗೆ ತುತ್ತಾದವರು ಅನೇಕ ರೀತಿಯ ತೊಂದರೆ ಅನುಭವಿಸುತ್ತಾರೆಎಂದರು.

ಸಕರ್ಾರಗಳು ಮಾಡಬೇಕಾದ ಕಾರ್ಯಗಳನ್ನು ಇಂದು ಬಹುತೇಕವಾಗಿ ಸಂಘ-ಸಂಸ್ಥೆಗಳು, ಸಾಮಾಜಿಕ ಸಾಂಸ್ಕೃತಿಕ ಸಂಘಟನೆಗಳು ಮಾಡುತ್ತಲಿವೆ. ಸ್ವಾಕರವೇ ಸಂಘಟನೆ ರಾಜ್ಯವೂ ಸೇರಿದಂತೆ ಉತ್ತರ ಕನರ್ಾಟಕದ ಬಹು ಭಾಗಗಳಲ್ಲಿ ತನ್ನ ಸಾಮಾಜಿಕ ಕಳಕಳಿಯನ್ನು ಹೊತ್ತು ನಾಗರೀಕರ ಅತ್ತ್ಯುತ್ತಮ ಸೇವೆ ಸಲ್ಲಿಸುತ್ತಿರುವುದು ತಾಲೂಕು-ಜಿಲ್ಲೆಗೆ  ಹೆಮ್ಮೆ ತರುವ  ಸಂಗತಿಯಾಗಿದೆ ಎಂದರು. 100ಕ್ಕೂ ಅಧಿಕ ಜನರು ಶಿಬಿರದ ಪ್ರಯೋಜನ ಪಡೆದುಕೊಂಡರು. ಇದರಲ್ಲಿ 30ಜನರು ಶಸ್ತ್ರಚಿಕಿತ್ಸೆಗೆ ಆಯ್ಕೆಗೊಂಡರು.