ವಿರಾಮದ ನಂತರ ಚಿತ್ರ ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಸಿನಿ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ
ಬಳ್ಳಾರಿ 28: ಮೂಲತಃ ಬಳ್ಳಾರಿ ಮೂಲದ ವಿಶ್ವನಾಥ ಸಿಂಗಾರ ಮಟ್ಟ ಅವರ ನಿರ್ದೇಶನ ವಿಹಾನ್ ಕಾರ್ತಿಕ್ ಅಭಿನಯದ ವಿರಾಮದ ನಂತರ ಚಿತ್ರ ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆ. ಸಿನಿಮಾ ನೋಡಿದ ಸಿನಿಮಾ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ.ವಿರಾಮದ ನಂತರ ಚಿತ್ರ ರಾಜ್ಯಾದ್ಯಂತ ಬಿಡುಗಡೆ ಹಿನ್ನೆಲೆ ಬಳ್ಳಾರಿ ನಗರದಲ್ಲಿನ ನಟರಾಜ್ ಕಾಂಪ್ಲೆಕ್ಸ್ ಆವರಣದಲ್ಲಿನ ಉಮಾ ಚಿತ್ರಮಂದಿರದಲ್ಲಿ ವಿರಾಮದ ನಂತರ ಚಿತ್ರದ ನಿರ್ದೇಶಕರಾದ ವಿಶ್ವನಾಥ್, ನಟ ವಿಹಾನ್ ಕಾರ್ತಿಕ್, ನಟಿ ಸಾನ್ವಿ, ಪವಿತ್ರ ರಾಜ್ ಮುಂತಾದವರು ಸಿನಿಮಾ ವೀಕ್ಷಿಸಿದರು.ಸಂಗೀತ ನಿರ್ದೇಶಕರಾದ ಹರ್ಷ ಪ್ರವೀಣ್ ಅವರು ಸಂಗೀತವಿದೆ.ಮೂಲತಃ ಬಳ್ಳಾರಿ ಮೂಲದ ವಿಶ್ವನಾಥ ಸಿಂಗಾರ ಮಟ್ಟ ಅವರು ನಿರ್ದೇಶನದಲ್ಲಿ ಮೂಡಿ ಬಂದಿರುವ ಮೊದಲ ಚಿತ್ರ ಇದಾಗಿದೆ. ಬಹುತೇಕ ಹೊಸ ಕಲಾವಿದರು, ತಂತ್ರಜ್ಞರು ಸೇರಿ ನಿರ್ಮಾಣ ಮಾಡಿದ ಚಿತ್ರ ಇದಾಗಿದೆ....*ಪೋಟೋ ಕ್ಯಾಪ್ಶನ್ *ಉಮಾ ಚಿತ್ರಮಂದಿರದಲ್ಲಿ ವಿರಾಮದ ನಂತರ ಚಿತ್ರ ಬಿಡುಗಡೆ ಹಿನ್ನೆಲೆ ಚಿತ್ರ ಮಂದಿರದ ಮುಂಭಾಗದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.