ಯರಗಟ್ಟಿ 17: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದರೂ ಕೂಡ ಬಿಜೆಪಿ ಕೆಲವು ಕ್ಷೇತ್ರದಲ್ಲಿ ಇನ್ನೂ ತನ್ನ ಭದ್ರಕೋಟೆಯನ್ನು ಉಳಿಸಿಕೊಂಡಿದೆ. ಬಿಜೆಪಿಯ ಭದ್ರಕೋಟೆ ಯರಗಟ್ಟಿ ತಾಲೂಕಿನ ಯರಝರ್ವಿ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಸಹಕಾರಿ ಸಂಘದ ಚುನಾವಣೆಯೇ ಇದಕ್ಕೆ ಉದಾಹರಣೆಯಾಗಿದೆ. ಪ್ರಾಥಮಿಕ ಕೃಷಿ ಸಹಕಾರಿ ಸಂಘದ ಅಧ್ಯಕ್ಷ ಸ್ಥಾನಕ್ಕೆ ಗುರುವಾರದಂದು ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.
ವಿವಿಧೋದ್ದೇಶ ಪ್ರಾಥಮಿಕ ಕೃಷಿ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಕಲ್ಮೇಶ ಸೋಮಪ್ಪ ಸೊಪ್ಪಡ್ಲ ಮತ್ತು ಉಪಾಧ್ಯಕ್ಷರಾಗಿ ಪುಂಡಲೀಕ ಯಮನಪ್ಪ ಗಡಮನ್ನವರ ಆಯ್ಕೆಯಾಗಿದ್ದು, ಬಿಜೆಪಿ ಮಂಡಳ ಅಧ್ಯಕ್ಷ ವಿರೂಪಾಕ್ಷ ಮಾಮನಿ, ಮಾಜಿ ಜಿ. ಪಂ. ಸದಸ್ಯ ಅಜೀತಕುಮಾರ ದೇಸಾಯಿ ಸೇರಿದಂತೆ ಸ್ಥಳೀಯ ಬಿಜೆಪಿ ನಾಯಕರು ಅಭಿನಂದಿಸಿದ್ದಾರೆ. ನೂತನ ಅಧ್ಯಕ್ಷರಿಗೆ ಹಾಗೂ ಉಪಾಧ್ಯಕ್ಷರಿಗೆ ಶಾಲು ಹೊದಿಸಿ ಹೂಗುಚ್ಛ ನೀಡಿ ಸಿಹಿ ತಿನಿಸುವ ಮೂಲಕ ಬಿಜೆಪಿ ಕಾರ್ಯಕರ್ತರು ಗೆಲುವನ್ನು ಸಂಭ್ರಮಿಸಿದರು.
ಈ ವೇಳೆ ಪರಶುರಾಮ ಶಿಂಗನವರ, ಜಿ. ಎಂ. ಪತ್ತಾರ, ಪ್ರಕಾಶ ಕಬ್ಬೂರ, ವೆಂಕನಗೌಡ ಪಾಟೀಲ, ಸುರೇಶ ಕತ್ತಿ, ಚನ್ನಪ್ಪ ಚಿಪ್ಪಲಕಟ್ಟಿ, ಸಿದ್ದಪ್ಪ ಬೂಶಿ, ಸಿದ್ದಪ್ಪ ಹೆಕ್ಕಿ, ಬಸವರಾಜ ಇಂಚಲ, ದಶರಥ ಬೂಮ್ಮನ್ನವರ, ಸುಮೀತ್ರಾ ಬೂಮ್ಮನ್ನವರ, ಅನಿತಾ ಹೂಗಾರ, ಚಾಯಪ್ಪ ಶಿಂಗನ್ನವರ, ಮಲ್ಲಪ್ಪ ಕಡಕೋಳ, ಚೇತನ ಜಕಾತಿ, ಕೃಷ್ಣಮೂರ್ತಿ ತೊರಗಲ್, ಸದಾನಂದ ಪಾಟೀಲ, ಕಿರಣ ಹುಣಶ್ಯಾಳ, ಸದಾನಂದ ಹಣಬರ, ಗೌಡಪ್ಪ ಸವದತ್ತಿ, ಮಹಾದೇವ ಯಂಡ್ರಾವಿ, ರವಿಕಿರಣ ಪಾಟೀಲ ಸೇರಿದಂತೆ ಅನೇಕ ಬಿಜೆಪಿ ಕಾರ್ಯಕರ್ತರು ಇದ್ದರು.