ಅಮರೇಶ್ ಕಮ್ಮಾರ್ ಗೆ ಜನ ವಿಜ್ಞಾನ ಪ್ರಶಸ್ತಿ ಪ್ರಧಾನ

Amaresh Kammar was awarded the Jana Vigyan Award

ಕೊಪ್ಪಳ  14:  ಸಾರ್ವಜನಿಕ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ನಿವೃತ್ತಿ ನೌಕರ ಕೊಪ್ಪಳದ ಅಮರೇಶ್ ಕಮ್ಮಾರ್ ರವರಿಗೆ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ರಾಜ್ಯ ಸಮಿತಿ ಬೆಂಗಳೂರು ವತಿಯಿಂದ ಕೊಡ ಮಾಡಿದ ಜನ ವಿಜ್ಞಾನ ಪ್ರಶಸ್ತಿ 2025 ನ್ನೂ ಪ್ರಧಾನ ಮಾಡಿ ಸತ್ಕರಿಸಲಾಯಿತು, ಸದರಿಯವರು ಕಳೆದ ಮೂರು ದಶಕದಿಂದ ಮೂಢನಂಬಿಕೆ ವಿರುದ್ಧ ಪವಾಡರಹಸ್ಯ ಬಯಲು ಕಾರ್ಯಕ್ರಮ ಮಾಡುವುದರ ಮೂಲಕ ಜನರಲ್ಲಿ ವಿಶೇಷವಾಗಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಾ ಬಂದಿರುವ ಇವರ ಅಮೋಘ ಸೇವೆಯನ್ನು ಗಮನಿಸಿ ಇವರನ್ನು ಜನ ವಿಜ್ಞಾನ ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಿ ಪ್ರಶಸ್ತಿಯನ್ನು ಪ್ರಧಾನ ಮಾಡಿ ಸತ್ಕರಿಸಿ ಅಭಿನಂದಿಸಲಾಯಿತು. 

ಇವರೊಂದಿಗೆ ವಿವಿಧ ಕ್ಷೇತ್ರದಲ್ಲಿ ಅದರಲ್ಲೂ ವಿಶೇಷವಾಗಿ ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಲವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು, ಅಮರೇಶ್ ಕಮ್ಮಾರ್ ರವರು 1991 ರಲ್ಲಿ ರಾಷ್ಟ್ರೀಯ ಕಾರ್ಯಕ್ರಮ ವಾದ ಸಂಪೂರ್ಣ ಸಾಕ್ಷರತಾ ಅಂದೋಲನದಲ್ಲಿ  ಸಂಪನ್ಮೂಲ ವ್ಯಕ್ತಿಯಾಗಿ ಸಂಯೋಜಕರಾಗಿ ಉತ್ತಮ ಸೇವೆ ಸಲ್ಲಿಸಿರುವುದನ್ನು ಇಲ್ಲಿ ಸ್ಮರಿಸಬಹುದು, ಸದರಿಯವರಿಗೆ ಪ್ರಶಸ್ತಿ ಲಭಿಸಿರುವುದಕ್ಕೆ ವಿವಿಧ ಸಂಘಟನೆಗಳು ಮತ್ತು ಅವರ ಸ್ನೇಹಿತರ ಬಳಗ ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ,