ಅಂಬೇಡ್ಕರ್ ಒಂದು ಜಾತಿ, ಜನಾಂಗಕ್ಕೆ ಸಿಮೀತರಲ್ಲ, ಸಮಾನ ಹಕ್ಕನ್ನು ಪ್ರತಿಪಾದಿಸಿದ್ದಾರೆ
ಕುಕನೂರು 14: ಡಾ. ಬಿ. ಆರ್ ಅಂಬೇಡ್ಕರ್ ಅವರು ಕೇವಲ ಒಂದು ಜಾತಿ, ಜನಾಂಗಕ್ಕೆ ಸಿಮೀತರಾದವರಲ್ಲಾ, ಅವರು ದೇಶಕ್ಕೆ ಸಂವಿಧಾನ ರಚಿಸಿ ಕೊಡುಗೆ ನೀಡುವ ಮೂಲಕ ಎಲ್ಲಾ ಸಮುದಾಕ್ಕೂ ಆದರ್ಶವಾದ ಮಹಾನ್ ನಾಯಕರು ಎಂದು ಕುಕನೂರು ತಹಶೀಲ್ದಾರ ಎಚ್. ಪ್ರಾಣೇಶ್ ಹೇಳಿದರು.ಅವರು ಕುಕನೂರು ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಹಮ್ಮಿಕೊಂಡ ಡಾ. ಬಿ. ಆರ್ ಅಂಬೇಡ್ಕರ್ ಅವರ 134ನೇ ಜಯಂತೋತ್ಸವ ಆಚರಣೆಯಲ್ಲಿ ಪಾಲ್ಗೋಂಡು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರೆ್ಣ ಸಲ್ಲಿಸಿ ಮಾತನಾಡಿ ಮಹಾನ್ ನಾಯಕರ ತತ್ವಾದರ್ಶಗಳನ್ನು ನಾವು ನಿವೇಲ್ಲರೂ ಅಳವಡಿಸಿಕೊಂಡು ಸಾಗೋಣ ಎಂದು ಕರೆ ನೀಡಿದರು.ನಂತರ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ರವೀಂದ್ರ ಬಾಗಲಕೋಟ್ ಮಾತನಾಡಿ, ಸವಿಂಧಾನ ಶಿಲ್ಪಿ ಬಾಬಾಸಾಬ ಅಂಬೇಡ್ಕರ್ ತಮ್ಮ 65 ವರ್ಷದ ಜೀವನದಲ್ಲಿ ಶಿಸ್ತು, ಬದ್ದ ಜೀವನ ನಡೆಸುವ ಜೊತೆಗೆ ಭಾರತಕ್ಕೆ ಸಂವಿಧಾನ ರಚಿಸಿ ಕೊಡುಗೆ ನೀಡಿದ್ದು ಸಾರ್ವಕಾಲಿಕ ಸ್ಮರಣಿಯವಾಗಿದೆ ಎಂದರು.
ಕೇವಲ ಭಾರತ ದೇಶವಲ್ಲದೇ ಪ್ರಪಂಚದ ಹಲವಾರು ದೇಶಗಳಲ್ಲಿ ತಮ್ಮ ಹೆಸರನ್ನು ಅಚ್ಚಳಿಯದೇ ಉಳಿಯುವಂತೆ ಮಾಡಿದ ಕೀರ್ತಿ ಅವರದು, 134 ವರ್ಷಗಳು ಕಳೆದರು ಕೂಡಾ ಭೀಮ್ ಅವರು ಇಂದೇ ಜನಿಸಿದ್ದಾರೋ ಏನು ಎನ್ನವಂತಿದೆ ಎಂದರು.ಈ ವೇಳೆ ಪಟ್ಟಣದ ಬಿಸಿಎಮ್ ಹಾಸ್ಟೇಲ್ ಮುಖ್ಯಸ್ಥರಾದ ವಿಜಯಕುಮಾರ ಮಾತನಾಡಿ, ಮಹಾನ್ ಮಾನವತಾವಾದಿ ಅಂಬೇಡ್ಕರ್ ಅವರು ದೇಶದಲ್ಲಿ ಅಸಮಾನತೆಯನ್ನು ಹೋಗಲಾಡಿಸಲು ಶ್ರಮಿಸಿದವರು, ತಾವೇ ಸ್ವತಃ ಅಸ್ಪೃಶ್ಯತೆಯನ್ನು ಅನುಭವಿಸಿದರೂ ಕೂಡಾ ಮುಂದಿನ ಜನಾಂಗ ಆ ಅಸ್ಪೃಶ್ಯತೆಯನ್ನು ಅನುಭವಿಸಬಾರದು ಎನ್ನುವ ನಿಟ್ಟಿನಲ್ಲಿ ಛಲ ಬೀಡದೇ ನಿರಂತರ ಅಧ್ಯಯನ ನಡೆಸಿ ಜಗತ್ತೆ ನಿಬ್ಬೆರಗಾಗುವಂತೆ ಇಡಿ ಜಗತ್ತಿಗೆ ಮಾದರಿ ಸಂವಿಧಾನ ರಚನೆ ಮಾಡಿದ್ದಾರೆ.
ನಿಜಕ್ಕೂ ಇವರನ್ನು ಸಮಾಜಕ್ಕೆ ಸಿಮೀತಗೊಳಿಸದೇ ಎಲ್ಲಾ ವರ್ಗಕ್ಕೂ ಇವರ ಆದರ್ಶ ಮುಖ್ಯವಾಗಿರಬೇಕು ಎಂದರು.ಶಿಕ್ಷಣ, ಸಂಘಟನೆ, ಹೋರಾಟಗಳ ಮೂಲಕ ನಮ್ಮ ಬದುಕನ್ನು ನಾವು ಕಟ್ಟಿಕೊಳ್ಳಬೇಕು ಎನ್ನುವ ತತ್ವವನ್ನು ಸಾರಿದ ಮಹಾನ್ ನಾಯಕರು ಅಂಬೇಡ್ಕರ್ ಅವರು ಎಂದರು.ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡದ ಜನಾಂಗದವರಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಉತ್ತಮ ಸೌಲಭ್ಯಗಳಿದ್ದು ಅವುಗಳನ್ನು ಸಧ್ಬಳಕೆ ಮಾಡಿಕೊಂಡು ಸಮಾಜದವರು ಮುಖ್ಯವಾಹಿನಿಗೆ ಬರಬೇಕು ಎಂದು ಕರೆ ನೀಡಿದರು.ಕಾರ್ಯಕ್ರಮದಲ್ಲಿ ದಲಿತ ಮುಖಂಡ ಶರಣಪ್ಪ ಚಲವಾದಿ ಅಂಬೇಡ್ಕರ್ ಗೀತೆಯನ್ನು ಪ್ರಸ್ತುತಪಡಿಸಿದರು.ಮಾಜಿ ಸಚಿವ ಹಾಲಪ್ಪ ಆಚಾರ ಪೂಜೆಯನ್ನು ಸಮರ್ಿಸುವ ಮೂಲಕ ಮಾಲಾರೆ್ಣ ನೆರವೇರಿಸಿದರು.ಈ ಸಂದರ್ಭದಲ್ಲಿ ಮುಖಂಡರಾದ ಮಲಿಯಪ್ಪ ಅಣ್ಣಿಗೇರಿ, ನಿಂಗಪ್ಪ ಗೊರ್ಲೆಕೊಪ್ಪ, ಯಲ್ಲಪ್ಪ ಕಲ್ಮನಿ, ಪರಶುರಾಂ ಸಕ್ರಣ್ಣವರ್, ನಾಗಪ್ಪ ಕಲ್ಮನಿ, ರಾಘವೇಂದ್ರ ಕಾತರಕಿ, ಲಕ್ಷ್ಮಣ ಬಾರಿಗಿಡದ, ಪ್ರಶಾಂತ ಆರಬೆರಳಿನ, ಮಹಾಂತೇಶ ಜಂಗ್ಲಿ, ವೇಂಕಟೇಶ, ಯಮನೂರ್ಪ ಗೊರ್ಲೆಕೊಪ್ಪ, ಬಸವರಾಜ ಆರಬೆರಳಿನ, ಮೊಕ್ಷಮ್ಮ ಕೊಡ್ಲಿ, ಶ್ವೇತಾ ಚಿಕೇನಕೊಪ್ಪ, ಲಲಿತಾ ಮುಂದಲಮನಿ, ಹುಸೇನಬೀ ಗೌಡ್ರ ಸೇರಿದಂತೆ ಸಮಾಜದ ಮುಖಂಡರು, ಯುವಕರು, ಮಹಿಳೆಯರು ಇನ್ನಿತರರು ಉಪಸ್ಥಿತರಿದ್ದರು.