ರಾಣಿಬೆನ್ನೂರ: ಬಡವರ ಬಾಳಿಗೆ ಬೆಳಕಾಗಲು ಇದ್ದವರು, ಅಭಿರುಚಿ ಹೊಂದಿದವರು ಇಲ್ಲದವರಿಗೆ ಕಣ್ಣು ದಾನ ನೀಡುವುದರ ಮೂಲಕ ನಿಜವಾದ ಮಾನವೀಯತೆಯನ್ನು ಮೆರೆಯಬೇಕು ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ಬಸವರಾಜ ಬಡಿಗೇರ ಹೇಳಿದರು.
ನಗರದ ಮೇಡ್ಲೇರಿ ರಸ್ತೆಯ ಲಯನ್ಸ್ ಶಾಲೆಯ ಆವರಣದಲ್ಲಿ ಶನಿವಾರ ಲಯನ್ಸ್, ಲಯನೆಸ್ ಮತ್ತು ಲಿಯೋ ಕ್ಲಬ್ಸ್, ಶ್ರೀ ಕಂಚಿಕಾಮ ಕೋಟೆ ಮೆಡಿಕಲ್ ಟ್ರಸ್ಟ್, ಶಂಕರ ಕಣ್ಣಿನ ಆಸ್ಪತ್ರೆ ಶಿವಮೊಗ್ಗ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಅಂಧತ್ವ ನಿವಾರಣಾ ಸಂಸ್ಥೆ ಹಾವೇರಿ, ಜಿಲ್ಲಾ ಆರೋಗ್ಯ ಮತ್ತು ಜಿಲ್ಲಾ ನೇತ್ರ ಸಂಚಾರಿ ಘಟಕ ಹಾವೇರಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಬೃಹತ್ ಉಚಿತ ನೇತ್ರ ತಪಾಸಣೆ ಮತ್ತು ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ವರೂ ಕಣ್ಣಿನ ಬಗ್ಗೆ ಹೆಚ್ಚಿನ ಜಾಗರೂಕತೆಯ ಜೊತೆಗೆ ದಾನ ನೀಡುವಲ್ಲಿಯೂ ಮುಂದಾಗುವುದರ ಮೂಲಕ ಇತರರನ್ನು ದಾನ ನೀಡಲು ಪ್ರೇರೇಪಿಸಬೇಕು,.
ತಮ್ಮ ಅಕಾಲಿಕ ಜೀವದ ಮಧ್ಯೆಯೂ ಇಂತಹ ಪರೋಪಕಾರ ಮಾಡಿದರೆ ಜೀವನ ಮುಕ್ತಿಯ ಜೊತೆಗೆ ಇತರರಿಗೂ ನೋಡುವ ಭಾಗ್ಯ ನೀಡಿದ ಮಹಾನ್ ಕೀತರ್ಿ ನಿಮ್ಮದಾಗುತ್ತದೆ ಎಂದರು.
ನೇತ್ರ ಸಂಬಂಧಿ ಕಾಯಿಲೆಗೆ ತುತ್ತಾದವರು ಅನೇಕ ರೀತಿಯ ತೊಂದರೆ ಅನುಭವಿಸುತ್ತಾರೆ, ಆದಕಾರಣ ಇಂತಹ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಸಂಘಟಿಸಿರುವುದರಿಂದ ಹೆಚ್ಚು ಜನರಿಗೆ ಅನುಕೂಲವಾಗಲಿದೆ, ಹೆಚ್ಚಾಗಿ ಮೊಬೈಲ್, ಲ್ಯಾಪ್ಟಾಪ್, ದೂರದರ್ಶನಗಳನ್ನು ನಿರಂತರವಾಗಿ ವೀಕ್ಷಿಸುತ್ತಿರುವದರಿಂದ ಕಣ್ಣುಗಳಲ್ಲಿ ಬಹು ಬೇಗನೆ ದೋಷ ಕಾಣಿಸಿಕೊಳ್ಳಬಹುದು ಎಂದರು.
ಸ್ವಾಕರವೇ ರಾಜ್ಯಾಧ್ಯಕ್ಷ ನಿತ್ಯಾನಂದ ಕುಂದಾಪುರ, ವಿನೋದ ಜಂಬಗಿ, ಪ್ರೊ. ಬಿ.ಬಿ ನಂದ್ಯಾಲ ಮಾತನಾಡಿದರು. ಶಂಕರ ನಾಯಕ, ಡಾ| ಸೋಮಶೇಖರ ಸಣ್ಣಮನಿಮ, ಡಾ| ಚರಣರಾಜ ಚೌದರಿ, ಡಾ| ಲಕ್ಷ್ಮೀ ನೇತ್ರ ತಪಾಸಣೆ ನಡೆಸಿ ಸೂಕ್ತ ಸಲಹೆ ನೀಡಿದರು. ಶಿವಪ್ಪ ಗುರಿಕಾರ, ರಜನಿ ಕುಲಕಣರ್ಿ, ಎಮ್.ಹೆಚ್ ಪಾಟೀಲ ಸೇರಿದಂತೆ ಮತ್ತಿತರರು ಇದ್ದರು.
ಇದೇ ಸಂದರ್ಭದಲ್ಲಿ 350 ಕ್ಕೂ ಹೆಚ್ಚು ಶಿಬಿರಾಥರ್ಿಗಳ ಕಣ್ಣಿನ ಪೊರೆ ತಪಾಸಣೆ ನಡೆಸಲಾಯಿತು, ಅವರಲ್ಲಿ 124 ಶಿಬಿರಾಥರ್ಿಗಳು ಶಸ್ತ್ರ ಚಿಕಿತ್ಸೆಗೆ ಅಯ್ಕೆಯಾದರು, ಅವರನ್ನು ಶಿವಮೊಗ್ಗ ಶಂಕರ ಕಣ್ಣಿನ ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು.