ಹುಬ್ಬಳ್ಳಿ 09: ಡೊನ್ ಬೊಸ್ಕೊ ಆಂಗ್ಲ ಮಾಧ್ಯಮ ಶಾಲೆ, ಸುತಗಟ್ಟಿ, ನವನಗರ, ಹುಬ್ಬಳ್ಳಿ ಇಲ್ಲಿನ ವಾಷರ್ಿಕ ಕ್ರೀಡಾ ಕೂಟವನ್ನು ದಿನಾಂಕ 07-12-2019 ಶನಿವಾರದಂದು ಆಯೋಜಿಸಲಾಗಿತ್ತು. ಕ್ರೀಡಾ ಕೂಟದ ಅಧ್ಯಕ್ಷ ಸ್ಥಾನವನ್ನು ಸಂಸ್ಥೆಯ ವ್ಯವಸ್ಥಾಪಕರಾದ ಫಾ. ಪೀಟರ್ ಪಿಂಟೊ ವಹಿಸಿಕೊಂಡಿದ್ದರು. ಕ್ರೀಡಾ ಕೂಟಕ್ಕೆ ಮುಖ್ಯ ಅತಿಥಿ ಸ್ಥಾನವನ್ನು ನವನಗರ ಪೋಲಿಸ್ ಠಾಣೆಯ ಪಿ.ಎಸ್.ಐ ಶ್ರೀ ಎಸ್. ಚಿಕ್ಕಣ್ಣಗೌಡ್ರ ವಹಿಸಿಕೊಂಡಿದ್ದರು. ಅತಿಥಿಗಳಾಗಿ ಬೆಳಗಾಮ್ ಕಥೊಲಿಕ್ ಡಯಸೆಜಿನ ವಿಕಾರ್ ಜನರಲ್ ಪಾ. ಪಿಲಿಪ್ ಕುಟ್ಟಿ ಜೋಸೆಫ್, ಸಿವಿಲ್ ಹಾಗೂ ಎಲೆಕ್ಟ್ರಿಕ್ ಕಾಂಟ್ರೆಕ್ಟರ್ ಉದ್ಯಮಿ ಶ್ರೀ ಸುಧಿರ್, ಕಪಿತಾನಿಯೊ ಕಾನ್ವೆಂಟ್ ಇಲ್ಲಿನ ಸುಪೀರಿಯರ್ ಸಿಸ್ಟರ್ ಐರಿನ್ ಡಿ'ಸಿಲ್ವ ಆಗಮಿಸಿದ್ದರು. ಇವರೊಂದಿಗೆ ಶಾಲಾ ಸಹ-ವ್ಯವಸ್ಥಾಪಕರಾದ ಫಾ. ರೇಮಂಡ್ ಲೊಪೆಜ್, ಪ್ರಾಂಶುಪಾಲರಾದ ಫಾ. ಪ್ಯಾಟ್ರಿಕ್ ಡಯಾಸ್, ವೇದಿಕೆಯಲ್ಲಿ ಉಪಸ್ಥಿತರಿದ್ದರು. ದೀಪ ಬೆಳಗಿಸುವುದರ ಮೂಲಕ ಕ್ರೀಡಾಕೂಟವನ್ನು ಉದ್ಘಾಟಿಸಲಾಯಿತು. ಮುಖ್ಯ ಅತಿಥಿಗಳು ಬಲೂನಗಳನ್ನು ಆಕಾಶಕ್ಕೆ ಹಾರಿಸುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಮಕ್ಕಳಿಂದ ಆಕರ್ಶಕ ಪಥಚಲನೆ ನಡೆಯಿತು. ಶಾಲೆಯ ನಾಲ್ಕು ತಂಡಗಳಿಂದ ವಿವಿಧ ಕವಾಯತುಗಳನ್ನು ಹಮ್ಮಿಕೊಳ್ಳಲಾಗಿತ್ತು. ನವನಗರ ಪೋಲಿಸ್ ಠಾಣೆಯ ಪಿ.ಎಸ್.ಐ ಶ್ರೀ ಎಸ್. ಚಿಕ್ಕಣ್ಣಗೌಡ್ರ ರವರು ಮಾತನಾಡಿ ''ವಿದ್ಯೆ ಮನುಷ್ಯನ ಜೀವನ ರೂಪಿಸುತ್ತದೆ. ಆದರೆ ಕ್ರೀಡೆಯು ರೂಪಿಸಿದ ಜೀವನವನ್ನು ದೈಹಿಕವಾಗಿಯೂ, ಮಾನಸಿಕವಾಗಿಯೂ ಬಲಿಷ್ಟಗೊಳಿಸುತ್ತದೆ'' ಎಂಬ ಸಂದೇಶ ನೀಡಿದರು. ಎಲ್ಲಾ ಮಕ್ಕಳು ಕ್ರೀಡೆಯಲ್ಲಿ ಪಾಲ್ಗೊಂಡರು. ಜಯ ಗಳಿಸಿದ ಮಕ್ಕಳಿಗೆ ಪದಕ ಮತ್ತು ಪ್ರಶಸ್ತಿ ಪತ್ರಗಳನ್ನು ನೀಡಲಾತು. ಪ್ರಾಂಶುಪಾಲರಾದ ಫಾ. ಪ್ಯಾಟ್ರಿಕ್ ಡಯಾಸ್ ಅವರ ಮಾರ್ಗದರ್ಶನದಲ್ಲಿ ಹಾಗೂ ಸಂಸ್ಥೆಯ ಎಲ್ಲಾ ಸಿಬ್ಬಂದಿಗಳ ಪರಿಶ್ರಮದಿಂದ ಸಂಸ್ಥೆಯ ವಾಷರ್ಿಕ ಕ್ರೀಡಾಕೂಟವು ಯಶಸ್ವಯಾಗಿ ನಡೆಯಿತು.