ದೇವಸ್ಥಾನ ಧ್ವಂಸ ಪ್ರತಿಭಟಿಸಿ ಮನವಿ

ಹಾವೇರಿ : ಕಲಬುಗರ್ಿಯ ವಿಮಾನ ನಿಲ್ದಾಣ ಉದ್ಘಾಟನಾ ನೆಪದಲ್ಲಿ ಸಂತ ಸೇವಾಲಾಲ ಮಹಾರಾಜರ ಮತ್ತು  ಮರಿಯಮ್ಮ ದೇವಿ ದೇವಸ್ಥಾನ ಧ್ವಂಸ ಗೊಳಿಸಿರುವ ಘಟನೆಯನ್ನು ಖಂಡಿಸಿ ಕನರ್ಾಟಕ ಕ್ಷತ್ರಿಯ ಒಕ್ಕೂಟದ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ಪ್ರತಿಭಟಿಸಿ ಜಿಲ್ಲಾಧಿಕಾರಿಗಳ ಮೂಲಕ ಸಿಎಂ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು.

         ಕೆಕೆಓ ಯುವ ಘಟಕದ ಜಿಲ್ಲಾಧ್ಯಕ್ಷರಾದ ಜಿಲ್ಲಾ ಅಧ್ಯಕ್ಷ ಜಯರಾಮ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ ಕ್ಷತ್ರಿಯ ಬಂಜಾರ ಸಮುದಾಯದ ದೇವಾಲಯಕ್ಕೆ ಧಕ್ಕೆ ಆಗಿದ್ದರಿಂದ ತುಂಬಾ ನೋವಾಗಿದೆ. ಈ ಹಿಂದೆ ಅಧಿಕಾರಿಗಳು ದೇವಾಲಯಕ್ಕೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರೂ ಆದರೂ ಬೇಜವಾಬ್ದಾರಿಯಿಂದ ಸಮುದಾಯದ ಜನರ ಭಾವನೆಗೆ ನೋವಾಗಿದೆ. ಕೊಡಲೇ ಎರಡು ದೇವಾಲಯಗಳನ್ನು ಶ್ರೀಘ ಪುನರ್ ನಿಮರ್ಿಸಬೇಕು. ಬಾಂಜಾರ ಸಮುದಾಯದ ಇತರ ಬೇಡಿಕೆಗಳನ್ನು ಈಡೇರಿಸುತ್ತೇವೆ ಎಂದು ಭರವಸೆ ನೀಡಿದರೂ ಇನ್ನು ಈಡೇರಿಲ್ಲ.ನಮ್ಮ ಬೇಡಿಕೆಗಳ ಬಗ್ಗೆ ಸಕರ್ಾರ ಕ್ರಮಕೈಗೊಳ್ಳಬೇಕೆಂದು ಎಂದು ಒತ್ತಾಯಿಸಿದರು.

       ಈ ಸಂದರ್ಭದಲ್ಲಿ ಮುಖಂಡರಾದ ನಾಗರಾಜ ಜೋರಾಪುರಿ, ಈರಣ್ಣ ಲಮಾಣಿ, ರಘು ಚವ್ಹಾಣ, ಪ್ರಮೋದ,ಕೆಕೆಓ ವಿವಿಧ ಘಟಕಗಳ, ಪದಾಧಿಕಾರಿಗಳು ಹಾಗೂ ಸಮುದಾಯದವರು ಪಾಲ್ಗೊಂಡಿದ್ದರು.