ಆಕ್ರಮ ನಿವೇಶನ ಹಕ್ಕು ಪತ್ರ ನೀಡುವಂತೆ ಒತ್ತಾಯಿಸಿ ಡಿಸಿಗೆ ಮನವಿ

ಹಾವೇರಿ೦೪: ತಾಲೂಕಿನ ದೇವಗಿರಿ ಗ್ರಾಮದ ಗಿರಿಮಲ್ಲಪ್ಪ ಗುಡ್ಡದಲ್ಲಿ ವಾಸವಾಗಿರುವ ನೂರಾರು ಬಡ ಕುಟುಂಬವರಿಗೆ ಆಕ್ರಮ-ಸಕ್ರಮದಡಿಯಲ್ಲಿ ನಿವೇಶನಕ್ಕೆ ಹಕ್ಕುಪತ್ರ ನೀಡುಕ್ಕೆ  ಅರ್ಜಿ ಸಲ್ಲಿಸಿ ಹತ್ತು ವರ್ಷ ಕಳೆದರೂ ಜಿಲ್ಲಾಡಳಿತ ಹಕ್ಕುಪತ್ರಿ ನೀಡುವಲ್ಲಿ  ವಿಫಲವಾಗಿದೆ ಎಂದು ಒತ್ತಾಯಿಸಿ ಕರ್ನಾಟಕ  ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕ ಘಟಕ ಹಾಗೂ ಗ್ರಾಮಸ್ಥರಿಂದ ಶಾಂತಿಯುತ ಹೋರಾಟ ನಡೆಸಲಾಯಿತು.

ಸೋಮವಾರದಂದು ದೇವಗಿರಿ ಗ್ರಾಮಸ್ಥರು ಹಾಗೂ ಕರ್ನಾಟಕ  ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕ ಘಟಕದಿಂದ ಆಕ್ರಮ ನಿವೇಶನಗಳನ್ನು ಸಕ್ರಮ ಗೊಳಿಸಿ ಹಕ್ಕುಪತ್ರಿ ನೀಡುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ನಂತರ ಮಾನತನಾಡಿದ ರೈತ ಸಂಘದ ತಾಲೂಕಾಧ್ಯಕ್ಷ  ರಾಜೇಸಾಬ ತರ್ಲಗಟ್ಟಾ ಈ ಪ್ರದೇಶದಲ್ಲಿ ನಾಲ್ಕು ದಶಕದಿಂದ ಜೀವನ ಮಾಡುತ್ತಾ ಬಂದರಿಗೆ ನಿವೇಶನಕ್ಕೆ ಹಕ್ಕು ಇಲ್ಲದ ಕಾರಣ ಸರಕಾರ ಸೌಲಭ್ಯದಿಂದ ವಂಚಿತರಾಗಿದ್ದು ಸಾವಿರಾರು ಕುಟುಂಬಗಳಿಗೆ ನ್ಯಾಯ ಸಿಗದೇ ಭಯದ ವಾತಾವರಣದಲ್ಲಿ ಜೀವಿಸುತ್ತಿದ್ದಾರೆ. ಈ ಗುಡ್ಡದಲ್ಲಿರುವ ಕೆಲವರಿಗೆ ಹಕ್ಕುಪತ್ರವನ್ನು ನೀಡಲಾಗಿದೆ. ಆದರೆ ಅರ್ಹರಿಗೆ ಇನ್ನುವರೆಗೂ ಹಕ್ಕುಪತ್ರ ಸಿಕ್ಕಿಲ್ಲ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಹತ್ತು ದಿನದೊಳಗಾಗಿ ಹಕ್ಕು ಪತ್ರ ನೀಡದೇ ಹೋದರೇ ಅಹೋರಾತ್ರಿ ಧರಣಿ ಆರಂಭಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. 

ಈ ಸಂದರ್ಭದಲ್ಲಿ ಜಯಮ್ಮ ಜಾಲಗಾರ, ನಜ್ಮಾ ಸುಳ್ಳಳ್ಳಿ, ಮಂಗಳವ್ವ ಕುರವತ್ತಿ, ತಲಿತವ್ವ ರಾಯಣ್ಣನವರ, ಗಂಗವ್ವ ಬಾರ್ಕಿ  , ಲಕ್ಷ್ಮಿ ದಾದಾರಾಮನವರ, ಇನ್ನು ಮುಂತಾದವರು ಹಾಜರಿದ್ದರು.