ವಿಜಯಪುರ ಏ.19: ಅನಾಮಧೇಯ ಅಂದಾಜು 45 ವಯಸ್ಸಿನ ವ್ಯಕ್ತಿ ಶವ ಪತ್ತೆಯಾಗಿರುವ ಕುರಿತ ವಿಜಯಪುರ ಗೋಲಗುಮ್ಮಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅನಾಮಧೇಯ ವ್ಯಕ್ತಿ ವಾರಸುದಾರರ ಪತ್ತೆಗೆ ಸಾರ್ವಜನಿಕರಲ್ಲಿ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯ ಆಸಿಸ್ಟೆಂಟ್ ಸಬ್ ಇನ್ಸಪೆಕ್ಟರ್ ಅವರು ಮನವಿ ಮಾಡಿಕೊಂಡಿರುತ್ತಾರೆ.
ಪತ್ತೆಯಾದ ವ್ಯಕ್ತಿಯು 5.6 ಪೂಟ್ ಎತ್ತರ, ಸಾಧಾರಣ ಮೈಕಟ್ಟು, ಸಾದಾ ಗೆಂಪು ಬಣ್ಣ, ದುಂಡು ಮುಖ, ನೆಟ್ಟನೆಯ ಮೂಗು, ಕಪ್ಪು-ಬಿಳಿ ಕೂದಲು, ದಾಡಿ ಮೀಸೆ ಹೊಂದಿದ್ದು, ಕೇಸರಿ ಬಣ್ಣದ ಬಿಳಿಗೆರೆಯುಳ್ಳ ಫುಲ್ ತೋಳಿನ ಶರ್ಟ್, ನೀಲಿ ಬಣ್ಣದ ಜಿನ್ಸ್ ಪ್ಯಾಂಟ್ ಧರಿಸಿದ್ದು, ಈ ಚಹರೆಪಟ್ಟಿಯುಳ್ಳ ವ್ಯಕ್ತಿಯ ವಾರಸುದಾರರು ಪತ್ತೆಯಾದಲ್ಲಿ ಸಾರ್ವಜನಿಕರು ವಿಜಯಪುರ ಗೋಲಗುಮ್ಮಜ್ ಠಾಣೆಯ ದೂ.ನಂ 08352-250214, 08352-250252, 08352-253100, 08352-250152 ಅಥವಾ 0831-2405201 ಸಂಪರ್ಕಿಸಬಹುದು ಎಂದು ಗೋಲಗುಬಂಜ್ ಪೊಲೀಸ್ ಠಾಣೆ ಆಸಿಸ್ಟೆಂಟ್ ಸಬ್ ಇನ್ಸಪೆಕ್ಟರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.