ಯುವಕ ಕಾಣೆ ಪತ್ತೆಗೆ ಮನವಿ

Appeal to find missing youth- Bellary News

ಬಳ್ಳಾರಿ 02: ಸಿರುಗುಪ್ಪ ತಾಲ್ಲೂಕಿನ ಕುಡದರಾಳ ಗ್ರಾಮದ ನಿವಾಸಿಯಾದ ಕೆ.ಮೌನೇಶ್ ಎನ್ನುವ 21 ವರ್ಷದ ಯುವಕ ಏ.27 ರಂದು ಕಾಣೆಯಾಗಿರುವ ಕುರಿತು ಹಚ್ಚೋಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕು ಎಂದು ಸಬ್ ಇನ್ಸ್‌ ಪೆಕ್ಟರ್ ತಿಳಿಸಿದ್ದಾರೆ. 

ಚಹರೆ ಗುರುತು: 

ಅಂದಾಜು 5 ಅಡಿ ಎತ್ತರ, ಗೋಧಿ ಮೈಬಣ್ಣ, ಕೋಲುಮುಖ, ಕಪ್ಪು ಕೂದಲು, ಹಣೆಯ ಮೇಲೆ ಚಿಕ್ಕ ಗಾಯದ ಗುರುತು ಇರುತ್ತದೆ. ಕಾಣೆಯಾದ ಸಂದರ್ಭದಲ್ಲಿ ನೀಲಿ ಬಣ್ಣದ ಅಂಗಿ ಮತ್ತು ಜೀನ್ಸ್‌ ಪ್ಯಾಂಟ್ ಧರಿಸುರುತ್ತಾನೆ. ಕನ್ನಡ ಭಾಷೆ ಮಾತನಾಡುತ್ತಾನೆ.ಯುವಕನ ಬಗ್ಗೆ ಸುಳಿವು ಸಿಕ್ಕಲ್ಲಿ ಹಚ್ಚೋಳ್ಳಿ ಪೊಲೀಸ್ ಠಾಣೆಯ ದೂ.08277977477 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.