ಮರಾಠಾ ಸಮಾಜದ ಬೇಡಿಕೆ ಈಡೇರಿಸಲು ಮನವಿ

ವಿಜಯಪುರ, 11 :  ಮರಾಠಾ ಸಮಾಜದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹಾಗೂ ಬಜೆಟ್ನಲ್ಲಿ ಮರಾಠಾ ಸಮಾಜವನ್ನು ಕಡೆಗಣಿಸಿರುವುದನ್ನು ಖಂಡಿಸಿ ಮರಾಠಾ ಸಮಾಜದ ಮುಖಂಡರು ಬುಧವಾರ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ವೀರ ಶಿವಾಜಿ ಸೇನೆ ಜಿಲ್ಲಾಧ್ಯಕ್ಷರಾದ  ಸಂಗಮೇಶ ಜಾಧವ ಇವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬೀದರ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮರಾಠಾ ಸಮಾಜದ ಬಹುದಿನಗಳ ಬೇಡಿಕೆಯನ್ನು ತಾವು ಮುಖ್ಯಮಂತ್ರಿಯಾದ 24 ಗಂಟೆಯೊಳಗೆ ಈಡೇರಿಸುವುದಾಗಿ ಭರವಸೆ ನೀಡಿದ್ದರು. ಮರಾಠಾ ಸಮಾಜವನ್ನು 3ಬಿ ಪ್ರವರ್ಗದಿಂದ 2ಎಗೆ ಸೇರ್ಪಡೆ ಮಾಡುವುದಾಗಿಯೂ ವಾಗ್ದಾನ ಮಾಡಿದ್ದರು.  ಆದರೆ ಮುಖ್ಯಮಂತ್ರಿಗಳಾದ ಮೇಲೆ ತಾವು ನೀಡಿದ ಬರವಸೆಯನ್ನು ಈಡೇರಿಸಿಲ್ಲ. 2020-21 ರ ಬಜೆಟ್ನಲ್ಲಿ ಮರಾಠಾ ಸಮಾಜವನ್ನು ಕಡೆಗಣಿಸಲಾಗಿದೆ. ಇದರಿಂದ ಮರಾಠಾ ಸಮಾಜದವರಿಗೆ ತುಂಬಾ ನಿರಾಶೇಯುಂಟಾಗಿದೆ.  ಬಿಜೆಪಿ ಸರಕಾರ ಈಗಾಲಾದರೂ ಎಚ್ಚೆತ್ತುಕೊಂಡು ಮರಾಠಾ ಸಮಾಜದ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾತಯಿಸಿದರು.

ಮರಾಠಾ ಸಮಾಜದ ಮುಖಂಡರಾದ  ಮಾರುತಿ ತಾ. ನಿಕ್ಕಂ, ಸದಾಶಿವ ಚವ್ಹಾಣ, ಗಜಾನನ ಪವಾರ, ಅಂಬಾದಾಸ ಸಿಂದಗಿ, ಸಂತೋಷ ಪವಾರ, ದೀಪಕ, ಜ್ಯೋತಿಬಾ ನಿಕ್ಕಂ, ಶಂಕರ ತೊರವತ, ತುಕಾರಾಮ ನಲವಡೆ, ಪರಶುರಾಮ ಮುಳವಾಡ, ಶಿವಾಜಿ ಮಾನೆ, ತುಳಸಿರಾಮ ಸೂರ್ಯವಂಶಿ, ಭಗವಂತ ಪವಾರ ಮುಂತಾದವರು ಉಪಸ್ಥಿತರಿದ್ದರು.