ಕಲಾವಿದರು ಕಲಾಕೃತಿಗಳಲ್ಲಿ ಸಮಕಾಲಿನ ಹೊಸ ಪರಿಕಲ್ಪನೆಗಳನ್ನು ತರಬೇಕು : ಪ್ರೊ. ಡಿ. ಬಿ. ನಾಯಕ

ಶಿಗ್ಗಾವಿ09 : ಶಿಲ್ಪ ಚಿತ್ರ ವಾಸ್ತು ಶಿಲ್ಪ ಕಲೆಗಳು ಒಂದೆ ಕಾಲಕ್ಕೆ ಸೀಮಿತವಲ್ಲ ಬದಲಾವಣೆ ಜಗದ ನಿಯಮ. ಕಲೆಯು ಕಾಲಕ್ಕೆ ತಕ್ಕಂತೆ ತನ್ನ ಮಹತ್ವವನ್ನು ಉಳಿಸಿಕೊಂಡು ಬಂದಿದೆ. ಹಾಗೆ ಕಲಾವಿದರು ಕಲಾಕೃತಿಗಳಲ್ಲಿ ಸಮಕಾಲಿನ ಹೊಸ ಪರಿಕಲ್ಪನೆಗಳನ್ನು ತರಬೇಕು ಎಂದು ಕನರ್ಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಡಿ. ಬಿ. ನಾಯಕ ಇವರು ದೃಶ್ಯಕಲೆ ಹೊಸ ಸಾಧ್ಯತೆಗಳು ಹೊಸ ಪರಿಕಲ್ಪನೆಗಳು ರಾಜ್ಯಮಟ್ಟದ ವಿಚಾರ ಸಂಕಿರಣ ಸಮಾರಂಭವನ್ನು ಮಾ.07 ರಂದು ಮಲ್ಲಿಗೆ ದಂಡೆ ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡುತ್ತಾ ಪ್ರಯೋಜನಕ್ಕೆ ಬಾರದ ವಸ್ತುಗಳು, ಹಳೆ ಬಟ್ಟೆ, ಗಾಜಿನ ಚೂರುಗಳು, ಕಲ್ಲಿನ ಚೂರುಗಳು ಕಟ್ಟಿಗೆ ತುಂಡುಗಳು ಮುಂತಾದ ವಸ್ತುಗಳನ್ನು ಬಳಸಿ ಅದ್ಭುತವಾದ ಕಲಾಕೃತಿಗಳು ಕಲಾವಿದ ತಯಾರಿಸುತ್ತಾರೆ. ಕಲಾವಿದರು ಕಲ್ಪನೆ ಯಾರಿಗೂ ನಿಲುಕಲಾರದ್ದು, ಕಲಾವಿದರ ಹೊಸ ಕಲ್ಪನೆಗಳನ್ನು ಹೊಸ ಆಲೋಚನೆಗಳನ್ನು ಬೆಳಸಿಕೊಳ್ಳಬೇಕು ಮತ್ತು ಕಲಾಕೃತಿಗಳ ಮೂಲಕ ತಮ್ಮ ಕಲೆಯ ಮೂಲಕ ಹೊಸ ಸಂದೇಶ ನೀಡಬೇಕು ಎಂದು ಹೇಳಿದರು. 

ಮುಖ್ಯ ಅತಿಥಿಗಳಾಗಿ ಭಾಗವಹಿಸಿ ರವಿಕುಮಾರ ಕಾಶಿ ಇವರು ಮಾತನಾಡುತ್ತಾ ಕಲಾವಿದರು ಕಣ್ಣಿಗೆ ಕಾಣದೆ ಇರುವುದನ್ನು ಹೇಗೆ ತೋರಿಸಬೇಕು ಎಂಬುದನ್ನು ಚಿಂತನೆ ಮಾಡಬೇಕು. ಕಲಾವಿದನ ಚಿಂತನೆ ಹೊಸದೊಂದು ವಿಷಯವನ್ನು ಹುಟ್ಟು ಹಾಕಿ ಸೃಷ್ಟಿಸುವ ಕಲಾಕೃತಿಗಳ ರಚಿಸುವಂತಿರಬೇಕು ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ ಮಹೇಂದ್ರ ಡಿ, ಲಲಿತಕಲಾ ಅಕಾಡೆಮಿ ಅಧ್ಯಕ್ಷರು ಮಾತನಾಡುತ್ತಾ ಚಿತತ್ರಕಲೆಗೆ ಬಹಳ ದೊಡ್ಡ ಇತಿಹಾಸವಿದೆ. ಅಂಗನವಾಡಿಯಲ್ಲಿ ಮಕ್ಕಳಿಗೆ ಚಿತ್ರಗಳ ಮೂಲಕ ಶಿಕ್ಷಣ ನೀಡಬೇಕು. ಇವತ್ತಿನ ಹೊಸ ಶಿಕ್ಷಣ ನಿಯಮಗಳು ಚಿತ್ರಕಲೆ ಹೆಚ್ಚಿನ ಆದ್ಯತೆ ನೀಡಬೇಕು ಎಂಬುದು ಸಾಬೀತಾಗುತ್ತದೆ. ಕಲಾವಿದರು ಕಲಾಕೃತಿಗಳನ್ನು ರಚಿಸಿ ಮಾರಾಟ ಮಾಡುವುದೊಂದೇ ಆಲೋಚನೆ ಮಾಡಬಾರದು. ಕಲಾಕೃತಿಗಳು ಹೊಸ ವಿಷಯಗಳನ್ನು ಹೇಳುವಂತೆ ರಚನೆಯಾಗಬೇಕು ಎಂದು ಹೇಳಿದರು.

ವೇದಿಕೆಯಲ್ಲಿ ಶಹಜಹಾನ ಮುದಕವಿ ಸಹಾಯಕ ಕುಲಸಚಿವರು , ಜಯಾನಂದ ಮಾದರ ಸದಸ್ಯರು ಕನರ್ಾಟಕ ಲಲಿತಕಲಾ ಅಕಾಡೆಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೌಮ್ಯ ಕೋಟೆಮನೆ ಪ್ರಾಥರ್ಿಸಿದರು. ರಾಜ್ಯದ ವಿವಿಧ ಚಿತ್ರಕಲಾ ಮಹಾವಿದ್ಯಾಲಯದ ವಿದ್ಯಾಥರ್ಿಗಳು ಭಾಗವಹಿಸಿದ್ದರು.

ಮಹಿಳೆ ಅಬಲೆಯಲ್ಲ, ಸಬಲೆ ಎಂದು ಸಾಬೀತು ಪಡೆಸಿದ್ದಾಳೆ: ದೇಸಾಯಿ